No Result
View All Result
IBM and Yotta Announce Plans to Deliver Agentic AI Platform for Indian Enterprises
English Articles

IBM and Yotta Announce Plans to Deliver Agentic AI Platform for Indian Enterprises

by ಕಲ್ಪ ನ್ಯೂಸ್
May 9, 2026
0

Kalpa Media House  |  Bengaluru | IBM (NYSE: IBM) and Yotta Data Services Private Limited ("Yotta") today announced plans to...

Read moreDetails
ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

Pure Gold Within the Uniform: Jayakara Airody, The Great Voice of Humanity

May 9, 2026
Kotak Mahindra Bank Announces Results

Kotak Mahindra Bank Announces Results

May 4, 2026
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
  • Advertise With Us
  • Grievances
  • About Us
  • Contact Us
Sunday, May 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಹಾಳು ಸಾವನ್ನು ಬಿಟ್ಟು ಸುಂದರ ಬದುಕಿನ ಬಗ್ಗೆ ನೆನೆಯೋಣ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 27, 2019
in Special Articles
0
ಹಾಳು ಸಾವನ್ನು ಬಿಟ್ಟು ಸುಂದರ ಬದುಕಿನ ಬಗ್ಗೆ ನೆನೆಯೋಣ
Share on FacebookShare on TwitterShare on WhatsApp

ಅತೃಪ್ತ ಶಾಸಕರ ಜನ್ಮ ಕುಂಡಲಿಯನ್ನು ಜಾಲಾಡುತ್ತಾ ಚರ್ವಿತಚರ್ವಣವೆಂಬಂತೆ 2 ಅಮೂಲ್ಯ ವಾರಗಳನ್ನು ವ್ಯರ್ಥವಾಗಿ ಕಳೆದ ಕರುನಾಡಿನ ಕುರುಡು ದೃಶ್ಯ ಮಾಧ್ಯಮಗಳಿಗೆ ಹಿಮಾದಾಸಳ ಅಮೋಘ ಸಾಧನೆಯು ಸುದ್ದಿಯಾಗದೇ ಉಳಿಯಿತು. ಕಾಶ್ಮೀರದ ಮಹತ್ತರ ಬೆಳವಣಿಗೆಗಳೂ ಪ್ರಮುಖವೆನಿಸಲಿಲ್ಲ.

ಅಷ್ಟೋ ಇಷ್ಟೋ ಎಂಬಂತೆ ಚಂದ್ರಯಾನ 2ರ ಸಾಧನೆಯೊಂದು ಮಾತ್ರ ಸ್ವಲ್ಪ ಸುದ್ದಿ ಮಾಡಿದರೂ TRPಯ ನಶೆಯೇರಿಸಿಕೊಂಡು ಸದಾ ಅತೃಪ್ತರಾಗಿರುವ ಇವರಿಗೆ ಜುಲೈ 29ರ ರಾತ್ರಿ ಕೆಫೆ ಕಾಫಿ ಡೇ ಮಾಲೀಕ ವಿಜಿ ಸಿದ್ದಾರ್ಥ್ ಕಾಣೆಯಾಗಿದ್ದು ಕಾಫಿಯಂತೆ ಬಿಸಿ ಬಿಸಿ ಸುದ್ದಿಯಾಗಿತ್ತು. ಉಸಿರು ಬಿಡದಂತೆ ಒಂದೇ ಸಮನೆ ಅದನ್ನು ಬಗೆ ಬಗೆಯಾಗಿ ಹೇಳಿ, ತೋರಿಸಿ, ವೈಭವೀಕರಿಸಿ ಮಸಾಲೆ ಬೆರೆಸಿ ವರದಿ ಮಾಡಿ ತಾವು ವಿಕೃತ ವಿಘ್ನ ಸಂತೋಷಿಗಳೆಂದು ತೋರಿಸಿಕೊಟ್ಟದ್ದು ನಮ್ಮ ದುರಂತ.

ಯಶಸ್ವಿ ಉದ್ಯಮಿಯಾಗಿ ಆತ ತೃಣದಿಂದ ಬೆಳೆದು ತ್ರಿವಿಕ್ರಮನಾಗಿದ್ದು, ಕಂಡವರು ಹುಬ್ಬೇರಿಸುವಂತೆ ಅಂತಾರಾಷ್ಟ್ರೀಯ ಮಟ್ಟದ ಉದ್ಯಮವನ್ನು ತನ್ನ ಅವಿರತ ಪ್ರಯತ್ನದಿಂದ ಛಲದಿಂದ ಕಟ್ಟಿ, ಬೆಳೆಸಿ ಕಾಫಿಗೆ ಗೌರವವನ್ನು ತಂದವರು. ಅವರ ಧಾರುಣ ಸಾವಿನ ಸುದ್ದಿಯನ್ನು ಮಾಧ್ಯಮಗಳಲ್ಲಿ ದಿಢೀರನೇ ಕೇಳಿದ ಕನ್ನಡಿಗರಿಗೆಲ್ಲಾ ಆಘಾತವಾಗಿರುವುದಂತೂ ನಿಜ. ಉದ್ಯಮಿಯಾಗ ಬಯಸುವ, ಹಣ ಮತ್ತು ಯಶಸ್ಸಿನ ಬೆನ್ನತ್ತಿ ಹೊರಡುವ ಪ್ರತಿಯೊಬ್ಬರಿಗೂ ನಿತ್ಯ ಪಾಠವಾಗಬಲ್ಲ ಜೀವನದ ಸತ್ಯವನ್ನು ಅನಾವರಣಗೊಳಿಸಿ ಮತ್ತೆಂದೂ ಮರಳಿಬಾರದ ಲೋಕದತ್ತ ಶಾಶ್ವತವಾಗಿ ತೆರಳಿದ ಅದಮ್ಯ ಚೇತನಕ್ಕೆ ಭಾವಪೂರ್ಣ ಅಶ್ರುತರ್ಪಣ. ಧೈರ್ಯದಿಂದ ಸಾಹಸ ಮಾಡಿ. ಗೆದ್ದರೆ ಯಶಸ್ಸು, ಸೋತರೆ ಪಾಠವೆಂಬ ಆಂಗ್ಲ ನಾಣ್ಣುಡಿಯ ನಿಜವಾದ ಅರ್ಥವನ್ನು ನಾನು ಅರಿತದ್ದು ಈ ಘಟನೆಯಿಂದಲೇ.

ಸಾವನ್ನು ವೈಭವೀಕರಿಸಿ ಸಾಧಿಸುವುದೇನು? ಛೇ! ಈ ಸಾವು ನ್ಯಾಯವೇ ಎಂದೆನಿಸುವುದಾದರೂ ಉಳ್ಳವರ ಪಾಡನ್ನು ನಾವು ಊಹಿಸಿಕೊಳ್ಳುವುದು ಅಸಾಧ್ಯ. ಹೀಗಾಗಬಾರದಿತ್ತು ಎನ್ನಬಹುದಷ್ಟೇ. ಕಾಲವು ನಮಗೆ ಹಿಂದಕ್ಕೆ ಹೋಗುವ ಅವಕಾಶವನ್ನೆಂದೂ ಕೊಡಲಾರದು. ಏನಾಗಲಿ ಮುಂದೆ ಸಾಗು ನೀನೆಂಬುದೇ ಬದುಕಿನ ನಿತ್ಯ ಸತ್ಯ. ವ್ಯಕ್ತಿಯೊಬ್ಬನಿಗೆ ಸಾಯಲು 100 ಕಾರಣಗಳಿರಬಹುದಾದರೂ, ಬದುಕಲು 101 ಕಾರಣಗಳಿರುತ್ತದೆ. ಇದು ತಿರುವುಮುರುವಾದಾಗ ಇಂಥದ್ದು ಸಂಭವಿಸುತ್ತದೆ. ದಾರ್ಶನಿಕರಾಗುವುದು ಸುಲಭ. ಸಾಧಕರಾಗುವುದು ಕಷ್ಟ. ಸಾವಿನಲ್ಲೂ ನಾವು ಬಹಳ ಕಲಿಯುವುದಿದೆ.

ನಕಾರಾತ್ಮಕವಾದುದನ್ನು ಬಿಟ್ಟರೆ ಯಾವ ಸಾಧನೆಯುೂ ಸಾಧ್ಯ. ಸಾವಿನ ಬದಲು ಅವರ ಬದುಕು ಸಾಧನೆಗಳ ಬಗ್ಗೆ ಚರ್ಚೆಯಾಗಲಿ. ಸಮುದ್ರಮಥನದಲ್ಲಿ ಮೊದಲು ಬಂದಿದ್ದು ವಿಷವೇ. ವಿಷಕಂಠರಾದವರಿಗೆ ಮಾತ್ರ ಕೊನೆಯಲ್ಲಿ ಅಮೃತದ ಪ್ರಾಪ್ತಿ. ಆದರೆ ನೆನಪಿರಲಿ Short cut will cut you short.
ಭಾರತವು ವಿಜ್ಞಾನ ಜಗತ್ತಿಗೆ ನೀಡಿದ್ದ ಬಲು ದೊಡ್ಡ ಕೊಡುಗೆಯೆಂದರೆ ಶೂನ್ಯದ ಆವಿಷ್ಕಾರ. ಅದರ ಮೌಲ್ಯವು ನಾವು ಅದನ್ನು ಬಳಸಿಕೊಳ್ಳುವುದರ ಪರಿಯಲ್ಲಿದೆ. ಸಂಖ್ಯೆಯೊಂದರ ಎಡಕ್ಕೆ ಶೂನ್ಯ ಸೇರಿಸಿದರೆ ನಿರರ್ಥಕವೆನಿಸುವುದಾದರೂ, ಅದನ್ನು ಬಲಕ್ಕೆ ಸೇರಿಸಿದರೆ ಸಾರ್ಥಕವಾಗುವುದು. ಇದುವೇ ಜೀವನದ ಸಂಖ್ಯಾಶಾಸ್ತ್ರದ ತತ್ವವೆಂದು ತಿಳಿದವನಿಗೆ ಶೂನ್ಯವು ಎಂದಿಗೂ ಮನಸ್ಸನ್ನು ತುಂಬಿಕೊಳ್ಳುವುದು ಅಸಾಧ್ಯ. ಹೀಗಾದರೆ ಮಾತ್ರ ಬದುಕಿನಲ್ಲಿ ಸಾರ್ಥಕತೆಯನ್ನು ಕಾಣಬಹುದು. ಇಲ್ಲವಾದರೆ ಬುದ್ಧನಂತೆ ಶೂನ್ಯದಲ್ಲೇ ಪರ್ಯವಸಾನವಾದೀತು. ಯಾರಿಗೂ ಎಂದೂ ಹೀಗಾಗದಿರಲೆಂಬುದೇ ನಮ್ಮ ಆಶಯ. ಮಹತ್ವವಿರುವುದು ಬುದ್ಧನ ಹೊಸ ಹುಟ್ಟಿಗೇ, ಹೊರತು ಹಳೆಯ ಸಿದ್ಧಾರ್ಥನ ಸಾವಿಗಲ್ಲ. ಸನಾತನ ದರ್ಶನದಲ್ಲಿ ಆತ್ಮಕ್ಕೆ ಸಾವಿಲ್ಲವಾದುದರಿಂದ ಅದರ ಬಗ್ಗೆ ಹೆಚ್ಚಿನ ನಿಷ್ಕರ್ಷೆ ಅನಗತ್ಯ ಮತ್ತು ನಿರಪೇಕ್ಷ.

ಬೆಟ್ಟದಷ್ಟನ್ನು ಸಾಧಿಸುವ ಬಯಕೆ, ಆಗಸಕ್ಕೇ ಬಲೆ ಬೀಸುವ ಕನಸು, ಸಮುದ್ರವನ್ನೇ ಕುಡಿಯುವಷ್ಟು ಬಾಯಾರಿಕೆ, ಪಡೆದಷ್ಟೂ ತೀರದ ಹಸಿವು ನಮ್ಮನ್ನು ಸಾಧನೆಯ ಶಿಖರಾಗ್ರಕ್ಕೂ ಏರಿಸಬಲ್ಲವು. ಸ್ವಲ್ಪ ಎಡವಟ್ಟಾದರೆ ಸೋಲಿನ ಪ್ರಪಾತಕ್ಕೂ ತಳ್ಳಬಲ್ಲವು. ಸ್ವಪ್ರಯತ್ನವು ಮಾತ್ರ ಸಾಲದು. ಜೊತೆಗೆ ದೈವೀಕೃಪೆಯೆನ್ನಿ ಅಥವಾ ಅದೃಷ್ಟವೆನ್ನಿ. ಅದು ಬೇಕೇ ಬೇಕು. ಇಲ್ಲವಾದರೆ ಸೋಲೆಂಬುದೇ ಇರುತ್ತಿರಲಿಲ್ಲ. ಆದರೆ 100 ಬಾರಿ ಸೋತರೂ ಧೃತಿಗೆಡದೆ ಪುಟಿದೇಳುವ ಅದಮ್ಯ ಜೀವನ ವಿಶ್ವಾಸವೇ ಸಾಧಕನ ಮುಖ್ಯಲಕ್ಷಣ. ಸಾವು ಎನ್ನುವುದು ಜೀವನದ ಕೊನೆಯಲ್ಲವೆಂಬ ದಾರ್ಶನಿಕ ಸತ್ಯವನ್ನು ತಿಳಿದವನೆಂದೂ ಆತ್ಮಹತ್ಯೆಗೆಳಸಲಾರ. ತಪ್ಪು ಮಾಡದವರು ಯಾರುಂಟು? ಆದರೆ ತಿದ್ದಿಕೊಂಡವನೇ ಜಾಣ.

ಕಷ್ಟ ಬಂದಾಗ ಸಾವು ಪರಿಹಾರವಾಗುವುದೇ? ಸಾಧನ ಶರೀರವನ್ನೂ, ಸಾಧನಾ ಲೋಕವನ್ನೂ ತೊರೆದು ಮುಕ್ತಿಯು ಅಸಾಧ್ಯವೆಂಬುದು ವೈದಿಕ ಸತ್ಯ. ಆರ್ಷ ಬೋಧೆಯಲ್ಲಿ ಹಂತಹಂತವಾಗಿ ಬರುವ ಜೀವನದ 4 ಪುರುಷಾರ್ಥಗಳ ಮರ್ಮವನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ. ಜೀವನದ ನಿಜವಾದ ಗುರಿಯ ಬಗ್ಗೆ ದಾರ್ಶನಿಕ ದೃಷ್ಟಿ ಇಲ್ಲದಿದ್ದರೆ ಲೌಕಿಕ ಬುದ್ಧಿಗೆ ಮಂಕು ಬಡಿದಾಗ ಶೂನ್ಯವು ಆವರಿಸಿ ಇಂತಹಾ ಅತಿರೇಕಕ್ಕೆ ಕಾರಣವಾಗಬಹುದು. ವ್ಯವಹಾರದಲ್ಲಿ ಹಣದ ಹೊರತಾಗಿ ಮನುಷ್ಯ ಕಳೆದುಕೊಳ್ಳುವುದು ಏನಿದೆ? ಹುಟ್ಟಿನಿಂದ ಪಡೆದು ಬಂದದ್ದೇನೂ ಇಲ್ಲವಷ್ಟೇ? ಜೀವಕ್ಕಿಂತ ಹೆಚ್ಚಿನದ್ದೇನಿದೆ?

ಸಿದ್ಧಾರ್ಥ್ ಹಿಂದೊಮ್ಮೆ ನುಡಿದಿದ್ದ ಮಾತುಗಳು ನಮ್ಮನ್ನು ಬಹುವಾಗಿ ಕಾಡದಿರವು ಮನುಷ್ಯ ಐದಾರು ಕೋಟಿ ಗಳಿಸಿದ ಹಣದ ಮೇಲಿನ ಆಕರ್ಷಣೆಯ ಕಡಿಮೆಯಾಗಿ ನಂತರ ಕೀರ್ತಿಯೇ ಪ್ರಮುಖವೆನ್ನಿಸುತ್ತದೆ. ಅದೊಂದು ಹುಚ್ಚು ಪ್ರವಾಹದಂತೆ. ಇಷ್ಟೆಲ್ಲಾ ತಿಳಿದ ಮನುಷ್ಯನೊಬ್ಬ ತಾನು ಕೇವಲ ಸಾಲಕ್ಕೆ ಬೆದರಿ ಹೀಗೆ ಏಕಾಏಕಿ ಸಾಯುವ ನಿರ್ಧಾರ ಮಾಡುವುದು ಸಾಧ್ಯವೇ? ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಹಾಗಾಗಿ ಯಾವ ತಪ್ಪೂ ಮಾಡದೇ ಇದ್ದ ಶ್ರೀಮಂತನೊಬ್ಬ ಹೀಗೆ ಹೆದರಿ ಜೀವಕಳೆದುಕೊಳ್ಳುವ ನಿರ್ಧಾರ ಮಾಡಲಾರ. ಆದಾಯ ಘೋಷಿತವಾಗದ 480 ಕೋಟಿ ಆಸ್ತಿಯನ್ನು ಸಿದ್ದಾರ್ಥ್ ಐಟಿ ಅಧಿಕಾರಗಳ ಮುಂದೆ ಈ ಹಿಂದೆ ಒಪ್ಪಿಕೊಂಡದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಾಗಿ ಅವರದ್ದು ತಪ್ಪೇ ಇಲ್ಲವೆನ್ನುವುದು ಅತಿರೇಕವಾದೀತು. ಭಾರತೀಯರಲ್ಲಿ ಇತ್ತೀಚೆಗೆ ಸಮಾಜಘಾತಕರನ್ನೂ ಕೂಡಾ ಸಾವಿನ ನಂತರ ಸಜ್ಜನರೆಂದು ಕೊಂಡಾಡುವ ಬೂಟಾಟಿಕೆಯು ಸರ್ವೇಸಾಮಾನ್ಯವಾಗಿದೆ.

ಆತ ಬದುಕಿದ್ದಾಗ ಕವಡೆ ಕಾಸಿನ ಸಹಾಯವನ್ನೂ ಮಾಡದವರು ಅದೇ ವ್ಯಕ್ತಿ ಸತ್ತಾಗ ಬಂದು ಗುಣಗಾನ ಮಾಡಿ ಬಕೀಟುಗಟ್ಟಲೇ ಕಣ್ಣೀರು ಸುರಿಸಿದ್ದನ್ನೂ ನಾವು ಕಾಣುತ್ತೇವೆ. ಅದೇನೇ ಇರಲಿ. ವ್ಯಕ್ತಿಯು ಸತ್ತ ಮೇಲೆ ಸಮಾಜ ಏನನ್ನು ಕುರಿತು ಚಿಂತಿಸಬೇಕು? ಈಗ ಸಿದ್ಧಾರ್ಥ್ ಸಾವನ್ನು ಮರೆತು ಅವರ ಬದುಕಿನ ಬಗ್ಗೆ, ನಡೆದು ಬಂದ ಕಠಿಣ ಹಾದಿಯ ಬಗ್ಗೆ, ಶಿಸ್ತು ಸಂಯಮದ ಕಾರ್ಯಕ್ಷಮತೆಯ ಬಗ್ಗೆ, ನಂಬಿ ಬಂದ ಮೌಲ್ಯ ಆದರ್ಶಗಳ ಬಗ್ಗೆ, ಯಶಸ್ಸಿನತ್ತ ಅವರಿಟ್ಟ ಮೊದಲ ಬಾಲಿಶ ಹೆಜ್ಜೆಗಳ ಬಗ್ಗೆ, ನಂತರ ಓಡಿದ ನಾಗಾಲೋಟದ ಬಗ್ಗೆ, ಬೆಳೆದ ತದನಂತರದ ದೈತ್ಯ ದಾಂಗುಡಿಯ ಬಗ್ಗೆ, ಕಂಡ ಬಣ್ಣದ ಕನಸುಗಳ ಬಗ್ಗೆ, ನವಿರಾದ ಮಾನವೀಯ ಸಂಬಂಧಗಳ ಬಗ್ಗೆ, ಕಷ್ಟಕ್ಕೆ ಮಿಡಿಯುವ ಹೂಮನಸ್ಸಿನ ಬಗ್ಗೆ, ಸನ್ನಡತೆಯ ಬಗ್ಗೆ, ಕೊಟ್ಟಿರುವ ಉದಾರ ದಾನಗಳ ಬಗ್ಗೆ, ಬಿಟ್ಟು ಹೋದ ಸುಂದರ ನೆನಪುಗಳ ಬಗ್ಗೆ, ಕಟ್ಟಿಕೊಟ್ಟ ಸಹಸ್ರಾರು ಸುಭದ್ರ ಬದುಕುಗಳ ಬಗ್ಗೆ ಚರ್ಚೆಯಾಗಲಿ, ವಿಚಾರ ವಿಮರ್ಶೆಯಾಗಲಿ.

ಈ ಸುವಿಚಾರಗಳನ್ನು ಬರಡು ಭೂಮಿಯಲ್ಲಿ ಬಿತ್ತಿದರೂ ನೂರು ಜನ ಸಿದ್ಧಾರ್ಥರು ಹುಟ್ಟಿಬರಬಲ್ಲ ಗುಣ ಕನ್ನಡದ ಮಣ್ಣಿಗಿದೆ. ಕಾಲಗರ್ಭದಲ್ಲಿ ಇಂತಹಾ ಅದೆಷ್ಟು ಸಿದ್ಧಾರ್ಥರು ಆಗಿ ಹೋದರೋ? ಓದುಗರಲ್ಲಿ ನನ್ನದೊಂದೇ ವಿನಂತಿ. ಬದುಕಿ ಸಾಯುವುದಕ್ಕಿಂತ ಸತ್ತು ಬದುಕುವುದೇ ಲೇಸಾದರೂ, ಈ ರೀತಿಯ ಅಂತ್ಯ ಇನ್ನಾರ ಬಾಳಲ್ಲೂ ಬಾರದಿರಲಿ. ಇದೇ ನಾವು ಅವರಿಗೆ ನೀಡಬಹುದಾದ ಶ್ರದ್ಧಾಂಜಲಿಯೆನ್ನುವುದು ನಮ್ಮ ಅನಿಸಿಕೆ. ಮತ್ತೊಮ್ಮೆ ಹುಟ್ಟಿ ಬನ್ನಿ ಸಿದ್ಧಾರ್ಥ್. ಒಮ್ಮೆ ಮಾಡಿದ ತಪ್ಪನ್ನೆಂದೂ ಮತ್ತೊಮ್ಮೆ ಮಾಡದಿರಿ.

ಬರಹ: ಡಾ. ಸಿ.ಜಿ.ರಾಘವೇಂದ್ರ ವೈಲಾಯ
ನವಜಾತ ಶಿಶು ಮತ್ತು ಮಕ್ಕಳ ತಜ್ಞರು

Tags: Coffee DayDeathDr. CG Raghavendra ValayaKannada ArticleTRPV.G. Siddharthಕೆಫೆ ಕಾಫಿ ಡೇಕೆಫೆ ಕಾಫಿ ಡೇ ಮಾಲೀಕ ವಿಜಿ ಸಿದ್ದಾರ್ಥ್ಡಾ.ಸಿ.ಜಿ. ರಾಘವೇಂದ್ರ ವೈಲಾಯವಿ.ಜಿ. ಸಿದ್ದಾರ್ಥ್
Share197Tweet123Send
Previous Post

ಮೋದಿ ಹಳಿಯಲು ಚೀಪ್ ಟ್ರಿಕ್ಸ್‌ ಬಳಸಿ ತಾವೇ ಮರ್ಯಾದೆ ಹರಾಜು ಹಾಕಿಕೊಂಡ ರಾಹುಲ್?

Next Post

ನವಯುಗದ ಜಾಗತಿಕ ಶನಿ ಚೀನಾ: ಹಿಡಿದರೆ ಬಿಡುವಂತಹುದ್ದಲ್ಲ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ನವಯುಗದ ಜಾಗತಿಕ ಶನಿ ಚೀನಾ: ಹಿಡಿದರೆ ಬಿಡುವಂತಹುದ್ದಲ್ಲ

ನವಯುಗದ ಜಾಗತಿಕ ಶನಿ ಚೀನಾ: ಹಿಡಿದರೆ ಬಿಡುವಂತಹುದ್ದಲ್ಲ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಭಾಷೆ, ಆಹಾರ, ವಿಹಾರ ಸನಾತನ ಸಂಸ್ಕೃತಿಗಳ ಪ್ರತೀಕವಾಗಿರಬೇಕು | ಜುಕ್ತಿ ಹಿರೇಮಠ ಸ್ವಾಮೀಜಿ

ಭಾಷೆ, ಆಹಾರ, ವಿಹಾರ ಸನಾತನ ಸಂಸ್ಕೃತಿಗಳ ಪ್ರತೀಕವಾಗಿರಬೇಕು | ಜುಕ್ತಿ ಹಿರೇಮಠ ಸ್ವಾಮೀಜಿ

May 10, 2026
ದೆಹಲಿ ಬ್ಲಾಸ್ಟ್ | ಯಾರೊಬ್ಬರನ್ನೂ ಬಿಡಲ್ಲ | ಮೋದಿ ಶಪಥ | ಸದ್ಯದಲ್ಲಿ ಕಾದಿದೆ ಮಾರಿಹಬ್ಬ?

ಬೆಂಗಳೂರು | ಪ್ರಧಾನಿ ಮೋದಿ ತೆರಳುವ ಮಾರ್ಗ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆ | ಶಂಕಿತ ವಶಕ್ಕೆ

May 10, 2026
ದಳಪತಿ ಯುಗಾರಂಭ | ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣ ವಚನ | ತ್ರಿಶಾ ಮಿಂಚಿಂಗ್

ದಳಪತಿ ಯುಗಾರಂಭ | ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣ ವಚನ | ತ್ರಿಶಾ ಮಿಂಚಿಂಗ್

May 10, 2026
ಹಿರಿಯ ರಾಜಕಾರಣಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ವಿಧಿವಶ

ಹಿರಿಯ ರಾಜಕಾರಣಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ವಿಧಿವಶ

May 10, 2026
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿದ್ಧಾರ್ಥಗೆ ಉತ್ತಮ ಅಂಕ | ಮಾಜಿ ಡಿಸಿಎಂ ಈಶ್ವರಪ್ಪ ಅಭಿನಂದನೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿದ್ಧಾರ್ಥಗೆ ಉತ್ತಮ ಅಂಕ | ಮಾಜಿ ಡಿಸಿಎಂ ಈಶ್ವರಪ್ಪ ಅಭಿನಂದನೆ

May 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL