ಸೇವಾ ಎಂಬ ಯಜ್ಞದಲ್ಲಿ ಕಳೆದ ಎರಡೂವರೆ ವರುಷಗಳಿಂದ ನಿಸ್ವಾರ್ಥವಾಗಿ ಸಮಾಜಮುಖಿ ಸೇವಾ ಕಾರ್ಯ ಮಾಡುತ್ತಿರುವ ನಮ್ಮ ಹೆಮ್ಮೆಯ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಪ್ರಾರಂಭಗೊಂಡು 33 ತಿಂಗಳು ಪೂರೈಸಿದ್ದು, 34ನೆಯ ತಿಂಗಳ ಮಾಸಿಕ ಸೇವಾ ಯೋಜನೆಯು ಪ್ರಗತಿಯಲ್ಲಿದೆ. ಇದುವರೆಗೆ 33 ತಿಂಗಳ ಪಯಣದಲ್ಲಿ 92 ಸೇವಾ ಯೋಜನೆ ಮಾಡುವ ಮೂಲಕ 25 ಲಕ್ಷ ಅಧಿಕ ಧನ ಸಹಾಯವನ್ನು ಸಮಾಜದ ಅಶಕ್ತರ ಪಾಲಿಗೆ ನೀಡಿ ನೆರವಾಗಿದೆ. ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಅನುಗ್ರಹದೊಂದಿಗೆ, ಜನ ಸೇವೆಯೇ ಜನಾರ್ದನ ಸೇವೆ ಎಂಬ ಉದ್ದೇಶವನ್ನು ಇಟ್ಟುಕೊಂಡು ಜಾತಿ, ಧರ್ಮ, ರಾಜಕೀಯೇತರ ಇಲ್ಲದೆ ಸೇವಾ ಕಾರ್ಯ ಮಾಡುತ್ತ ಬಂದಿದೆ.
ಏನು ಹೇಳಬೇಕು ಅಂತ ತೋಚುತ್ತಿಲ್ಲ ಯಾಕೆಂದರೆ ಈ ಸಂಸ್ಥೆ ಮಾಡಿದ ಸೇವೆ ನಿಸ್ವಾರ್ಥವಾಗಿದೆ ಆದರೂ ಈ ಸಂಸ್ಥೆಯ ಬಗ್ಗೆ ನಿಮಗೆ ತಿಳಿಯಪಡಿಸಬೇಕು ಕಾರಣ ನಿಮಗೂ ಈ ಸಂಸ್ಥೆಯ ಕಾರ್ಯ ಚಟುವಟಿಕೆ ಗೊತ್ತಾಗಿ ತಾವು ಈ ಸಂಸ್ಥೆಗೆ ಕೈ ಜೋಡಿಸಲು ಮುಂದೆ ಬರುವಿರಿ ಎಂಬ ಮಹಾದಾಸೆ ಅಷ್ಟೇ.
ಅಂದು ಆ ಮೂರು ಯುವಕರ ಮನದಲ್ಲಿ ಏನೋ ಮೂಡಿತ್ತೂ ಗೊತ್ತಿಲ್ಲ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತಿದ್ದ ಆ ಯುವ ಪಡೆ ಒಂದು ಸಂಸ್ಥೆಯನ್ನು ರಚನೆ ಮಾಡಿಯೇ ಬಿಟ್ಟಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದೆ ಜಾಸ್ತಿ ಹೇಳುವವರ ಮಧ್ಯೆ ನಮ್ಮಿಂದ ಈ ಸಮಾಜಕ್ಕೆ ಎನ್ನನಾದರೂ ಕೊಡಬೇಕೆಂದು ಹೋರಾಟ ಇತ್ತೆ ಹೊರತು ಗುರಿ, ಸ್ವರ್ಧೆ ಹೊಂದಿರಲಿಲ್ಲ ಆ ಯುವ ಮನಸ್ಸುಗಳಲ್ಲಿ.
ಪ್ರಾರಂಭವಾದ ಸಂದರ್ಭದಲ್ಲಿ ಕೇವಲ 10-20 ಯುವ ಜನಾಂಗದಿಂದ ಮುನ್ನಡೆದ ಈ ಸಂಸ್ಥೆ ದಿನ ಕಳೆದಂತೆ ಹೆಮ್ಮೆರವಾಗಿಯೇ ಬಿಟ್ಟಿತ್ತು. ಹೇಗೆ ಬೀಜ ಬಿತ್ತಿ ಅದಕ್ಕೆ ಸರಿಯಾದ ಪೋಷಣೆ ಮಾಡಿದಾಗ ಅದು ಮೊಳಕೆ ಒಡೆದು ಫಲ ಕೊಡುತ್ತದೆಯೋ ಹಾಗೆಯೇ ಇಲ್ಲಿ ಇದ್ದ ಬೆರಳೆಣಿಕೆಯಷ್ಟೇ ಸೇವಾ ಕಾರ್ಯಕರ್ತರು ತಮ್ಮ ಬಿಡುವಿನ ಸಮಯದಲ್ಲಿ ಈ ಸಂಸ್ಥೆಗಾಗಿ ದುಡಿದು ಇಂದು ಬಹು ಎತ್ತರಕ್ಕೆ ಏರಲು ಕಾರಣವಾಗಿದೆ ಎನ್ನುವ ಮಾತು ಅಕ್ಷರಶಃ ಸತ್ಯ.
ಯಾರೋ ಕೆಲವರು ಪದವಿ ಆಸೆಗಾಗಿ ಸೇವಾ ಕಾರ್ಯ ಮಾಡುತ್ತಾರೋ ಅವರು ಈ ಸಂಸ್ಥೆಯ ಪ್ರಾರಂಭದ ಸೇವಾ ಕಾರ್ಯ ನೋಡಿ ಇವರು ಮಾಡುದಾದರೆ ಎಷ್ಟು ಸಮಯ ಮಾಡಿಯಾರು ಅಂತ ಹೀಯಾಳಿಸಿದವರು. ಆದರೆ ಅದಕ್ಕೆಲ್ಲ ಜಗ್ಗದೆ, ಕುಗ್ಗದೆ ನಿಸ್ವಾರ್ಥವಾಗಿ ಸೇವಾ ಕಾರ್ಯವನ್ನು ಮಾಡಿ 33 ತಿಂಗಳುಗಳ ಸೇವಾ ಪಯಣವನ್ನು ಪೂರೈಸಿದೆ. ಈ 33 ತಿಂಗಳ ಸೇವಾ ಕಾರ್ಯವನ್ನು ನೋಡಿ ಅಂದು ಹೀಯಾಳಿಸಿದವರು ಇಂದು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದು ಕೂಡ ಅಕ್ಷರಶಃ ಸತ್ಯವಾಗಿದೆ.
ಈಗಿನ ವಿದ್ಯಮಾನದಲ್ಲಿ ಸಾಮಾಜಿಕ ಜಾಲತಾಣವನ್ನು ಕೇವಲ ಅನಾಗತ್ಯವಾದ ಫೋಟೋಸ್, ವಿಡಿಯೋ ಇನ್ನಿತರ ವಿಷಯಗಳನ್ನು ಹಂಚಿಕೊಂಡು ಸ್ವರ್ಧಾತ್ಮಕವಾಗಿ ಲೈಕ್, ಕಾಮೆಂಟ್ ಗಿಟ್ಟಿಸಿಕೊಳ್ಳುವವರ ಮಧ್ಯೆ ಈ ಸಂಸ್ಥೆ ಮಾಡಿದ ಸೇವಾ ಕಾರ್ಯವನ್ನು ನೋಡಿ ಕೆಲ ಸಂಘ- ಸಂಸ್ಥೆಗಳು ಬೆನ್ನು ತಟ್ಟಿ ಪ್ರೋತ್ಸಾಹಹಿಸಿದೆ.
ಅಂದು ಆಗಸ್ಟ್ 14 2016ರ ಆದಿತ್ಯವಾರ ಪ್ರಾರಂಭಗೊಂಡ ಈ ಸಂಸ್ಥೆಯ ಮೊದಲನೆಯ ದಿಟ್ಟ ಹೆಜ್ಜೆಯನ್ನು ಅಂದೇ ಇಟ್ಟಿತ್ತು.
ಯಾರೇ ಏನೋ ಹೇಳುತ್ತಾರೆ ಅಂತ ಅವರ ಮಾತಿಗೆ ಕಿವಿಗೊಡದೆ ಸಂಸ್ಥೆಯ ಜೊತೆ ಬಂದವರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಸಂಸ್ಥೆಯನ್ನು ಮುನ್ನಡೆಸುತ್ತ ಹೋದಂತೆ ಇನ್ನಷ್ಟು ಸಮಾಜಮುಖಿ ಸೇವಾ ಮಾಡುವ ಪಣ ಎಲ್ಲರಲ್ಲಿ ಹುಟ್ಟಿತ್ತು.
ಕೇವಲ ಹೆಸರು ಗಿಟ್ಟಿಸುವ ಸಲುವಾಗಿ ಸಂಸ್ಥೆಯನ್ನು ರಚನೆ ಮಾಡಿ ಅದರಲ್ಲಿ ಸ್ವಾರ್ಥದಿಂದ ಕಾರ್ಯ ಮಾಡುವವರ ತದ್ವಿರುದ್ಧವಾಗಿ ಈ ಸಂಸ್ಥೆ ನಿಸಾರ್ಥವಾಗಿ ಮಾಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ.
ಇಲ್ಲಿ ಇರುವ ಯಾರೋ ಶ್ರೀಮಂತರಲ್ಲ ಆದರೆ ಅವರಿಗೆ ದುಡಿಯುವ ಶಕ್ತಿಯನ್ನು ಶ್ರೀ ದೇವರು ಕೊಟ್ಟಿದ್ದರೆ ಅದರಲ್ಲಿ ತಿಂಗಳಿಗೆ ಒಂದು ಪಾಲನ್ನು ಮೀಸಲಿಟ್ಟು ತಮ್ಮಿಂದ ಆಗುವ ಅಳಿಲು ಸೇವೆಯನ್ನು ನೀಡಿ ನಮ್ಮಲ್ಲೂ ಹಣದ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಇದೆ ತೋರಿಸಿಕೊಟ್ಟರು ಈ ಸಂಸ್ಥೆಯ ಹೆಮ್ಮೆಯ ಸೇವಾ ಕಾರ್ಯಕರ್ತರು.
ಪ್ರಾರಂಭದಲ್ಲಿ ತಿಂಗಳಿಗೆ ಸಮಾಜದ ಕೇವಲ ಒಂದು ಅಶಕ್ತ ಕುಟುಂಬದ ಕಣ್ಣೀರಿಗೆ ಹೆಗಲಾಗುತ್ತಿದ್ದ ಈ ಸಂಸ್ಥೆ ಬೆಳೆಯುತ್ತಿದ್ದಂತೆ ತಿಂಗಳಿಗೆ 4 ಕುಟುಂಬದ ಕಣ್ಣೀರಿಗೆ ಹೆಗಲಾಗುತ್ತ ಹೋಯಿತು. ಇದಕ್ಕೆಲ್ಲ ಕಾರಣ ಈ ಸಂಸ್ಥೆಯ ನಿಸ್ವಾರ್ಥ ಸೇವಾ ಕಾರ್ಯಕರ್ತರ ಪರಿಶ್ರಮ.
ಇಲ್ಲಿ ಯಾರೂ ಮೇಲಾಲ್ಲ, ಯಾರು ಕೀಳಲ್ಲ ಎಲ್ಲರೂ ಸಮಾನರು. ಎಲ್ಲಿ ಅಹಂ ಎನ್ನುವ ಅಧಿಕಾರ ಇರುತ್ತದೆಯೋ ಅಲ್ಲಿ ಯಾವುದೇ ಸೇವಾ ಕಾರ್ಯ ಮಾಡಿದರು ಅದು ಕಾರ್ಯ ಸಿದ್ದಿಯಾಗುವುದಿಲ್ಲ. ಅಶಕ್ತರಿಗೆ ಸಹಾಯ ಆಗುತ್ತದೆಯೋ ಹೊರತು ಸೇವಾ ಕಾರ್ಯಕ್ಕೆ ಫಲಾಪೇಕ್ಷೆ ಆಗುವುದಿಲ್ಲ. ಆದರೆ ಇದ್ದಕ್ಕೆ ವಿರುದ್ಧವಾಗಿ ಈ ಸಂಸ್ಥೆ ಸೇವಾ ಕಾರ್ಯ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಂಸ್ಥೆಯಲ್ಲಿ ಏನೇ ಇದ್ದರು ಅದು ಕಟೀಲು ಅಮ್ಮ ಬಿಟ್ಟು ಯಾರು ಅಲ್ಲ. ಅವರು ಸೂತ್ರಧಾರಿ ಇಲ್ಲಿರುವವರು ಪಾತ್ರಧಾರಿ ಅಷ್ಟೇ.
ನಾವೆಲ್ಲರೂ ಭಾರತೀಯರು ಇಲ್ಲಿ ಎಲ್ಲ ಜಾತಿ ಧರ್ಮದವರಿಗೆ ಬದುಕಲು ಅವಕಾಶ ಇದೆ, ಆದರೆ ಇಲ್ಲಿ ಸೌಹಾರ್ದತೆ ಕೂಡ ಇದೆ ಆದರೆ ಏನು ಮಾಡೋದು ಈಗೀನ ವಿದ್ಯಾಮಾನ ನೋಡಿದರೆ ಜಾತಿ, ಧರ್ಮ, ರಾಜಕೀಯ ಹೆಸರಿನಲ್ಲಿ ಜೀವ ಕೊಡಲು ಮತ್ತು ಜೀವ ತೆಗೆಯಲು ತಯಾರಿರುವ ಸಮಾಜದ ನಡುವೆ ಬದಕುತ್ತಿರುವವರು ನಾವು ಆದರೆ ಈ ಸಂಸ್ಥೆಯಲ್ಲಿ ಸೌಹಾರ್ದತೆಯಿಂದ ರಾಜಕೀಯರಹಿತವಾಗಿ ಸೇವಾ ಕಾರ್ಯ ಮಾಡುತ್ತಿದ್ದು . ಈ ಎಲ್ಲ ಕಾರಣಕ್ಕೆ ನಾನು ಈ ಸಂಸ್ಥೆಯ ಸೇವಾ ಕಾರ್ಯಕರ್ತ ಅಂತ ಹೆಮ್ಮೆ ಅನಿಸುತ್ತದೆ.
ಅದು ಏನೇ ಇರಲಿ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಈ ಸಂಸ್ಥೆ 33 ತಿಂಗಳ ಸುದೀರ್ಘ ಸೇವಾ ಪಯಣದಲ್ಲಿ 94 ಸೇವಾ ಯೋಜನೆಯ ಮೂಲಕ ಸಮಾಜದಿಂದ ಒಟ್ಟು ಮಾಡಿದ 25 ಲಕ್ಷವನ್ನು ಅಶಕ್ತರಿಗೆ ನೀಡುವ ಮೂಲಕ ಮಾಡಲು ಮನಸ್ಸಿದ್ದರೆ ಏನು ಮಾಡಲು ಸಾಧ್ಯ ಎಂದು ಮಾಡಿ ತೋರಿಸಿ ಈ ಸಮಾಜಕ್ಕೆ ಮಾದರಿಯಾಗಿದೆ ಈ ಸಂಸ್ಥೆ.
ಈ 33 ತಿಂಗಳ ಸೇವಾ ಪಯಣದಲ್ಲಿ ಈ ಸಮಾಜದ ಎರಡು ಅಶಕ್ತ ಕುಟುಂಬಗಳಿಗೆ ತುಳುನಾಡ ಪೊರ್ಲು ನಾಮಾಂಕಿತ ಮನೆ ನಿರ್ಮಾಣ ಮಾಡಿ ಕೊಟ್ಟಿದ್ದು. ಒಂದು ಸರಪಾಡಿಯ ಅಲ್ಲಿಪಾದೆ ಮತ್ತೊಂದು ಇರುವೈಲ್ ನ ಪೊರಿಮೇಲುನಲ್ಲಿ ಈ ಸಂಸ್ಥೆಯ ಸೇವಾ ಕಾರ್ಯವನ್ನು ಮನಗಂಡ ಕೆಲವು ಟಿವಿ ವಾಹಿನಿಯವರು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೆರಪ್ರಸಾರ ಕಾರ್ಯಕ್ರಮದಲ್ಲಿ ಕೂಡ ಈ ಸಂಸ್ಥೆಯ ಸೇವಾ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಇಲ್ಲಿ ಕೆಲ ಯುವಕರು ಈ ಸಂಸ್ಥೆಯಲ್ಲಿ ಮಹಿಳೆಯರು ಕೂಡ ಸಕ್ರಿಯವಾಗಿ ತೋಡಿಸಿಕೊಂಡಿದ್ದಾರೆ.
ಸ್ವಾರ್ಥಮಯವಾದ ಈ ಸಮಾಜದಲ್ಲಿ ಇಷ್ಟೆಲ್ಲಾ ಸೇವಾ ಕಾರ್ಯವನ್ನು ಕೇವಲ ಸಾಮಾಜಿಕ ಜಾಲತಾಣಗಳಾದ ಫೇಸ್’ಬುಕ್, ವಾಟ್ಸಾಪ್ ಉಪಯೋಗಿಸಿಕೊಂಡು ನಿಸ್ವಾರ್ಥವಾಗಿ ಸಮಾಜದ ಅಶಕ್ತರ ಪಾಲಿಗೆ ನೆರವಾಗುತ್ತಿರುವ ಈ ಸಂಸ್ಥೆಯ ಕಡೆ ತಾವು ಬಂದು ತಮ್ಮಿಂದ ಆಗುವ ಅಳಿಲು ಸೇವೆಯನ್ನು ನೀಡಿ, ನೀವು ನೀಡಿದ ಸೇವೆಯನ್ನು ಈ ಸಂಸ್ಥೆ ಖಂಡಿತವಾಗಿ ಅಶಕ್ತರ ಪಾಲಿಗೆ ನೆರವವಾಗುವುದಂತು ನಿಜ. ಮನಸ್ಸು ಬೇಕು, ಮನಸ್ಸಿದ್ದರೆ ಮಾರ್ಗ ಇದೆ, ಮಾರ್ಗಕ್ಕೆ ಸರಿಯಾದ ವೇದಿಕೆ ಕೂಡ ನಮ್ಮ ಈ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ). ಅನ್ನೋದು ಸತ್ಯ.
ಕೊನೆಯ ಮಾತು
ನನಗೆ ತಿಳಿದಷ್ಟು ಈ ಸಂಸ್ಥೆಯ ಬಗ್ಗೆ ಹೇಳಿದ್ದೇನೆ. ಗೋಪಾಲಕೃಷ್ಣ ಅಡಿಗರು ಒಂದು ಮಾತು ಹೇಳಿದ್ದರೆ, ಕಟ್ಟುವೆವು ನಾವು ಹೊಸ ನಾಡೊಂದ ರಸದ ಬಿಡೊಂದ. ಹೌದು ನಾವೆಲ್ಲರೂ ಒಟ್ಟಾಗಿ ಒಂದು ಸೃದೃಢ ಸಮಾಜವನ್ನು ಕಟ್ಟೋಣ. ಸಮಾಜ ನಮಗೆ ಏನು ಕೊಟ್ಟಿಲ್ಲ ಅಂತ ಹೇಳೋದಕ್ಕೆ ಸಮಾಜಕ್ಕಾಗಿ ನಾವು ಏನು ಕೊಟ್ಟಿದ್ದೇವೆ ಅನ್ನೋದನ್ನು ಆಲೋಚಿಸಿ. ಪರರ ಕಷ್ಟಗಳಿಗೆ ಜೀವ ಇರುವಾಗ ಬಾರದ ಕಣ್ಣೀರು ಸತ್ತಾಗ ಬರುತ್ತದೆ, ಬನ್ನಿ ಪರರ ಕಷ್ಟಕ್ಕೆ ಹೆಗಲಾಗೋಣ. ಅರಿತು ಬಾಳಿದರೆ ಬಾಳು ಬಂಗಾರ ಬೆರೆತ ಬಾಳಿದರೆ ಬಾಳು ಶೃಂಗಾರ ಅರಿತು ಬೆರೆತು ಬಾಳಿದರೆ ಜೀವನ ಸಾಕ್ಷಾತ್ತರವಾಗುದಂತು ಖಂಡಿತ. ನಿಮ್ಮ ಆಯ್ಕೆ ನಿಮಗೆ ಬಿಟ್ಟಿದ್ದು.
ಒಳಿತು ಮಾಡು ಮನುಷ
ನೀ ಇರೋದು ಮೂರು ದಿವಸ
ಸಂಪರ್ಕ
9880956086 ನವೀನ್ ಪಿಮಿಜಾರು
9686361585 ನೀತು ಪೂಜಾರಿ ಅಜಿಲಮೊಗರು
ಬರಹ: ನೀತು ಪೂಜಾರಿ ಅಜಿಲಮೊಗರು
Discussion about this post