ಕುರುಕ್ಷೇತ್ರ: ನನ್ನನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂದವರಿಗೆ ಕಾಂಗ್ರೆಸ್ ಬೆಂಬಲಿಸಿ ಟಿಕೇಟ್ ನೀಡಿದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿರುವ ಅವರು, ನನ್ನನ್ನು ಕಾಂಗ್ರೆಸ್’ನವರು ಅವರ ಪ್ರೀತಿಯ ನಿಘಂಟನ್ನು ಬಳಸಿ ಮೂರ್ಖ, ಕ್ರಿಮಿ, ನೀಚ ವ್ಯಕ್ತಿ, ಹುಚ್ಚು ನಾಯಿ, ಹಿಟ್ಲರ್, ಮುಸೋಲಿನಿ, ಗಡಾಫಿ ಎಂದೆಲ್ಲಾ ಕರೆದಿದ್ದರು. ನನ್ನ ತಂದೆ, ತಾತನ ಬಗ್ಗೆ ಪ್ರಶ್ನೆ ಮಾಡಿದ್ದರು. ನನ್ನ ತಾಯಿಯನ್ನು ಅವಮಾನ ಮಾಡಿದ್ದರು. ಆದರೆ, ಇಂತಹವರನ್ನು ನಡೆಗಳನ್ನು ಕಾಂಗ್ರೆಸ್ ಎಂದೂ ಪ್ರಶ್ನಿಸಲಿಲ್ಲ. ಬದಲಾಗಿ, ಅವರನ್ನು ಬಂಬಲಿಸಿ ಟಿಕೇಟ್ ನೀಡಿದೆ ಎಂದು ಕಿಡಿ ಕಾರಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ನಂ.1 ಭ್ರಷ್ಟ ಎಂಬ ತಮ್ಮ ಹೇಳಿಕೆಗೆ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರ ದ್ವೇಷಕ್ಕೆ ಪ್ರತಿಯಾಗಿ ನೀಡುವುದಕ್ಕೆ ನನ್ನಲ್ಲಿ ಪ್ರೀತಿ ಮಾತ್ರವೇ ಇರುವುದು ಎಂದಿದ್ದರು. ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ತಮ್ಮ ವಿರುದ್ಧ ಬಳಕೆ ಮಾಡಿರುವ ಪ್ರೀತಿಯ ನಿಘಂಟಿನ ಶಬ್ದಗಳನ್ನು ಜನತೆಗೆ ನೆನಪಿಸಿದ್ದಾರೆ.
Discussion about this post