ಪ್ರತೀ ನಿತ್ಯ ಪತ್ರಿಕೆಗಳಲ್ಲಿ ಅಕ್ರಮ ಗೋ ಸಾಗಾಟದ ಬಗ್ಗೆ ನಾವು ಓದುತ್ತಿರುತ್ತೇವೆ. ಇಡೀ ಭಾರತ ವ್ಯಾಪಿ ಈ ಗೋಹತ್ಯೆಯಂತಹ ಅನಾಚಾರ ನಡೆಯುತ್ತಿರುತ್ತದೆ. ಇದನ್ನು ನಿಷೇಧಿಸುವ ಕಾನೂನು ಮಾಡುವುದಿದ್ದರೂ ಕೆಲ ಸ್ಥಾಪಿತ ಹಿತಾಸಕ್ತಿಗಳು ಅಡ್ಡಿ ಮಾಡುತ್ತವೆ.
ಈಗಾಗಲೇ ಭಾರತದ ಕೆಲ ರಾಜ್ಯ ಸರಕಾರಗಳು ’ಗೋಹತ್ಯೆ’ಯನ್ನು ನಿಷೇಧಿಸಿದೆ. ಆದರೆ ಅದು ಕೇವಲ ಆ ಪಕ್ಷದ ಸರಕಾರ ಇರುವಲ್ಲಿಯವರೆಗೆ ಮಾತ್ರ ಇರಬಹುದು ಎಂದೆನಿಸುತ್ತದೆ. ಮುಂದೇನಾದರೂ ಗೋ ಹತ್ಯೆಯನ್ನು ಬೆಂಬಲಿಸುವ ಪಕ್ಷಗಳ ಸರಕಾರ ಬಂದರೆ ಈ ಕಾನೂನು ಮಣ್ಣು ಪಾಲಾದೀತು.
ಇಂತಹ ನಿರಂತರ ಪಾಪಕಾರ್ಯ ನಿಲ್ಲಬೇಕಾದರೆ ಗೋ ಹಂತಕರಿಗೂ ಮಾನಸಿಕವಾಗಿ ‘ಪಾಪ ಕಾರ್ಯ’ ಎಂದು ತಿಳುವಳಿಕೆ ಬರಬೇಕಷ್ಟೆ ಅಥವಾ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಕೇಂದ್ರ ಸರಕಾರ ಘೋಷಿಸಿದರೆ ಮಾತ್ರ ಸಂಪೂರ್ಣವಾಗಿ ಗೋ ಹತ್ಯೆ ನಿಲ್ಲಲೇಬೇಕು.

ಶಾಸನ ಬರಬೇಕಾದರೆ ಎಲ್ಲಾ ಜನ ಪ್ರತಿನಿಧಿ ಸಂಸದರ ಒಮ್ಮತದ ಅಭಿಪ್ರಾಯಬೇಕು. ಒಮ್ಮತದಂತಹ ಅಂತಹ ಅಭಿಪ್ರಾಯ ಬರಬೇಕಾದರೆ ಆ ಪ್ರತಿನಿಧಿಗಳನ್ನು ಆರಿಸಿ ಕಳುಹಿಸುವ ಪ್ರಜೆಗಳಿಗೂ ಗೋವಿನ ಮಹತ್ವದ ಅರಿವು ಆಗಲೇಬೇಕು. ಒಬ್ಬ ದೇಶದ ಗಡಿ ಕಾಯುವ ಸೈನಿಕನ ಮೇಲೆ ಅಪಾರ ಭಕ್ತಿ ಗೌರವಗಳು ಬರುವುದು ಆತನ ಮಹತ್ವ ಅರಿತಿರುವುದರಿಂದ. ಮಾತಾ ಪಿತೃಗಳ ಮೇಲೆ ಭಕ್ತಿ ಗೌರವಗಳು ಬರುವುದು ಅವರ ಮಹತ್ವ ತಿಳಿದಿರುವುದರಿಂದ. ಹಾಗೆಯೇ ಗೋವಿನ ತಿಳಿದಾಗ ಅದರ ರಕ್ಷಣೆಗೆ ಮುಂದಾಗುತ್ತಾರೆ.
ಗೋವಿನ ಮಹತ್ವದಲ್ಲಿ ಎರಡು ರೀತಿಯ ಚಿಂತನೆಗಳಿವೆ. ಮೊದಲನೆಯದ್ದು ಗೋಚರದಲ್ಲಿ ಕಾಣುವ ಮಹತ್ವ. ಎರಡನೆಯದ್ದು ಅಲೌಕಿಕವಾದ ಪಾರಮಾರ್ಥಿಕವಾದ ಅಗೋಚರ ಮಹತ್ವ.
ಗೋಚರದಲ್ಲಿ ಕಾಣುವ ವಿಶೇಷತೆ:
ಗೋವು ಹಾಲುಣಿಸಿ ನಮ್ಮನ್ನು ಸಾಕುತ್ತದೆ. ಗೋಭಕ್ಷಕ ವಂಶಸ್ಥರಿಗೂ ಬೇಧ ಮಾಡದ ಕರುಣಾಮಯಿ ಈ ಗೋಮಾತೆ. ಹೊರಗಡೆ ಎಲ್ಲವನ್ನೂ ತಿಂದು ನಮಗೆ ನೀಡುವ ಕ್ಷೀರವು ಪರಿಶುದ್ಧವಾದ ಅಮೃತವಾಗಿರುತ್ತದೆ. ಇಂತಹ ಪರಿಶುದ್ಧತೆಗೆ ಕಣ್ಣಿಗೆ ಕಾಣದಂತಹ ಪಾರಮಾರ್ಥಿಕತೆಗಳಿವೆ. ಹೊಡೆದರೂ, ಹಿಂಸಿಸಿದರೂ ಏನೋ ಕೆಲವೊಮ್ಮೆ ಭಯದಿಂದ ಹಾಲು ನೀಡದೆ ಇರಬಹುದೇ ಹೊರತು, ಮಾನವನ ಹಾಗೇ ದ್ವೇಷ ಮತ್ಸರದಿಂದ ಹಾಲು ನೀಡದೆ ಇರುವುದಿಲ್ಲ.

ರೈತನ ಮಿತ್ರ ಗೋವು:
ರೈತನ ಮಿತ್ರನೇ ಗೋವು. ಹೊಲವನ್ನು ಹೂಡಲು, ಸರಕು ಸಾಗಾಟಕ್ಕೆ ಎತ್ತಿನ ಗಾಡಿ ಇತ್ಯಾದಿ ಉಪಯೋಗವಾಗುತ್ತದೆ ಈ ಗೋ ಸಂತತಿ. ಇಂತಹ ಕಣ್ಣಿಗೆ ಕಾಣುವ ಉಪಕಾರಗಳನ್ನು ಮರೆತು ಗೋವನ್ನು ಕಟುಕರಿಗೆ ಕೊಡುವುದು, ಕಟುಕರು ಗೋ ಹತ್ಯೆ ಮಾಡುವುದು ಮಹಾ ಪಾಪಕಾರ್ಯವೇ ಆಗುತ್ತದೆ. ತನ್ನ ಹೆತ್ತ ತಾಯಿಯು ದುರ್ಬಲಳು, ಇನ್ನೇನು ಕೆಲಸ ಮಾಡಲು ಅನರ್ಹಳು, ರೋಗಿಷ್ಟಳು ಎಂದು ಅವಳನ್ನು ವಧೆ ಮಾಡಲು ಹೇಗೆ ಮನಸ್ಸು ಬರುವುದಿಲ್ಲವೋ ಹಾಗೆಯೇ ಈ ಗೋಮಾತೆಯೂ ಮಾತೃ ಸಮಾನಳು. ಅಂತಹ ತಾಯಿಯನ್ನು ವಧಿಸಿ ಮುಕ್ಕಲು ಈ ಪಾಪಿಗಳಿಗೆ ಹೇಗೆ ಮನಸ್ಸಾದರೂ ಬರುತ್ತೋ ತಿಳಿಯದು. ಬಹುಷಃ ಅವಳ ಮಹತ್ವ ತಿಳಿಯದ ಕೊರತೆಗಳಿರಬಹುದು.
ಪಾರಮಾರ್ಥಿಕ ಸತ್ಯಗಳು:
ಗೋವಿನ ಮೇಲೆ ಇಷ್ಟು ಪೂಜ್ಯ ಭಾವನೆ ಬರಲು ಅನೇಕ ಅಲೌಕಿಕವಾದ ಕಾರಣಗಳೂ ಇವೆ. ಲೌಕಿದಲ್ಲಿರುವುದು ಕೇವಲ ಶೇಕಡಾ ಒಂದು ಮಾತ್ರ. ಉಳಿದದ್ದು ಪಾರಮಾರ್ಥಿಕದಲ್ಲಿದೆ. ಇಷ್ಟು ಮಹತ್ವ ಇರುವುದರಿಂದಲೇ ಗೋ ಕ್ಷೀರವು ಇಷ್ಟು ಪಾವನವಾಗಿದೆ. ಇದಕ್ಕೆ ಅಶುದ್ಧಿ ಎಂಬುದಿಲ್ಲ. ಜಾತಿ ಬೇಧಗಳೂ ಇಲ್ಲ. ಗೋಮಾಂಸವು ವೈಜ್ಞಾನಿಕವಾಗಿ ಆರೋಗ್ಯ ಪೂರ್ಣವೂ, ಬೇಕಾದ ಪೋಷಕಾಂಶಗಳನ್ನು ಹೊಂದಿರಬಹುದು. ಆದರೆ ಬುದ್ಧಿಗೆ ಮಾರಕವೇ ಆಗಿದೆ. ಗೋಭಕ್ಷಕರು ಹೆಚ್ಚಾಗಿ ಅಪಮೃತ್ಯುವಿನಿಂದಲೇ ಸಾಯುವುದು. ಅಪಮೃತ್ಯು ಪ್ರವೇಶವಾಗುವುದು ಮಾನವನಲ್ಲಿರುವ ಉನ್ಮತ್ತತೆಗಳಿಂದ. ಇಂತಹ ಗೋಭಕ್ಷಕರಿಗೆ ಮೆದುಳು (Brain) ನಿಷ್ಕ್ರಿಯವಾಗುತ್ತಾ ಹೋಗುತ್ತದೆ. ಯಾಕೆಂದರೆ ಅವರಿಗೆ ಉತ್ಸಾಹ (Courage) ಇದು ಯಾವ ವೈದ್ಯಕೀಯ ಸಂಶೋಧನೆಗಳಿಗೂ ಸಿಗದಂತಹ ವಿಚಾರ. ಯಾಕೆಂದರೆ ಗೋವಿನೊಳಗೇನಿದೆ ಎಂದು ತಿಳಿದರೆ ಅರ್ಥವಾದೀತು.
ಬೆಂಕಿಯನ್ನು ತಿಂದರೇನಾದೀತು? ವಿಷವನ್ನು ಕುಡಿದರೇನಾದೀತು? ಇಂತಹ ಮಾರಕ ವಸ್ತುಗಳ ಅಭಿಮಾನಿ ದೇವರಗಳು ಈ ಗೋವಿನೊಳಗಿದ್ದಾರೆ. ಗೋವಿನ ಒಳಗಿರುವುದು ಯಾಕೆಂದರೆ ಗೋವು ನೀಡುವ ಕ್ಷೀರದ ಶುದ್ಧೀಕರಣಕ್ಕಾಗಿ. ನಾವು ತಿನ್ನುವ, ಉಪಯೋಗಿಸುವ ಅನೇಕ Productಗಳ ತಯಾರಿಕೆಯಲ್ಲಿ ಅದೆಷ್ಟೋ ವಿಧಗಳ ವಿಷಗಳನ್ನು ಹಾಕುವುದಿಲ್ಲವೇ? ನಾವು ಅಂತಹ ವಿಷಕಾರಕಗಳನ್ನೇ ಮುಕ್ಕಿದರೆ ಏನಾದೀತು? ಎಂದು ಯೋಚಿಸಿದರಾಯಿತು. ಹಾಗೆಯೇ ಗೋವು ನೀಡುವ ಪ್ರಸಾದವಾದ ಕ್ಷೀರವನ್ನು ಸ್ವೀಕರಿಸುವುದರೊಂದಿಗೆ ಇಡೀ ಗೋವನ್ನೇ ಭಕ್ಷಿಸಿದಾಗ ಅದು ವಿಷವಾಗಿ ಮಾರಕವಾಗಿ ಮೃತ್ಯು ಸ್ವರೂಪವೇ ಆಗುತ್ತದೆ.
ಯಾರು ಈ ಅಭಿಮಾನಿ ದೇವರುಗಳು?
1. ಗೋವಿನ ಉಸಿರಿನಲ್ಲಿ ಚತುರ್ವೇದಗಳಿವೆ. ಈ ವೇದಗಳ ಷಡಂಗಗಳು-ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತಾ, ಜೋತಿಷಾ, ಕಲ್ಪಗಳು. ಇದು ಸಾಕ್ಷಾತ್ ಮಹಾವಿಷ್ಣುವಾಗುತ್ತದೆ.
2. ಗೋವಿನ ಶೃಂಗಾಗ್ರಕೋಡುದಲ್ಲಿ ಇಂದ್ರ ಮತ್ತು ವಿಷ್ಣು ಸಾನ್ನಿಧ್ಯವಿದೆ.
3. ಲಲಾಟದಲ್ಲಿ ಗುರುವೂ, ಶಿರಸ್ಸಿನಲ್ಲಿ ಬ್ರಹ್ಮನೂ ನೆಲೆಸಿದ್ದಾರೆ.
4. ಕಣ್ಣುಗಳಲ್ಲಿ ರವಿ ಚಂದ್ರರೂ, ಕಿವಿಗಳಲ್ಲಿ ವೈದ್ಯರಾದ ಅಶ್ವಿನೀ ದೇವತೆಗಳಿರುತ್ತಾರೆ.
5. ದಂತಗಳಲ್ಲಿ ಮರುದ್ಗಣಗಳೂ, ನಾಲಿಗೆಯಲ್ಲಿ ಸರಸ್ವತಿಯೂ ಇದ್ದಾಳೆ.
6. ಕುತ್ತಿಗೆಯಲ್ಲಿ ವರುಣ ಮತ್ತು ಅಗ್ನಿದೇವತೆಗಳಿದ್ದಾರೆ.
7. ಗೋವಿನ ಉದರದಲ್ಲಿ ಸಾಕ್ಷಾತ್ ಭೂಮಾತೆಯೇ ಇದ್ದಾಳೆ. ಹಾಗಾಗಿ ಇದಕ್ಕೆ ‘ಗೋ’ ಎಂದು ಕರೆದರು. ಗೋ ಎಂದರೆ ವಿಶ್ವ, ಭೂಮಿ ಎಂದರ್ಥವಿದೆ. ಇದರ ಪಾಲಕನೇ ‘ಗೋ’ಪಾಲಕೃಷ್ಣ.
8. ಕಕ್ಕುತ್ತಿ ಅಂದರೆ ಹೆಗಲಿನಲ್ಲಿ ರವಿ ವಂಶದ ಆದಿ ಪುರುಷ ವೈವಸ್ವತ ಮನು, ಅಶ್ವಿನ್ಯಾದಿ ಶಕ್ತಿಗಳಿವೆ.
9. ಗೋವಿನ ಬಾಲದಲ್ಲಿ ಆದಿತ್ಯನೂ, ಸಂಧಿಗಳಲ್ಲಿ ಸಾಧ್ಯರುಗಳೆಂಬ ದೇವತೆಗಳಿದ್ದಾರೆ. ಹಾಗಾಗಿ ಗೋವಿನ ಬಾಲವನ್ನು ಹಿಡಿದೆಳೆದರೆ ಮಹಾ ಪಾಪವಾಗುತ್ತದೆ.
10. ಗೋವಿನ ಅಪಾನವಾಯುವಿನಲ್ಲಿ ಸರ್ವ ತೀರ್ಥಗಳ ಅಭಿಮಾನಿ ದೇವರುಗಳೂ, ಗೋಮುಖದಲ್ಲಿ ಗಂಗಾ ಮಾತೆಯೂ ನೆಲೆಸಿರುವುದರಿಂದ ಗೋ ಅಪಾನವಾಯು ಸರ್ವ ರೋಗ ನಿವಾರಕವಾಗುತ್ತದೆ. ಮಾನವನ ಅಪಾನವಾಯು? ದರಿದ್ರ ಎಂದು ಪಕ್ಕದಲ್ಲಿದ್ದವರು ಓಡುತ್ತಾರೆ !
11. ‘ಗೋಮಯ’ ಎಂದರೆ ಸೆಗಣಿಯಲ್ಲಿ ಲಕ್ಷ್ಮೀ ದೇವಿಯು ನೆಲೆಸಿರುತ್ತಾಳೆ. ಭೂಶುದ್ಧಿಗೆ ಗೋಮಯವು ಅಗತ್ಯವಾಗಿದೆ.
12. ಗೋವಿನ ಮೂಗಿನಲ್ಲಿ ಜೇಷ್ಟಾದೇವಿಯು ನೆಲೆಸಿರುತ್ತಾಳೆ. ಗೋವಿನ ಮೂಗು ಸ್ಪರ್ಷಿಸಬಾರದು.
13. ಗೋವಿನ ಸ್ಥನಗಳಲ್ಲಿ ಚತುಸ್ಸಾಗರಗಳಿವೆ.
14. ಗೊರಸ್ಸುಗಳ ಮಧ್ಯದಲ್ಲಿ ಗಂದರ್ವರ ಸಾನ್ನಿಧ್ಯಗಳಿವೆ. ಗೊರಸಿನ ತುದಿಯಲ್ಲಿ ಉರಗಸಾನ್ನಿಧ್ಯವಿದೆ.
15. ಗೊರಸ್ಸಿನ ಹಿಂಭಾಗದಲ್ಲಿ ಅಪ್ಸರಾ ಗಣಗಳಿದ್ದಾರೆ.
16. ರೋಮ ಬಾಲಗಳಿಂದೊಡಗೂಡಿದ ಕಟೀ ಪ್ರದೇಶದಲ್ಲಿ ಪಿತೃದೇವತೆಗಳಿರುತ್ತಾರೆ.
17. ರೋಮ ಕೂಪದಲ್ಲಿ ಋಷಿಮುನಿಗಳೂ, ಚರ್ಮದಲ್ಲಿ ಪ್ರಜಾಪತಿಯೂ ಇದ್ದಾರೆ.
18. ಗೋವಿನ ಸಕಲ ಭಾಗದ ಹೊರವಲಯದಲ್ಲಿ ವಿರಾಟ ಸ್ವರೂಪಿ ಶ್ಯಾಮಲ ವರ್ಣದವನಾದ ಗೋಪಾಲ ಕೃಷ್ಣನು ಮಹಾವಿಷ್ಣು ಸ್ವರೂಪದಲ್ಲಿ ನೆಲೆಸಿರುತ್ತಾನೆ. ಅಲ್ಲದೆ ದೇವತೆಗಳ ಉಪದೇವತೆಗಳು, ಅವರ ಗಣ ಉಪಗಣಗಳೂ ಸೇರಿ ಮೂವತ್ತಮೂರು ಅಗ್ರಕೋಟಿ ದೇವತೆಗಳ ಉಪದೇವತೆಗಳಾಗಿ ಮೂವತ್ತಮೂರು ಕೋಟಿಯಾಗುತ್ತದೆ.
ಗೋಗ್ರಾಸದ ಮಹತ್ವ ಎಂತಹುದ್ದು ಗೊತ್ತಾ?
ಈ ಗೋವಿನ ಮಹಿಮೆಯು ಅಪಾರ. ಇದನ್ನರಿತ ಪ್ರಾಜ್ಞರು ಊಟಕ್ಕೆ ಮುಂಚಿತ ಗೋಪಾಲ ಕೃಷ್ಣ ಪ್ರೀತ್ಯರ್ಥವಾಗಿ ಗೋಗ್ರಾಸವನ್ನಿಟ್ಟರು. ಈಗ ಈ ಗೋಭಕ್ಷಕರಿಗೆ ಗೋಭಕ್ಷಣೆಗೆ ಮುಂಚೆ ಹೆಂಡ, Fork, Knife ಇಡುತ್ತಾರೆ. ನಂತರ ಹೊಡ್ಕೊಂಡು ಸಾಯುತ್ತಾರೆ!! ಗೋಗ್ರಾಸವಿಡದೆ ಯಾವ ಸಂತರ್ಪಣೆಗೂ ಫಲವಿರದು. ಸನಾತನದಲ್ಲಿ ಒಬ್ಬ ವ್ಯಕ್ತಿಯು ಸತ್ತಾಗ ಆರನೆಯ ತಿಂಗಳ ಮಾಸಿಕದಲ್ಲಿ ಗೋದಾನ ನೀಡಬೇಕು ಎಂದು ಗರುಡಪುರಾಣದಲ್ಲಿ ಹೇಳಿದೆ. ಇದು ಜೀವಾತ್ಮನು ವೈತರಣೀ ನದಿಯನ್ನು ದಾಟುವ ಕಾಲ. ಅಲ್ಲಿ ಗೋದಾನ ನೀಡಿದರೆ ಸ್ವತಃ ಗೋವು ಈ ಕಷ್ಮಲಯುಕ್ತವಾದ ನದಿಯನ್ನು ದಾಟಿಸುತ್ತದೆ ಎಂದಿದೆ ಗರುಡ ಪುರಾಣ. ಹೀಗೇ ಗೋವಿನ ಮಹತ್ವವನ್ನು ಕೇವಲ ಸಂಕ್ಷಿಪ್ತವಾಗಿ ತಿಳಿಸಿದ್ದೇನಷ್ಟೆ. ಗೋ ಪುರಾಣವನ್ನೇನಾದರೂ ಪೂರ್ನವಾಗಿ ಓದಿದರೆ ಗೋವಿಗೆ ಹಿಂಸೆಯಾದೀತು ಎಂದು ಗೋವಿನ ಹಾಲನ್ನು ಕುಡಿಯಲಾರರು. ಅಂತಹ ಪವಿತ್ರವಾದ ಗೋವನ್ನು ವಧಿಸುವವರಿಗೆ ಧಿಕ್ಕಾರವಿರಲಿ.
ದಂಡಪ್ರಹಾರವೇ ಪಾಠವಾಗಲಿ
ಇದನ್ನು ಗೋಹಂತಕರಿಗೆ, ಗೋಹಂತಕರ ಬೆಂಬಲಿಗರಿಗೆ ಹೇಳಿ ಪ್ರಯೋಜನವಿರದು. ಅವರಿಗೆ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರದು. ಅವರಿಗೆ ಅರ್ಥೈಸುವ ಏಕೈಕ ಮಾರ್ಗವೇ ದಂಡಪ್ರಹಾರ ಮಾತ್ರ. ಆ ದಂಡ ಹಿಡಿಯುವವರಿಗೆ ಇದು ಅರ್ಥವಾದರೆ ಸಾಕು.

ಇನ್ನು ಮೂರ್ಖ ಸಾಹಿತಿ ಮದುರ್ಬುದ್ಧಿ ಜೀವಿಗಳು ನಿಮ್ಮನ್ನು ಈ ಮಹತ್ವಗಳ ವಿಚಾರವಾಗಿ ಗೋವಿನೊಳಗಿನ ದೇವತೆಗಳ ವಿಚಾರವಾಗಿ ಅವಹೇಳನವನ್ನೂ ಮಾಡಬಹುದು. ಅವರಿಗೂ ಇದು ಅರ್ಥವಾಗದ ವಿಚಾರ. ಅವರಿಗೂ ಅರ್ಥವಾಗುವುದು ದಂಡ ಪ್ರಹಾರದಲ್ಲಿ ಮಾತ್ರ.
ಆದಾಗ್ಯೂ ದೇವತಾ ಸಾನ್ನಿಧ್ಯಗಳೆಂದರೇನು ಎಂಬ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತೇನೆ. ನಮಗೆ ಪುಷ್ಟಿ ನೀಡುವ ಶಕ್ತಿಗಳನ್ನೇ ದೇವತೆಗಳು ಎನ್ನುತ್ತೇವೆ.

–ಜೈ ಗೋಮಾತಾ–
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ










Discussion about this post