ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಜಯ ದಾಖಲಿಸಿದ್ದು, ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಭಾರೀ ಮುಖಭಂಗವಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ 223360 ಮತಗಳ ಭಾರೀ ಅಂತರದಿಂದ ಜಯ ದಾಖಲಿಸಿದ್ದಾರೆ.
ಆರಂಭದಿಂದಲೂ ಭಾರೀ ಅಂತರ ಕಾಯ್ದುಕೊಂಡು ಬಂದ ರಾಘವೇಂದ್ರ ಯಾವುದೇ ಹಂತದಲ್ಲೂ ಹಿನ್ನಡೆ ಅನುಭವಿಸಲಿಲ್ಲ. ಅಂತಿಮವಾಗಿ, ರಾಘವೇಂದ್ರ 7,29,051 ಮತಗಳನ್ನು ಪಡೆದರೆ, ಮಧು ಬಂಗಾರಪ್ಪ 5,06,345 ಮತಗಳನ್ನು ಪಡೆದರು.
ಎಲ್ಲೆಲ್ಲಿ ಲೀಡ್ ಎಷ್ಟು?
- ಸಾಗರ – 22,996
- ಸೊರಬ – 2,821
- ಬೈಂದೂರು – 73,612
- ಶಿವಮೊಗ್ಗ ನಗರ – 47,908
- ಶಿವಮೊಗ್ಗ ಗ್ರಾಮಾಂತರ – 18,126
- ಭದ್ರಾವತಿ – 5,645
- ಶಿಕಾರಿಪುರ – 21,670
- ತೀರ್ಥಹಳ್ಳಿ – 29,532
Discussion about this post