No Result
View All Result
Landmark Heart Surgery in Davanagere | SS Narayana hospital completes first modified Bentall procedure
English Articles

Landmark Heart Surgery in Davanagere | SS Narayana hospital completes first modified Bentall procedure

by ಕಲ್ಪ ನ್ಯೂಸ್
May 2, 2026
0

Kalpa Media House  |  Davanagere  | In a milestone for healthcare in Central Karnataka, the SS Narayana Superspeciality Centre here...

Read moreDetails
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
  • Advertise With Us
  • Grievances
  • About Us
  • Contact Us
Saturday, May 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಹೆಸರಿನಷ್ಟೇ ಚಂದ ತುಳುನಾಡ ಪೊರ್ಲು ಸೇವಾ ಟ್ರಸ್ಟ್‌’ನ ಸೇವಾ ಕಾರ್ಯ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 18, 2019
in Special Articles
0
ಹೆಸರಿನಷ್ಟೇ ಚಂದ ತುಳುನಾಡ ಪೊರ್ಲು ಸೇವಾ ಟ್ರಸ್ಟ್‌’ನ ಸೇವಾ ಕಾರ್ಯ
Share on FacebookShare on TwitterShare on WhatsApp

ಸೇವಾ ಎಂಬ ಯಜ್ಞದಲ್ಲಿ ಕಳೆದ ಎರಡೂವರೆ ವರುಷಗಳಿಂದ ನಿಸ್ವಾರ್ಥವಾಗಿ ಸಮಾಜಮುಖಿ ಸೇವಾ ಕಾರ್ಯ ಮಾಡುತ್ತಿರುವ ನಮ್ಮ ಹೆಮ್ಮೆಯ ತುಳುನಾಡ ಪೊರ್ಲು ಸೇವಾ ಟ್ರಸ್ಟ್‌ ಪ್ರಾರಂಭಗೊಂಡು 33 ತಿಂಗಳು ಪೂರೈಸಿದ್ದು, 34ನೆಯ ತಿಂಗಳ ಮಾಸಿಕ ಸೇವಾ ಯೋಜನೆಯು ಪ್ರಗತಿಯಲ್ಲಿದೆ. ಇದುವರೆಗೆ 33 ತಿಂಗಳ ಪಯಣದಲ್ಲಿ 92 ಸೇವಾ ಯೋಜನೆ ಮಾಡುವ ಮೂಲಕ 25 ಲಕ್ಷ ಅಧಿಕ ಧನ ಸಹಾಯವನ್ನು ಸಮಾಜದ ಅಶಕ್ತರ ಪಾಲಿಗೆ ನೀಡಿ ನೆರವಾಗಿದೆ. ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಅನುಗ್ರಹದೊಂದಿಗೆ, ಜನ ಸೇವೆಯೇ ಜನಾರ್ದನ ಸೇವೆ ಎಂಬ ಉದ್ದೇಶವನ್ನು ಇಟ್ಟುಕೊಂಡು ಜಾತಿ, ಧರ್ಮ, ರಾಜಕೀಯೇತರ ಇಲ್ಲದೆ ಸೇವಾ ಕಾರ್ಯ ಮಾಡುತ್ತ ಬಂದಿದೆ.

ಏನು ಹೇಳಬೇಕು ಅಂತ ತೋಚುತ್ತಿಲ್ಲ ಯಾಕೆಂದರೆ ಈ ಸಂಸ್ಥೆ ಮಾಡಿದ ಸೇವೆ ನಿಸ್ವಾರ್ಥವಾಗಿದೆ ಆದರೂ ಈ ಸಂಸ್ಥೆಯ ಬಗ್ಗೆ ನಿಮಗೆ ತಿಳಿಯಪಡಿಸಬೇಕು ಕಾರಣ ನಿಮಗೂ ಈ ಸಂಸ್ಥೆಯ ಕಾರ್ಯ ಚಟುವಟಿಕೆ ಗೊತ್ತಾಗಿ ತಾವು ಈ ಸಂಸ್ಥೆಗೆ ಕೈ ಜೋಡಿಸಲು ಮುಂದೆ ಬರುವಿರಿ ಎಂಬ ಮಹಾದಾಸೆ ಅಷ್ಟೇ.


ಅಂದು ಆ ಮೂರು ಯುವಕರ ಮನದಲ್ಲಿ ಏನೋ ಮೂಡಿತ್ತೂ ಗೊತ್ತಿಲ್ಲ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತಿದ್ದ ಆ ಯುವ ಪಡೆ ಒಂದು ಸಂಸ್ಥೆಯನ್ನು ರಚನೆ ಮಾಡಿಯೇ ಬಿಟ್ಟಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದೆ ಜಾಸ್ತಿ ಹೇಳುವವರ ಮಧ್ಯೆ ನಮ್ಮಿಂದ ಈ ಸಮಾಜಕ್ಕೆ ಎನ್ನನಾದರೂ ಕೊಡಬೇಕೆಂದು ಹೋರಾಟ ಇತ್ತೆ ಹೊರತು ಗುರಿ, ಸ್ವರ್ಧೆ ಹೊಂದಿರಲಿಲ್ಲ ಆ ಯುವ ಮನಸ್ಸುಗಳಲ್ಲಿ.

ಪ್ರಾರಂಭವಾದ ಸಂದರ್ಭದಲ್ಲಿ ಕೇವಲ 10-20 ಯುವ ಜನಾಂಗದಿಂದ ಮುನ್ನಡೆದ ಈ ಸಂಸ್ಥೆ ದಿನ ಕಳೆದಂತೆ ಹೆಮ್ಮೆರವಾಗಿಯೇ ಬಿಟ್ಟಿತ್ತು. ಹೇಗೆ ಬೀಜ ಬಿತ್ತಿ ಅದಕ್ಕೆ ಸರಿಯಾದ ಪೋಷಣೆ ಮಾಡಿದಾಗ ಅದು ಮೊಳಕೆ ಒಡೆದು ಫಲ ಕೊಡುತ್ತದೆಯೋ ಹಾಗೆಯೇ ಇಲ್ಲಿ ಇದ್ದ ಬೆರಳೆಣಿಕೆಯಷ್ಟೇ ಸೇವಾ ಕಾರ್ಯಕರ್ತರು ತಮ್ಮ ಬಿಡುವಿನ ಸಮಯದಲ್ಲಿ ಈ ಸಂಸ್ಥೆಗಾಗಿ ದುಡಿದು ಇಂದು ಬಹು ಎತ್ತರಕ್ಕೆ ಏರಲು ಕಾರಣವಾಗಿದೆ ಎನ್ನುವ ಮಾತು ಅಕ್ಷರಶಃ ಸತ್ಯ.

ಯಾರೋ ಕೆಲವರು ಪದವಿ ಆಸೆಗಾಗಿ ಸೇವಾ ಕಾರ್ಯ ಮಾಡುತ್ತಾರೋ ಅವರು ಈ ಸಂಸ್ಥೆಯ ಪ್ರಾರಂಭದ ಸೇವಾ ಕಾರ್ಯ ನೋಡಿ ಇವರು ಮಾಡುದಾದರೆ ಎಷ್ಟು ಸಮಯ ಮಾಡಿಯಾರು ಅಂತ ಹೀಯಾಳಿಸಿದವರು. ಆದರೆ ಅದಕ್ಕೆಲ್ಲ ಜಗ್ಗದೆ, ಕುಗ್ಗದೆ ನಿಸ್ವಾರ್ಥವಾಗಿ ಸೇವಾ ಕಾರ್ಯವನ್ನು ಮಾಡಿ 33 ತಿಂಗಳುಗಳ ಸೇವಾ ಪಯಣವನ್ನು ಪೂರೈಸಿದೆ. ಈ 33 ತಿಂಗಳ ಸೇವಾ ಕಾರ್ಯವನ್ನು ನೋಡಿ ಅಂದು ಹೀಯಾಳಿಸಿದವರು ಇಂದು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದು ಕೂಡ ಅಕ್ಷರಶಃ ಸತ್ಯವಾಗಿದೆ.


ಈಗಿನ ವಿದ್ಯಮಾನದಲ್ಲಿ ಸಾಮಾಜಿಕ ಜಾಲತಾಣವನ್ನು ಕೇವಲ ಅನಾಗತ್ಯವಾದ ಫೋಟೋಸ್, ವಿಡಿಯೋ ಇನ್ನಿತರ ವಿಷಯಗಳನ್ನು ಹಂಚಿಕೊಂಡು ಸ್ವರ್ಧಾತ್ಮಕವಾಗಿ ಲೈಕ್, ಕಾಮೆಂಟ್ ಗಿಟ್ಟಿಸಿಕೊಳ್ಳುವವರ ಮಧ್ಯೆ ಈ ಸಂಸ್ಥೆ ಮಾಡಿದ ಸೇವಾ ಕಾರ್ಯವನ್ನು ನೋಡಿ ಕೆಲ ಸಂಘ- ಸಂಸ್ಥೆಗಳು ಬೆನ್ನು ತಟ್ಟಿ ಪ್ರೋತ್ಸಾಹಹಿಸಿದೆ.

ಅಂದು ಆಗಸ್ಟ್‌ 14 2016ರ ಆದಿತ್ಯವಾರ ಪ್ರಾರಂಭಗೊಂಡ ಈ ಸಂಸ್ಥೆಯ ಮೊದಲನೆಯ ದಿಟ್ಟ ಹೆಜ್ಜೆಯನ್ನು ಅಂದೇ ಇಟ್ಟಿತ್ತು.

ಯಾರೇ ಏನೋ ಹೇಳುತ್ತಾರೆ ಅಂತ ಅವರ ಮಾತಿಗೆ ಕಿವಿಗೊಡದೆ ಸಂಸ್ಥೆಯ ಜೊತೆ ಬಂದವರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಸಂಸ್ಥೆಯನ್ನು ಮುನ್ನಡೆಸುತ್ತ ಹೋದಂತೆ ಇನ್ನಷ್ಟು ಸಮಾಜಮುಖಿ ಸೇವಾ ಮಾಡುವ ಪಣ ಎಲ್ಲರಲ್ಲಿ ಹುಟ್ಟಿತ್ತು.


ಕೇವಲ ಹೆಸರು ಗಿಟ್ಟಿಸುವ ಸಲುವಾಗಿ ಸಂಸ್ಥೆಯನ್ನು ರಚನೆ ಮಾಡಿ ಅದರಲ್ಲಿ ಸ್ವಾರ್ಥದಿಂದ ಕಾರ್ಯ ಮಾಡುವವರ ತದ್ವಿರುದ್ಧವಾಗಿ ಈ ಸಂಸ್ಥೆ ನಿಸಾರ್ಥವಾಗಿ ಮಾಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ.

ಇಲ್ಲಿ ಇರುವ ಯಾರೋ ಶ್ರೀಮಂತರಲ್ಲ ಆದರೆ ಅವರಿಗೆ ದುಡಿಯುವ ಶಕ್ತಿಯನ್ನು ಶ್ರೀ ದೇವರು ಕೊಟ್ಟಿದ್ದರೆ ಅದರಲ್ಲಿ ತಿಂಗಳಿಗೆ ಒಂದು ಪಾಲನ್ನು ಮೀಸಲಿಟ್ಟು ತಮ್ಮಿಂದ ಆಗುವ ಅಳಿಲು ಸೇವೆಯನ್ನು ನೀಡಿ ನಮ್ಮಲ್ಲೂ ಹಣದ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಇದೆ ತೋರಿಸಿಕೊಟ್ಟರು ಈ ಸಂಸ್ಥೆಯ ಹೆಮ್ಮೆಯ ಸೇವಾ ಕಾರ್ಯಕರ್ತರು.

ಪ್ರಾರಂಭದಲ್ಲಿ ತಿಂಗಳಿಗೆ ಸಮಾಜದ ಕೇವಲ ಒಂದು ಅಶಕ್ತ ಕುಟುಂಬದ ಕಣ್ಣೀರಿಗೆ ಹೆಗಲಾಗುತ್ತಿದ್ದ ಈ ಸಂಸ್ಥೆ ಬೆಳೆಯುತ್ತಿದ್ದಂತೆ ತಿಂಗಳಿಗೆ 4 ಕುಟುಂಬದ ಕಣ್ಣೀರಿಗೆ ಹೆಗಲಾಗುತ್ತ ಹೋಯಿತು. ಇದಕ್ಕೆಲ್ಲ ಕಾರಣ ಈ ಸಂಸ್ಥೆಯ ನಿಸ್ವಾರ್ಥ ಸೇವಾ ಕಾರ್ಯಕರ್ತರ ಪರಿಶ್ರಮ.


ಇಲ್ಲಿ ಯಾರೂ ಮೇಲಾಲ್ಲ, ಯಾರು ಕೀಳಲ್ಲ ಎಲ್ಲರೂ ಸಮಾನರು. ಎಲ್ಲಿ ಅಹಂ ಎನ್ನುವ ಅಧಿಕಾರ ಇರುತ್ತದೆಯೋ ಅಲ್ಲಿ ಯಾವುದೇ ಸೇವಾ ಕಾರ್ಯ ಮಾಡಿದರು ಅದು ಕಾರ್ಯ ಸಿದ್ದಿಯಾಗುವುದಿಲ್ಲ. ಅಶಕ್ತರಿಗೆ ಸಹಾಯ ಆಗುತ್ತದೆಯೋ ಹೊರತು ಸೇವಾ ಕಾರ್ಯಕ್ಕೆ ಫಲಾಪೇಕ್ಷೆ ಆಗುವುದಿಲ್ಲ. ಆದರೆ ಇದ್ದಕ್ಕೆ ವಿರುದ್ಧವಾಗಿ ಈ ಸಂಸ್ಥೆ ಸೇವಾ ಕಾರ್ಯ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಂಸ್ಥೆಯಲ್ಲಿ ಏನೇ ಇದ್ದರು ಅದು ಕಟೀಲು ಅಮ್ಮ ಬಿಟ್ಟು ಯಾರು ಅಲ್ಲ. ಅವರು ಸೂತ್ರಧಾರಿ ಇಲ್ಲಿರುವವರು ಪಾತ್ರಧಾರಿ ಅಷ್ಟೇ.

ನಾವೆಲ್ಲರೂ ಭಾರತೀಯರು ಇಲ್ಲಿ ಎಲ್ಲ ಜಾತಿ ಧರ್ಮದವರಿಗೆ ಬದುಕಲು ಅವಕಾಶ ಇದೆ, ಆದರೆ ಇಲ್ಲಿ ಸೌಹಾರ್ದತೆ ಕೂಡ ಇದೆ ಆದರೆ ಏನು ಮಾಡೋದು ಈಗೀನ ವಿದ್ಯಾಮಾನ ನೋಡಿದರೆ ಜಾತಿ, ಧರ್ಮ, ರಾಜಕೀಯ ಹೆಸರಿನಲ್ಲಿ ಜೀವ ಕೊಡಲು ಮತ್ತು ಜೀವ ತೆಗೆಯಲು ತಯಾರಿರುವ ಸಮಾಜದ ನಡುವೆ ಬದಕುತ್ತಿರುವವರು ನಾವು ಆದರೆ ಈ ಸಂಸ್ಥೆಯಲ್ಲಿ ಸೌಹಾರ್ದತೆಯಿಂದ ರಾಜಕೀಯರಹಿತವಾಗಿ ಸೇವಾ ಕಾರ್ಯ ಮಾಡುತ್ತಿದ್ದು . ಈ ಎಲ್ಲ ಕಾರಣಕ್ಕೆ ನಾನು ಈ ಸಂಸ್ಥೆಯ ಸೇವಾ ಕಾರ್ಯಕರ್ತ ಅಂತ ಹೆಮ್ಮೆ ಅನಿಸುತ್ತದೆ.

ಅದು ಏನೇ ಇರಲಿ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಈ ಸಂಸ್ಥೆ 33 ತಿಂಗಳ ಸುದೀರ್ಘ ಸೇವಾ ಪಯಣದಲ್ಲಿ 94 ಸೇವಾ ಯೋಜನೆಯ ಮೂಲಕ ಸಮಾಜದಿಂದ ಒಟ್ಟು ಮಾಡಿದ 25 ಲಕ್ಷವನ್ನು ಅಶಕ್ತರಿಗೆ ನೀಡುವ ಮೂಲಕ ಮಾಡಲು ಮನಸ್ಸಿದ್ದರೆ ಏನು ಮಾಡಲು ಸಾಧ್ಯ ಎಂದು ಮಾಡಿ ತೋರಿಸಿ ಈ ಸಮಾಜಕ್ಕೆ ಮಾದರಿಯಾಗಿದೆ ಈ ಸಂಸ್ಥೆ.


ಈ 33 ತಿಂಗಳ ಸೇವಾ ಪಯಣದಲ್ಲಿ ಈ ಸಮಾಜದ ಎರಡು ಅಶಕ್ತ ಕುಟುಂಬಗಳಿಗೆ ತುಳುನಾಡ ಪೊರ್ಲು ನಾಮಾಂಕಿತ ಮನೆ ನಿರ್ಮಾಣ ಮಾಡಿ ಕೊಟ್ಟಿದ್ದು. ಒಂದು ಸರಪಾಡಿಯ ಅಲ್ಲಿಪಾದೆ ಮತ್ತೊಂದು ಇರುವೈಲ್ ನ ಪೊರಿಮೇಲುನಲ್ಲಿ ಈ ಸಂಸ್ಥೆಯ ಸೇವಾ ಕಾರ್ಯವನ್ನು ಮನಗಂಡ ಕೆಲವು ಟಿವಿ ವಾಹಿನಿಯವರು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೆರಪ್ರಸಾರ ಕಾರ್ಯಕ್ರಮದಲ್ಲಿ ಕೂಡ ಈ ಸಂಸ್ಥೆಯ ಸೇವಾ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಇಲ್ಲಿ ಕೆಲ ಯುವಕರು ಈ ಸಂಸ್ಥೆಯಲ್ಲಿ ಮಹಿಳೆಯರು ಕೂಡ ಸಕ್ರಿಯವಾಗಿ ತೋಡಿಸಿಕೊಂಡಿದ್ದಾರೆ.

ಸ್ವಾರ್ಥಮಯವಾದ ಈ ಸಮಾಜದಲ್ಲಿ ಇಷ್ಟೆಲ್ಲಾ ಸೇವಾ ಕಾರ್ಯವನ್ನು ಕೇವಲ ಸಾಮಾಜಿಕ ಜಾಲತಾಣಗಳಾದ ಫೇಸ್’ಬುಕ್, ವಾಟ್ಸಾಪ್ ಉಪಯೋಗಿಸಿಕೊಂಡು ನಿಸ್ವಾರ್ಥವಾಗಿ ಸಮಾಜದ ಅಶಕ್ತರ ಪಾಲಿಗೆ ನೆರವಾಗುತ್ತಿರುವ ಈ ಸಂಸ್ಥೆಯ ಕಡೆ ತಾವು ಬಂದು ತಮ್ಮಿಂದ ಆಗುವ ಅಳಿಲು ಸೇವೆಯನ್ನು ನೀಡಿ, ನೀವು ನೀಡಿದ ಸೇವೆಯನ್ನು ಈ ಸಂಸ್ಥೆ ಖಂಡಿತವಾಗಿ ಅಶಕ್ತರ ಪಾಲಿಗೆ ನೆರವವಾಗುವುದಂತು ನಿಜ. ಮನಸ್ಸು ಬೇಕು, ಮನಸ್ಸಿದ್ದರೆ ಮಾರ್ಗ ಇದೆ, ಮಾರ್ಗಕ್ಕೆ ಸರಿಯಾದ ವೇದಿಕೆ ಕೂಡ ನಮ್ಮ ಈ ತುಳುನಾಡ ಪೊರ್ಲು ಸೇವಾ ಟ್ರಸ್ಟ್‌(ರಿ). ಅನ್ನೋದು ಸತ್ಯ.


ಕೊನೆಯ ಮಾತು
ನನಗೆ ತಿಳಿದಷ್ಟು ಈ ಸಂಸ್ಥೆಯ ಬಗ್ಗೆ ಹೇಳಿದ್ದೇನೆ. ಗೋಪಾಲಕೃಷ್ಣ ಅಡಿಗರು ಒಂದು ಮಾತು ಹೇಳಿದ್ದರೆ, ಕಟ್ಟುವೆವು ನಾವು ಹೊಸ ನಾಡೊಂದ ರಸದ ಬಿಡೊಂದ. ಹೌದು ನಾವೆಲ್ಲರೂ ಒಟ್ಟಾಗಿ ಒಂದು ಸೃದೃಢ ಸಮಾಜವನ್ನು ಕಟ್ಟೋಣ. ಸಮಾಜ ನಮಗೆ ಏನು ಕೊಟ್ಟಿಲ್ಲ ಅಂತ ಹೇಳೋದಕ್ಕೆ ಸಮಾಜಕ್ಕಾಗಿ ನಾವು ಏನು ಕೊಟ್ಟಿದ್ದೇವೆ ಅನ್ನೋದನ್ನು ಆಲೋಚಿಸಿ. ಪರರ ಕಷ್ಟಗಳಿಗೆ ಜೀವ ಇರುವಾಗ ಬಾರದ ಕಣ್ಣೀರು ಸತ್ತಾಗ ಬರುತ್ತದೆ, ಬನ್ನಿ ಪರರ ಕಷ್ಟಕ್ಕೆ ಹೆಗಲಾಗೋಣ. ಅರಿತು ಬಾಳಿದರೆ ಬಾಳು ಬಂಗಾರ ಬೆರೆತ ಬಾಳಿದರೆ ಬಾಳು ಶೃಂಗಾರ ಅರಿತು ಬೆರೆತು ಬಾಳಿದರೆ ಜೀವನ ಸಾಕ್ಷಾತ್ತರವಾಗುದಂತು ಖಂಡಿತ. ನಿಮ್ಮ ಆಯ್ಕೆ ನಿಮಗೆ ಬಿಟ್ಟಿದ್ದು.

ಒಳಿತು ಮಾಡು ಮನುಷ
ನೀ ಇರೋದು ಮೂರು ದಿವಸ
ಸಂಪರ್ಕ
9880956086 ನವೀನ್ ಪಿಮಿಜಾರು
9686361585 ನೀತು ಪೂಜಾರಿ ಅಜಿಲಮೊಗರು

ಬರಹ: ನೀತು ಪೂಜಾರಿ ಅಜಿಲಮೊಗರು

Tags: coastal newsKannada ArticleSocial serviceSouth KendraSpecial ArticleTulunadu Porlu Seva Trustತುಳುನಾಡ ಪೊರ್ಲುತುಳುನಾಡ ಪೊರ್ಲು ಸೇವಾ ಟ್ರಸ್ಟ್‌ಶ್ರೀದುರ್ಗಾಪರಮೇಶ್ವರಿಸಮಾಜ ಸೇವೆಸಾಮಾಜಿಕ ಜಾಲತಾಣ
Share196Tweet123Send
Previous Post

ಅಯ್ಯೋ ವಿಧಿಯೇ! ಅಪ್ಪ ಎದ್ದೇಳು ಅಪ್ಪ: ವೀರಸ್ವರ್ಗ ಸೇರಿದ ಯೋಧನ ಪುತ್ರನ ಆಕ್ರಂದನ

Next Post

ಕುಟುಂಬದ ಮಹತ್ವ: ಪ್ರಾಣಿಯಾಗಿರುತ್ತಿದ್ದರೆ ಈ ಬಂಧವೇ ಇರುತ್ತಿರಲಿಲ್ಲ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕುಟುಂಬದ ಮಹತ್ವ: ಪ್ರಾಣಿಯಾಗಿರುತ್ತಿದ್ದರೆ ಈ ಬಂಧವೇ ಇರುತ್ತಿರಲಿಲ್ಲ

ಕುಟುಂಬದ ಮಹತ್ವ: ಪ್ರಾಣಿಯಾಗಿರುತ್ತಿದ್ದರೆ ಈ ಬಂಧವೇ ಇರುತ್ತಿರಲಿಲ್ಲ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಬೇಸೂರು ಗ್ರಾಮದಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ನಿಲ್ಲಿಸುವಂತೆ ಡಿಸಿಗೆ ಮನವಿ

ಬೇಸೂರು ಗ್ರಾಮದಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ನಿಲ್ಲಿಸುವಂತೆ ಡಿಸಿಗೆ ಮನವಿ

May 2, 2026
ಬೆಳೆಹಾನಿ ರೈತರಿಗೆ ಸೂಕ್ತ ಪರಿಹಾರ ಒದಗಿಸಿ: ಕೃಷಿಕ ಸಮಾಜ ಆಗ್ರಹ

ಬೆಳೆಹಾನಿ ರೈತರಿಗೆ ಸೂಕ್ತ ಪರಿಹಾರ ಒದಗಿಸಿ: ಕೃಷಿಕ ಸಮಾಜ ಆಗ್ರಹ

May 2, 2026
ಶಿವಮೊಗ್ಗ ನಗರದ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಅನುದಾನ ನೀಡಿ

ಶಿವಮೊಗ್ಗ ನಗರದ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಅನುದಾನ ನೀಡಿ

May 2, 2026
ಬಂಗಾರಪ್ಪ ಅವರ ಕೂಲಿಂಗ್ ಗ್ಲಾಸಿನ ಹಿಂದೆ ಬಡವರಿಗೆ ಸೂರು ಕಲ್ಪಿಸುವ ಕನಸು ಇತ್ತು : ಸಚಿವ ಮಧು ಬಂಗಾರಪ್ಪ

ಬಂಗಾರಪ್ಪ ಅವರ ಕೂಲಿಂಗ್ ಗ್ಲಾಸಿನ ಹಿಂದೆ ಬಡವರಿಗೆ ಸೂರು ಕಲ್ಪಿಸುವ ಕನಸು ಇತ್ತು : ಸಚಿವ ಮಧು ಬಂಗಾರಪ್ಪ

May 2, 2026
Landmark Heart Surgery in Davanagere | SS Narayana hospital completes first modified Bentall procedure

ದಾವಣಗೆರೆ | ವೈದ್ಯಕೀಯ ಮೈಲಿಗಲ್ಲು | ಎಸ್ಎಸ್ ನಾರಾಯಣ ಆಸ್ಪತ್ರೆಯಲ್ಲಿ ಮಧ್ಯ ಕರ್ನಾಟಕದ ಮೊದಲ ‘ಬೆಂಟಾಲ್’ ಶಸ್ತ್ರಚಿಕಿತ್ಸೆ ಯಶಸ್ವಿ

May 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL