ಬೆಂಗಳೂರು: ಧನಕನಕಗಳನ್ನು ಭಕ್ತರಿಗೆ ವರವಾಗಿ ನೀಡುವ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಶ್ರಾವಣ ಮಾಸದ ಪ್ರಸಿದ್ಧ ಹಿಂದೂ ಪರ್ವ(ಹಬ್ಬ)ಗಳಲ್ಲಿ ವರಮಹಾಲಕ್ಷ್ಮಿ ವ್ರತವೂ ಒಂದಾಗಿದೆ.
ಇದರ ಅಂಗವಾಗಿ ಮೈಸೂರು ರಸ್ತೆಯಲ್ಲಿರುವ ಟ್ರೈಡೆಂಟ್ ಹೋಂಡಾ ಶೋ ರೂಂನಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಟ್ರೈಡೆಂಟ್ ಹೋಂಡಾ ಶೋ ರೂಂನ ಉದ್ಯೋಗಿಗಳಾದ ನೌಕೀಕ, ಕಾವ್ಯ, ಸೃಜನ ಹಾಗೂ ವರ್ಷ ಅವರುಗಳು ಅಮೃತ ಕಾಲದಲ್ಲಿ ಪೂಜೆ ನೆರವೇರಿಸಿದರು.
ಆ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಉದ್ಯೋಗಿ ನೌಕೀಕ, ವರಮಹಾಲಕ್ಷ್ಮಿ ವ್ರತ ಮಾಡುವವರು ಸಂಕಲ್ಪ ಮಾಡಿ ದೇವಿಯನ್ನು ಕಲಶ ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ಪೂಜಿಸಿದಾಗಿ ತಾಯಿಯ ಅನುಗ್ರಹ ಪಡೆಯುವುದು ನಿಶ್ಚಿತ ಎಂದರು.
ಕಲಶದಲ್ಲಿ ಅಕ್ಕಿ ತುಂಬಿಸಿ ಖರ್ಜೂರ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಇರಿಸುವರು. ಈ ಕಳಶಕ್ಕೆ ಲಕ್ಷ್ಮೀ ಕಲಸ ಎನ್ನುತ್ತಾರೆ. ಅದರ ಮೇಲೆ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಮುಖವಾಡವನ್ನಿಟ್ಟು ಅಥವಾ ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು ಕಣ್ಣು ಕಿವಿ ಮಾಡಿ, ಒಡವೆಗಳನ್ನು ಇರಿಸಿ, ಸೀರೆ ಉಡಿಸಿ, ಅಲಂಕಾರ ಮಾಡಲಾಗುತ್ತದೆ. ದೇವಿಯ ಮೂರ್ತಿಗೂ ಅರಿಶಿನ, ಕುಂಕುಮ, ಹೂವು, ಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ, ಪೂಜಿಸಿದ ಹೆಣ್ಣುಮಕ್ಕಳು ಆ ದಾರಗಳಿಗೆ ಹೂವನ್ನು ಕಟ್ಟಿ, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಳ್ಳುವರು. ಹಾಗೆ ಕಟ್ಟಿಸಿಕೊಂಡ ನಂತರ ಆ ಹಿರಿಯರಿಗೆ ನಮಸ್ಕರಿಸಿ ದಕ್ಷಿಣೆಯೊಂದಿಗೆ ದಾನವನ್ನು ಕೊಡುವರು. ಅದೇ ರೀತಿ ಇಂದು ನಾವು ಇಲ್ಲಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಿದ್ದೇವೆ ಎಂದರು.
ಸಂಸ್ಥೆಯ ಉದ್ಯೋಗಿಗಳಾದ ನೌಕೀಕ, ಕಾವ್ಯ, ಸೃಜನ, ವರ್ಷ ಮತ್ತು ಕಾರ್ತಿಕ್, ಪ್ರಶಾಂತ್, ಸಂದೀಪ್, ರಾಕೇಶ್, ರವಿ, ಮತ್ತು ಹೋಂಡಾ ಮೈಸೂರು ರಸ್ತೆ ಶೋರೂಂನ ಸೇಲ್ಸ್ ಮ್ಯಾನೇಜರ್ ಮಹೇಶ್, ಸರ್ವೀಸ್’ನ ಶಾಖಾಧಿಕಾರಿ ದರ್ಶನ್ ಹಾಗೂ ಹೊಸ ಕಾರು ಖರೀದಿಸಲು ಬಂದಿದ್ದ ಗ್ರಾಹಕರು ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿದ್ದರು.
ಚಿತ್ರ, ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ, ಬೆಂಗಳೂರು
Discussion about this post