ಶಿವಮೊಗ್ಗ: ಸವಳಂಗ ರಸ್ತೆಯ ಕಾವೇರಿ ಸೆರಾಮಿಕ್ ಅಂಗಡಿಯಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದಿದ್ದು, 87 ಸಾವಿರ ರೂ. ನಗದನ್ನು ಕಳ್ಳರು ದೋಚಿದ್ದಾರೆ.
ನಿನ್ನೆ ರಾತ್ರಿ ಘಟನೆ ನಡೆದಿದ್ದು, ಲಾಕ್ ಓಪನ್ ಮಾಡಿರುವ ಕಳ್ಳರು ಅಂಗಡಿಯಲ್ಲಿದ್ದ ಸುಮಾರು 87 ಸಾವಿರ ರೂ. ಹಣವನ್ನು ದೋಚಿದ್ದಾರೆ.
ಲಾಕ್ ಓಪನ್ ಮಾಡಿ ಕಳ್ಳತನ ಮಾಡಿರುವ ಹಿನ್ನೆಲೆಯಲ್ಲಿ ಗೊತ್ತಿರುವ ವ್ಯಕ್ತಿಗಳೇ ಮಾಡಿದ್ದಾರೆ ಎಂದು ಶಂಕಿಸಲಾಗಿದ್ದು, ಪ್ರಕರಣ ದಾಖಲಾಗಿದೆ.
















