ಚಳ್ಳಕೆರೆ: ರಾಜ್ಯವು ಸತತವಾಗಿ ಬರಗಾಲಕ್ಕೆ ತುತ್ತಾಗಿದೆ. ಬರ ಪೀಡಿತ ಪ್ರದೇಶವಾದ ಚಳ್ಳಕೆರೆ ಕರ್ನಾಟಕ ರಾಜ್ಯದಲ್ಲೆ ಅತೀಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ಆದರೆ ಈ ಭಾಗದ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ರೈತರಿಗೆ ಮರಣ ಶಾಸನವಾಗಿರುವುದನ್ನು ವಿರೋಧಿ ಹಾಗೂ ಬರಗಾಲ ನೀಗಿಸುವ ಕಾಮಗಾರಿಗಳನ್ನು ಸರ್ಕಾರ ಸಮಗ್ರವಾಗಿ ಜಾರಿ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಕೆ.ಸಿ. ಶ್ರೀಕಂಠಮೂರ್ತಿ ಒತ್ತಾಯಿಸಿದ್ದಾರೆ.
ನಗರದ ನೆಹರು ವೃತ್ತದಲ್ಲಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.
ದೇಶದಲ್ಲೇ 2014ನೇ ಸಾಲಿಗಿಂತ ಮೊದಲು ಇದ್ದ ಭೂಸ್ವಾಧೀನ ಕಾಯ್ದೆ ರಿಯಲ್ ಎಸ್ಟೇಟ್ ಕುಳಗಳು ರೈತರಿಗೆ ಜಮೀನುಗಳನ್ನು ಅಕ್ರಮವಾಗಿ ಪಡೆಯಲು ಅನುಕೂಲಕರವಾಗಿತ್ತು. ಇದೇ ಸಮಯದಲ್ಲಿ ಎಸ್.ಇ.ಜೆಡ್ ಕೈಗಾರಿಕೆಗಳು ಮತ್ತು ನಗರೀಕರಣಗಳ ಹೆಸರಿನಲ್ಲಿ ದೇಶಾದ್ಯಂತ ರೈತರು ಭೂಮಿಯನ್ನು ಸ್ವಾಧೀನ ಪಡೆದುಕೊಳ್ಳುತ್ತಿದ್ದರು ಎಂದರು.

ರೈತರ ಒತ್ತಾಯಗಳು:
ಕರ್ನಾಟಕ ಸರ್ಕಾರ ರೈತರಿಗೆ ಮಾರಕವಾಗಿರುವ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ಸರ್ಕಾರ ತತಕ್ಷಣ ಕೈಬಿಟ್ಟು ಈಗ ಭೂಸ್ವಾಧೀನ ಮಾಡಿಕೊಂಡಿರುವ ಭೂಮಿಯನ್ನು ರೈತರಿಗೆ ತಕ್ಷಣ ವಾಪಸ್ಸು ಕೊಡಬೇಕು. ಮುಂಗಾರು ಹಂಗಾಮಿ ಸಮೀಪವಿದ್ದು ರೈತರಿಂದ ಕಳೆದ ವರ್ಷದಲ್ಲಿ ಕಟ್ಟಿಸಿಕೊಂಡ ಬೆಳೆವಿಮೆ ಮತ್ತು ಬೆಳೆನಷ್ಟ ಪರಿಹಾರವನ್ನು ಜೂನ್ ತಿಂಗಳ ಒಳಗೆ ನೀಡಬೇಕು. ರೈತರ ಬ್ಯಾಂಕುಗಳಲ್ಲಿ ಬಡ್ಡಿರಹಿತ ಹೊಸ ಸಾಲವನ್ನು ಕೊಡಲು ಬ್ಯಾಂಕ್’ಗಳಿಗೆ ನಿರ್ದೇಶನ ನೀಡಬೇಕು. ವೇದಾವತಿ ನದಿಯ ಮರಳು ದಂದೆ ನಡೆಸುವುದನ್ನು ಕೈಬಿಟ್ಟು ದೇಶ ರಾಜ್ಯಗಳ ಅಭಿವೃದ್ದಿಗೆ ನೀರು ಮುಖ್ಯಕಾರಣ, ತಾಲೂಕಿನ ಎಲ್ಲಾ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ತಿಮ್ಮಣ್ಣ, ರೆಡ್ಡಿನಾಯ್ಕ್, ರಾಜಣ್ಣ, ಎರ್ರಿಸ್ವಾಮಿ, ವಲಸೆ ರುದ್ರಪ್ಪರೆಡ್ಡಿ, ದೊಡ್ಡುಳ್ಳಾರ್ತಿ ತಿಪ್ಪೇಸ್ವಾಮಿ, ಅಶ್ವತ್ ರೆಡ್ಡಿ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)

















