ಅಸ್ಸಾಂ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಿನ್ನೆ ರಾತ್ರಿ ಅಸ್ಸಾಂನ ನಗೌನ್ ಜಿಲ್ಲೆಯಲ್ಲಿ ನಡೆದಿದೆ.
ವಾಯುಸೇನೆಗೆ ಸೇರಿದ ಹೆಲಿಕಾಪ್ಟರ್ ದಿಮಾಪುರದಿಂದ ನಾಗಾಲ್ಯಾಂಡ್’ಗೆ ಹಾರಾಟ ನಡೆಸುತ್ತಿತ್ತು. ಮಿಸ್ಸಾಮರಿ ಪ್ರದೇಶದಲ್ಲಿ ತೆರಳುವ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತತಕ್ಷಣವೇ ತುರ್ತು ಭೂಸ್ಪರ್ಷ ಮಾಡಿಸಲಾಯಿತು. ಹೆಲಿಕಾಪ್ಟರ್’ನಲ್ಲಿದ್ದ ಎಲ್ಲ ಸೇನಾ ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ.
ಚೀತಾ ಹೆಲಿಕಾಪ್ಟರ್ ಹೆಚ್ಚು ಕಾರ್ಯಕ್ಷಮತೆ ಹೊಂದಿರುವ ಚಾಪ್ಟರ್ ಆಗಿದ್ದು, ಇವುಗಳು ಬಹಳ ವಿಶಾಲವಾದ ತೂಕ, ಗುರುತ್ವಾಕರ್ಷಣೆಯ ಕೇಂದ್ರ ಮತ್ತು ಎತ್ತರದ ಪರಿಸ್ಥಿತಿಗಳ ಮೇಲೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಐದು ಆಸನದ ಚೀತಾ ಹೆಲಿಕಾಪ್ಟರ್ ಎಲ್ಲಾ ವಿಭಾಗಗಳ ಹೆಲಿಕಾಪ್ಟರ್’ಗಳ ನಡುವೆ ಎತ್ತರದ ಮಟ್ಟದಲ್ಲಿ ವಿಶ್ವ ದಾಖಲೆಯನ್ನು ಹೊಂದಿದೆ. ಇದು ಆರ್ಟೌಸ್ಟ್-3 ಬಿ ಟರ್ಬೊ ಶಾಫ್ಟ್ ಎಂಜಿನ್’ನಿಂದ ಹಾರಲ್ಪಡುತ್ತದೆ.
Discussion about this post