ವಿಂಕ್’ವಿಷಲ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಿಸುತ್ತಿರುವ ಎರಡನೆಯ ಚಿತ್ರ ‘‘ರಾಮಾರ್ಜುನ’’ ಚಿತ್ರಕ್ಕೆ ಈಗಾಗಲೇ ಶೇಕಡ 80 ಭಾಗ ಚಿತ್ರೀಕರಣ ಪೂರೈಸಿದೆ.
ಈ ಚಿತ್ರಕ್ಕಾಗಿ ಅಪ್ಪು ಪುನೀತ್ ರಾಜ್‌ಕುಮಾರ್ ರವರು ಗೀತೆಯೊಂದನ್ನು ಹಾಡಿದ್ದಾರೆ.
ನವೀನ್ ರೆಡ್ಡಿ ರಚಿಸಿರುವ ಮನಸೆ ಮೂರು ದಾರಿಯನ್ನು ತೋರು ನೀನು, ನಿನ್ನೊಳಗೆ ಮರೆಯಾದ ನನಗೆ… ಪ್ರೀತಿ ಅಂದ ಮೇಲೆ’’ ಈ ಗೀತೆಯನ್ನು ಹಾಡಿದ್ದಾರೆ.
ಇದಕ್ಕೂ ಮೊದಲು ಅಪ್ಪು ಅವರು ಅನಿಶ್ ಅವರ ಚಿತ್ರಕ್ಕೆ ಅಕಿರ ಹಾಗೂ ವಾಸು ನಾನು ಪಕ್ಕಾ ಕಮರ್ಷಿಯಲ್ ಚಿತ್ರಗಳಲ್ಲಿ ಹಾಡಿದ್ದರು. ಚಿತ್ರದ ನಿರ್ದೇಶನ ಅನಿಶ್, ಛಾಯಾಗ್ರಹಣ – ನವೀನ್ ಕುಮಾರ್, ಸಂಗೀತ ಆನಂದ್ ರಾಜವಿಕ್ರಮ್, ಸಾಹಸ ವಿಕ್ರಂ ಮೋರ್, ಸಂಭಾಷಣೆ – ಶಂಕರ್ ರಾಮನ್, ಕಿರಣ್ ಚಂದ್, ತಾರಾಗಣದಲ್ಲಿ ಅನಿಶ್, ನಿಶ್ವಿಕಾ, ರಂಗಾಯಣ ರಘು, ಶರತ್ ಲೋಹಿತಾಶ್ವ, ಹರೀಶ್ ರಾಜ್, ಅರುಣ ಬಾಲರಾಜ್, ಸ್ವಾತಿ, ಗಿರೀಶ್ ಶಿವಣ್ಣ, ದೀಪಕ್ ಶೆಟ್ಟಿ, ಹನುಮಂತೇಗೌಡ, ಸೀನಿ ಮಿತ್, ಉಗ್ರಂ ಮಂಜು, ಮಂಜು ಪಾವಗಡ, ಶಿವಾನಂದ ಸಿಂಧಗಿ, ಭರತ್, ಲೋಕಿ ಮುಂತಾದವರಿದ್ದಾರೆ.

















