No Result
View All Result
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ
English Articles

Ramachandrapura Seer Hails PM Narendra Modi’s Leadership

by ಕಲ್ಪ ನ್ಯೂಸ್
June 10, 2026
0

Kalpa Media House  |  Honavar/Sagara  | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...

Read moreDetails
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

ILCAD 2026 Observed in Mysuru Division; SWR Promotes Level Crossing Safety

June 9, 2026
ಬೆಂಗಳೂರು–ತುಮಕೂರು ರೈಲು ಮಾರ್ಗದ ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೆ | ₹162.57 ಕೋಟಿ ಅನುಮೋದನೆ

Indian Railways Sanctions ₹162.57 Crore Upgrade for Bengaluru–Tumakuru Rail Section

June 9, 2026
  • Advertise With Us
  • Grievances
  • About Us
  • Contact Us
Thursday, June 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಪತ್ರಿಕೆಗಳನ್ನು ಓದುವುದರಿಂದ ಜ್ಞಾನಾಭಿವೃದ್ಧಿ: ಪತ್ರಕರ್ತ ವೈದ್ಯ ಅಭಿಮತ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 25, 2019
in Small Bytes, ಭದ್ರಾವತಿ
0
ಪತ್ರಿಕೆಗಳನ್ನು ಓದುವುದರಿಂದ ಜ್ಞಾನಾಭಿವೃದ್ಧಿ: ಪತ್ರಕರ್ತ ವೈದ್ಯ ಅಭಿಮತ
Share on FacebookShare on TwitterShare on WhatsApp

ಭದ್ರಾವತಿ: ಜ್ಞಾನಾಭಿವೃದ್ದಿ ಹೆಚ್ಚಾಗಲಿರುವ ಕಾರಣದಿಂದ ಪತ್ರಿಕೆಗಳನ್ನು ಓದುವುದು ಅವಶ್ಯಕವಾಗಿ ಬುದ್ದಿಶಕ್ತಿಗೆ ಸಹಕಾರಿಯಾಗಿವೆ, ಸಾತ್ವಿಕ ಮನಸ್ಸು, ಆಧ್ಯಾತ್ಮಿಕ ಚಿಂತನೆ ಪ್ರಾಂಜನ ಮನಸ್ಸು ಇರುವೆಡೆ ಸಮಾಧಾನ ಲಭಿಸಲಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವೈದ್ಯ ಹೇಳಿದರು.

ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಸಾಯಿಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಭಗವಾನ್ ಸತ್ಯಸಾಯಿಬಾಬ ಸೇರಿದಂತೆ ಎಲ್ಲಾ ದಾರ್ಶನಿಕರು ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳುವ ಮೂಲಕ ಇತರರಿಗೆ ಹೇಗೆ ಬದುಕಬೇಕೆಂದು ತಿಳಿಸಿದ್ದಾರೆ. ಆದರೆ ಇಂದು ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಲ್ಲಿ ವಿಫಲರಾಗಿ, ಬದುಕಿನಲ್ಲಿ ಶಾಂತಿ, ನೆಮ್ಮದಿಯಿಲ್ಲದೆ ಕಂಗಾಲಾಗಿದ್ದೇವೆ. ದಾರ್ಶನಿಕರು ಹಾಕಿಕೊಟ್ಟ ಹಾದಿಯಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿಗಾಗಿ ಅವರ ಮಾತುಗಳನ್ನು ಜವಾಬ್ದಾರಿಯಿಂದ ಕಾಯ್ದುಕೊಳ್ಳಬೇಕಿದೆ.

ಶಿಕ್ಷಣ ಕೇವಲ ಭವಿಷ್ಯದ ಉದ್ಯೋಗಕ್ಕಾಗಿ ಅಥವಾ ಉತ್ತಮ ಅಂಕಗಳಿಸಲು ಇರುವ ಒಂದು ಪ್ರಕ್ರಿಯೆಯಲ್ಲ. ಜ್ಞಾನಾರ್ಜನೆಗಾಗಿ ವಿವಿಧ ವಿಷಯಗಳನ್ನು ನಾನಾ ಮಾರ್ಗಗಳಿಂದ ಪಡೆಯುವ ಸಾಧನೆಯಾಗಿದೆ. ಇಂತಹ ಸಾಧನೆಗೆ ವೃತ್ತ ಪತ್ರಿಕೆಗಳು ಉತ್ತಮ ಸಾಧನೆಯಾಗಿದ್ದು ವಿದ್ಯಾರ್ಥಿಗಳು ಪ್ರತಿನಿತ್ಯ ಪತ್ರಿಕೆಗಳನ್ನು ಓದುವುದರಿಂದ ನೂತನ ಪದಗಳನ್ನು ಗ್ರಹಿಸಲು ಸಾಧ್ಯವಾಗಲಿದೆ ಎಂದರು.

ತಾಲೂಕು ಸಂಘದ ಅಧ್ಯಕ್ಷ ಕೆ.ಎನ್.ಶ್ರೀಹರ್ಷ ಪಾಸ್ತಾವಿಕ ನುಡಿಗಳನ್ನಾಡಿ ಆಧುನಿಕ ಆವಿಷ್ಕಾರಗಳಾದ ಟಿವಿ, ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಇಂದು ಸಮೂಹ ಸುದ್ಧಿಮಾದ್ಯಮ ನಾಗಲೋಟದಲ್ಲಿ ಬೆಳೆಯುತ್ತಿವೆ. ದೃಶ್ಯ ಮಾಧ್ಯಮದಲ್ಲಿ ದೊರಕುವ ಜ್ಞಾನ ಕ್ಷಣಿಕ. ಇವೆಲ್ಲದರ ನಡುವೆಯೂ ದಿನಪತ್ರಿಕೆಗಳು ಹಿಂದಿನಂತೆ ಸಮಾಜ ಮುಖಿಯಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಾ ಜನಪ್ರಿಯತೆಯನ್ನು ಉಳಿಸಿಕೊಂಡು ಬೆಳೆಯುತ್ತಾ ಬಂದಿವೆ. ಪತ್ರಿಕೆಗಳನ್ನು ಓದುವ ಹಾಗು ಬರೆಯುವುದರಿಂದ ಲಭಿಸುವ ಜ್ಞಾನ ಸಂಪತ್ತು ಅಚ್ಚಳಿಯದೆ ಉಳಿಯುವ ಪ್ರಭಾವ ಬೀರುವಷ್ಟರ ಮಟ್ಟಿಗೆ ಸಶಕ್ತವಾಗಿರುವ ಕಾರಣದಿಂದ ಪತ್ರಿಕೆಗಳು ಇಂದಿಗೂ ಉಳಿದು ಬೆಳೆದಿರುವುದಕ್ಕೆ ಕಾರಣವಾಗಿದೆ ಎಂದರು.

ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಆಢಳಿತಾಧಿಕಾರಿ ಡಿ.ಪ್ರಭಾಕರ್‍ಬೀರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣ ಎಂದರೆ ಪಠ್ಯಪುಸ್ತಕ ಓದುವುದಕ್ಕೆ ಸೀಮಿತವಾದ ಕ್ರಿಯೆ ಎಂದು ಭಾವಿಸದೆ ವಿದ್ಯಾರ್ಥಿ ಜೀವನದಿಂದಲೇ ಹೊಸ, ಹೊಸ ಸಂಗತಿಗಳನ್ನು ತಿಳಿಸಲು ಸಹಕಾರಿಯಾಗಿರುವ ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕ್ರೀಡೆ, ಸಂಸ್ಕøತಿ, ವಿಜ್ಞಾನ, ಸೌಂದರ್ಯ, ಸಿನಿಮಾ, ಮನರಂಜನೆ, ದೇಶ ವಿದೇಶಗಳ ಪ್ರಸ್ತುತ ವರ್ತಮಾನ ಸೇರಿದಂತೆ ಅನೇಕ ವಿಷಯಗಳನ್ನು ತಿಳಿಯಲು ಸಾಧ್ಯ ವಾಗುವುದರೊಂದಿಗೆ ಜ್ಞಾನದ ಪರಮಾವದಿ ವಿಸ್ತಾರಗೊಳ್ಳುತ್ತದೆ.

ವಿದ್ಯಾರ್ಥಿಗಳು ಡಾಕ್ಟರ್ ಅಥವ ಇಂಜಿನಿಯರ್ ಆಗುವುದಕ್ಕಾಗಿ ಓದಬೇಕು ಎಂಬ ಮನಸ್ಥಿತಿಯಿಂದ ಹೊರಬಂದು ಬೇರೆ ವೃತ್ತಿಗಳ ಹೊರತಾಗಿಯೂ ಸಾಧಿಸಲು ಅನೇಕ ವೃತ್ತಿಗಳಿವೆ. ಸ್ಪರ್ಧಾತ್ಮಕವಾದ ಇಂದಿನ ದಿನಗಳಲ್ಲಿ ಐಎಎಸ್, ಐಪಿಎಸ್ ಹಾಗು ಪತ್ರಿಕೋಧ್ಯಮಗಳಂತಹ ಹೊಸ ಅವಿಷ್ಕಾರಗಳನ್ನು ರೂಪಿಸಿಕೊಳ್ಳಬೇಕಿದೆ ಎಂದರು.

ಜಿಲ್ಲಾ ಸಂಘದ ಉಪಾಧ್ಯಕ್ಷ ನಿಂಗನಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಿಕಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿನಿಯರಾದ ಕವನ, ಚಂದ್ರಕಲಾ, ಅಂಕಿತ ಮಾತನಾಡಿ ಪತ್ರಿಕೆಗಳನ್ನು ಓದುವುದರಿಂದ ಪ್ರಪಂಚದ ಆಗು ಹೋಗುಗಳ ತಿಳುವಳಿಕೆಯ ಜೊತೆಗೆ ಪದಗಳ ಬಳಕೆ ಮತ್ತು ಜ್ಞಾನ ಸಂಪತ್ತಿನ ವಿಕಸನ ವಾಗುತ್ತದೆ ಎಂದರು.

ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಬಸವರಾಜ್, ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ಉಪಸ್ಥಿತರಿದ್ದರು. ಪ್ರಾಂಶುಪಾಲ ಮೃತ್ಯಂಜಯ ಕಾನಿಟ್ಕರ್ ಸ್ವಾಗತಿಸಿ, ಇಂಪನಾ ಪ್ರಾರ್ಥಿಸಿ, ಶ್ಯಾಮರಾಯಾಚಾರ್ ವಂದಿಸಿದರೆ, ಭವಾನಿಬೇಂದ್ರೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹತ್ತನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

Tags: BhadravathiKannada NewsNews PaperPress Dayಪತ್ರಿಕಾ ದಿನಾಚರಣೆಪತ್ರಿಕೆಭದ್ರಾವತಿಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ
Share196Tweet123Send
Previous Post

ತುಳು ಭಾಷೆ ದೇಶದ ಪ್ರತಿಷ್ಟಿತ ಭಾಷೆಗಳಲ್ಲಿ ಒಂದಾಗಿದೆ: ಬಿ.ಚಂದ್ರಹಾಸ

Next Post

ವಿಐಎಸ್‍ಎಲ್ ನಗರಪ್ರದೇಶ ಖಾಸಗೀ ವ್ಯಕ್ತಿಗಳಿಗೆ ಹಸ್ತಾಂತರಿಸಲು ವಿರೋಧ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ವಿಐಎಸ್‍ಎಲ್ ನಗರಪ್ರದೇಶ ಖಾಸಗೀ ವ್ಯಕ್ತಿಗಳಿಗೆ ಹಸ್ತಾಂತರಿಸಲು ವಿರೋಧ

ವಿಐಎಸ್‍ಎಲ್ ನಗರಪ್ರದೇಶ ಖಾಸಗೀ ವ್ಯಕ್ತಿಗಳಿಗೆ ಹಸ್ತಾಂತರಿಸಲು ವಿರೋಧ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ | ಕಾರಣವೇನು?

ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಟ: ಮೂವರು ಯುವಕರು ಪೊಲೀಸರ ವಶಕ್ಕೆ

June 11, 2026
ಜಾಗತಿಕ ಕಾರ್ಮಿಕ ಸಮ್ಮೇಳನ | ಏನಿದು ಭಾರತದ 29 ಕಾರ್ಮಿಕ ಕಾನೂನುಗಳು – 4 ಲೇಬರ್ ಕೋಡ್’ಗಳು?

ಜಾಗತಿಕ ಕಾರ್ಮಿಕ ಸಮ್ಮೇಳನ | ಏನಿದು ಭಾರತದ 29 ಕಾರ್ಮಿಕ ಕಾನೂನುಗಳು – 4 ಲೇಬರ್ ಕೋಡ್’ಗಳು?

June 11, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

June 10, 2026
ಸೊರಬ | 10 ವರ್ಷದ ಚಿರತೆ ಸಾವು | ವಿದ್ಯುತ್ ಹರಿಸಿ ಕೊಂದರಾ?

ಸೊರಬ | 10 ವರ್ಷದ ಚಿರತೆ ಸಾವು | ವಿದ್ಯುತ್ ಹರಿಸಿ ಕೊಂದರಾ?

June 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL