ಸಾಗರ: ಇಲ್ಲಿನ ಕರ್ನಾಟಕ ಸೋಶಿಯಲ್ ಮೂಮೆಂಟ್ ಹಾಗೂ ಕರ್ನಾಟಕ ಮಾನವ ಹಕ್ಕು ಸಮಿತಿ ಸದಸ್ಯರು ನಿತ್ರಾಣ ಸ್ಥಿತಿಯಲ್ಲಿದ್ದ ವೃದ್ಧನಿಗೆ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
65 ರ ಅಸುಪಾಸಿನ ವೃದ್ಧ ಮೊನ್ನೆ ಬೆಳ್ಳಂಬೆಳಗ್ಗೆ ಗಾಂಧಿನಗರದ ಕಂಬಳಿಯರ ಕೇರಿ ಬಳಿ ಕಾಣಿಸಿದ್ದಾರೆ. ಇದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ಶಶಿಕಾಂತ್ ಸೋಶಿಯಲ್ ಟೀಂನ ಇಮ್ರಾನ್ ಸಾಗರ್ ಅವರಿಗೆ ಸುದ್ಧಿ ಮುಟ್ಟಿಸಿದರು.
ವೃದ್ಧನ ಶರೀರದಿಂದ ಗಬ್ಬು ವಾಸನೆ ಬರುತ್ತಿದ್ದರಿಂದ ಕೆಲವರು ಹತ್ತಿರ ಹೋಗಲು ಹಿಂದೇಟು ಹಾಕುತ್ತಿದ್ದರು. ನಗರಸಭೆಯ ಪರಿಸರ ಅಭಿಯಂತರ ಪ್ರಭಾಕರ್ ಹಾಗೂ ನಾಗರಾಜ್ ಅವರ ಸಹಕಾರದಿಂದ ಇಬ್ಬರು ಪೌರಕಾರ್ಮಿಕರನ್ನು ಕರೆಯಿಸಿ ವೃದ್ಧನಿಗೆ ಸ್ನಾನ ಮಾಡಿಸಿ ಬೇರೆ ಬಟ್ಟೆ ತೊಡಿಸಲಾಯಿತು.
108 ಆಂಬುಲೆನ್ಸ್’ನಲ್ಲಿ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೆಲುಗು-ಕನ್ನಡ ಮಾತನಾಡುವ ಇವರು, ಹೆಸರು ವಿಳಾಸದ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ.
ಬಿಜೆಪಿ ಅಲ್ಪ ಸಂಖ್ಯಾತ ಮುಖಂಡ ಭಾಷಾ ಸಾಬ್, ಡಿಎಸ್’ಎಸ್ ನಾಗರಾಜ್, ಇಸ್ಮಾಯಿಲ್ ಈ ಸಂದರ್ಭದಲ್ಲಿ ಸಹಕರಿಸಿದರು.
Discussion about this post