No Result
View All Result
Landmark Heart Surgery in Davanagere | SS Narayana hospital completes first modified Bentall procedure
English Articles

Landmark Heart Surgery in Davanagere | SS Narayana hospital completes first modified Bentall procedure

by ಕಲ್ಪ ನ್ಯೂಸ್
May 2, 2026
0

Kalpa Media House  |  Davanagere  | In a milestone for healthcare in Central Karnataka, the SS Narayana Superspeciality Centre here...

Read moreDetails
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
  • Advertise With Us
  • Grievances
  • About Us
  • Contact Us
Sunday, May 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಬಳ್ಳಾರಿ-ಕೊಪ್ಪಳ ವಲಯ ಸುರಕ್ಷತಾ ತರಬೇತಿ ಕಾರ್ಯಕ್ರಮ ಯಶಸ್ವಿ ಸಂಪನ್ನ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 26, 2019
in Small Bytes, ಬಳ್ಳಾರಿ
0
Share on FacebookShare on TwitterShare on WhatsApp

ಬಳ್ಳಾರಿ: ಬಳ್ಳಾರಿ-ಕೊಪ್ಪಳ ವಲಯಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಸುರಕ್ಷತಾ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಈ ಕುರಿತಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸಲಾಯಿತು.

2000 ಮತ್ತು 2002ರ ಮಧ್ಯದಲ್ಲಿ ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶವಾದ ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಗುಲ್ಬರ್ಗ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ದಿಗಾಗಿ ಸರ್ಕಾರದಿಂದ ಅನೇಕ ಹೊಸ ಹೊಸ ಯೋಜನೆಯಡಿಯಲ್ಲಿ ವಿದ್ಯುತ್, ಉಕ್ಕು ಮತ್ತು ಕಬ್ಬಿಣ, ಸಕ್ಕರೆ, ಸಿಮೆಂಟ್ ವಲಯದಲ್ಲಿ ಸಣ್ಣ ಮತ್ತು ಮದ್ಯಮ ವಲಯದ ಕಾರ್ಖಾನೆಗಳು ಪ್ರಾರಂಭವಾದವು. ಅವುಗಳಲ್ಲಿ ಮುಖ್ಯವಾಗಿ ಜಿಂದಾಲ್, ಅರ್’ಟಿಪಿಎಸ್, ಟಿಎಸ್’ಪಿ, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಕಲ್ಯಾಣಿ, ಹೊಸಪೇಟೆ ಸ್ಟೀಲ್ಸ್ ಮತ್ತು ಎಸಿಸಿ ಕಾರ್ಖಾನೆಗಳು ಪ್ರಾರಂಭವಾದವು.

ಉತ್ಪಾದನೆಯನ್ನು ಮುಖ್ಯ ಗುರಿಯಾಗಿ ಮಾಡಿಕೊಂಡು ಕೆಲಸಗಾರರ ಸುರಕ್ಷತೆಗೆ ಹೆಚ್ಚಿನ ಗಮನ ಕೊಡದೆ ಕೈಗಾರಿಕೆಗಳು ಮುಂದಾದಾಗ ಆ ಸಮಯದಲ್ಲಿ ಕಾರ್ಖಾನೆಗಳಲ್ಲಿ ಮಾರಣಾಂತಿಕ ಅಪಘಾತಗಳ ಜೊತೆ ಜೊತೆಗೆ ಅನೇಕ ಬಗೆಯ ದೊಡ್ಡ ಅಪಘಾತಗಳು ಸಂಭವಿಸಿದವು. ಆಗ ಗುಲ್ಬರ್ಗದಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದರು.ಅಲ್ಲದೇ, ಪದೇ ಪದೇ ಅಧಿಕಾರಿಗಳು ಈ ಭಾಗದ ಕಾರ್ಖಾನೆಗಳಿಗೆ ಭೇಟಿ ನೀಡಲು ಸಹ ಬೇಸರವಾಗುತ್ತಿತ್ತು. ಕಾರಣ ಆಗ ಈ ಭಾಗದ ರಸ್ತೆಗಳ ಪರಿಸ್ಥಿತಿಯು ಸಹ ಉತ್ತಮವಾಗಿ ಇರಲಿಲ್ಲ ಮತ್ತು ಅಧಿಕಾರಿಗಳ ಭೇಟಿಯು ಸಹ ಆಗುತ್ತಿರಲಿಲ್ಲಾ. ಈ ಒಂದು ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ಉಪ ನಿರ್ಧೇಶಕರಾಗಿದ್ದ ಡಿ.ಸಿ. ಜಗದೀಶ್ ಮತ್ತು ನವನೀತ್ ಮೋಹನ್ ಹಾಗೂ ಮೇಲ್ವೀಚಾರಕರಾದ ಶ್ರೀಮತಿ ಭಾರತಿ ಮಗದುಂ ಯವರು ಗುಲ್ಬರ್ಗ, ಬಳ್ಳಾರಿ ಮತ್ತು ಕೊಪ್ಪಳ ಭಾಗದ ಪ್ರಮುಖ ಕಾರ್ಖಾನೆಗಳ ಆಡಳಿತ ಮಂಡಳಿಯವರೂಂದಿಗೆ ಸಭೆಯನ್ನು ಆಯೋಜಿಸಿ ಕಾರ್ಖಾನೆಗಳ ಸುರಕ್ಷತಾ ವಿಭಾಗದ ಸಹಾಕಾರದೊಂದಿಗೆ ಆಡಳಿತ ಮಂಡಳಿ ಜೊತೆಗೂಡಿ ಗುಲ್ಬರ್ಗ ರೀಜನಲ್ ಸೇಫ್ಟಿ ಕಮಿಟಿಯನ್ನು ಪ್ರಾರಂಭಿಸಿದರು.

ಆ ಕಮಿಟಿಯಲ್ಲಿ ಈ ಕೆಳಕಂಡ ಅಂಶಗಳನ್ನು ಮಾತನಾಡಿ ಯಶಸ್ವಿಗಾಗಿ ಶ್ರಮಿಸಲು ತಿಳಿಸಿದರು. ಅವುಗಳಲ್ಲಿ ಮುಖ್ಯವಾಗಿ
1. ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ಬೇಕಾದ ಅವ್ಯಕತೆಯನ್ನು ಸುರಕ್ಷತಾ ಅಧಿಕಾರಿಗಳಿಗೆ ಒದಗಿಸುವುದು
2. ಪ್ರತಿಯೊಂದು ಕಾರ್ಖಾನೆಯಲ್ಲಿ ಸುರಕ್ಷತಾ ಅಧಿಕಾರಿಗಳನ್ನು ನೇಮಕ ಮಾಡುವುದು
3. ಸುರಕ್ಷತಾ ತರಬೇತಿ ನೀಡುವುದು
4. ಸುರಕ್ಷತಾ ಸಾಧನ ಸಾಮಾಗ್ರಿಗಳನ್ನು ಕಾಲ ಕಾಲಕ್ಕೆ ಕಾರ್ಮಿಕರಿಗೆ ಒದಗಿಸುವುದು
5. ಸುರಕ್ಷತಾ ಪರಿಷತ್ ಅಥವಾ ಹೆಸರಾಂತ ಸುರಕ್ಷತಾ ಸಂಸ್ಥೆಗಳಿಂದ ಕಾರ್ಖಾನೆಗಳಲ್ಲಿ ಸುರಕ್ಷತಾ ಆಡಿಟ್ ಮಾಡಿಸಿ ಕ್ರಮ ಕೈಗೊಂಡು ಉತ್ತಮ ಸುರಕ್ಷತಾ ವಾತಾವರಣ ನಿರ್ಮಿಸಲು ಶ್ರಮಿಸುವುದು
6. ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತರಭೇತಿ ಆಯೋಜಿಸುವ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿತ ಕಾರ್ಯವನ್ನು ರೂಪಿಸಲಾಯಿತು. ಅದರಂತೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸರ್ಕಾರದ ವತಿಯಿಂದ ಸಹಕಾರ ನೀಡಿ ವಿಭಾಗದ ಅಧಿಕಾರಿಗಳು ಸಹ ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದ್ದು, ಅಪಘಾತ ಪ್ರಮಾಣ ಕಡಿಮೆಗಾಗಿ ಶ್ರಮಿಸುತ್ತಿದ್ದಾರೆ.

ಪ್ರಥಮವಾಗಿ 2002ರಿಂದ ರಾಯಚೂರು ಥರ್ಮಲ್ ಪವರ್ ಕೇಂದ್ರವು ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು(RTPS). ನಂತರ ಈ ಭಾಗದಲ್ಲಿ ಕಿರ್ಲೋಸ್ಕರ್ ಕಾರ್ಖಾನೆ ಮುಂದುವರೆಸಿಕೊಂಡು GRISD ನಿಂದ BRISD (ಬಳ್ಳಾರಿ ವಲಯ) ಆಗಿ ಮಾರ್ಪಾಡು ಮಾಡಲಾಯಿತು ಮತ್ತು ಆರು ವರ್ಷಗಳ ಕಾಲ ಸತತವಾಗಿ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಒಂದೊಂದು ಕಾರ್ಖಾನೆ ಜವಾಬ್ದಾರಿಯನ್ನು ವಹಿಸಿಕೊಂಡು ಬಂದಿದೆ.ಈ ನಿಟ್ಟಿನಲ್ಲಿ ಬಳ್ಳಾರಿ-ಕೊಪ್ಪಳ ಭಾಗದಲ್ಲಿ ಕಾರ್ಖಾನೆಗಳು ಹೆಚ್ಚಾಗಿ ಸ್ಥಾಪಿತವಾದ ಕಾರಣ BRISDಯಿಂದ BKRISE (ಬಳ್ಳಾರಿ ಕೊಪ್ಪಳ ವಲಯ ಸುರಕ್ಷತಾ ಸಮಿತಿ)ಯಾಗಿ ಮಾರ್ಪಾಟು ಮಾಡಿ ಇದರಡಿಯಲ್ಲಿ ಕಿರ್ಲೋಸ್ಕರ್ ಕಾರ್ಖಾನೆ ಒಟ್ಟಾರೆ 4 ಬಾರಿ ಈ ಕಾರ್ಯಕ್ರಮ ಆಯೋಜಿಸಿರುತ್ತಾರೆ.

ಒಂದು ಬಾರಿ ಜಿಂದಾಲ್ ಕಾರ್ಖಾನೆಯ ಸಹಕಾರದಿಂದ ರಾಜ್ಯಟ್ಟದ ಕಾರ್ಯಕ್ರಮ ಮಾಡಿರುತ್ತದೆ. ಅದರಂತೆ ಜೆಪಿಒಸಿಲ್, ಮೋನಸೆಂಟೂ, ಎಸಿಸಿ, ಜಿಂದಾಲ್ 3 ಬಾರಿ (ಒಂದು ಬಾರಿ ರಾಜ್ಯ ಮಟ್ಟದ) ಹೊಸಪೇಟೆ ಸ್ಟೀಲ್ (ಎರಡು ಬಾರಿ) , ಎಂಎಸ್’ಪಿಎಲ್, ಎಕ್ಸ್‌ ಇಂಡಿಯಾ, ಬಿಎಂಎಂ ಇಸ್ಪಾತ್ (ಎರಡು ಬಾರಿ) ಬಿಟಿಪಿಎಸ್ ಇನ್ನಿತರ ಹೆಸರಾಂತ ಕಾರ್ಖಾನೆಗಳು ಪ್ರತಿ ವರ್ಷ ಸುರಕ್ಷತಾ ಕಾರ್ಯಕ್ರಮ ಮತ್ತು ವಲಯ ಮಟ್ಟದ ಸುರಕ್ಷತಾ ದಿನಾಚರಣೆಗಳನ್ನು, ಸ್ಪರ್ಧೆಗಳು, ಅಣುಕು ಪ್ರದರ್ಶನಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಇದರಡಿಯಲ್ಲಿ ಪ್ರತಿವರ್ಷ ಬಿಕೆ ರೈಸ್ ದಿನಾಚರಣೆ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಸುರಕ್ಷತೆಯಲ್ಲಿ ಸಾಧನೆ ಮಾಡಿದ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಈ ಬಾರಿ ಅಂದರೆ 2019-20 ನೇ ಸಾಲಿನ ಬಿಕೆರೈಸ್’ನ ಎಲ್ಲಾ ಕಾರ್ಯಕ್ರಮವನ್ನು ಮೆ.ಪ್ರಾಕ್ಸ್‌’ಏರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ವಹಿಸಿಕೊಂಡಿರುತ್ತದೆ. ಈ ವರ್ಷ ಹತ್ತು ಹಲವಾರು ಕಾರ್ಯಕ್ರಮದ ರೂಪುರೇಷೆಗಳನ್ನು ಆಯೋಜಿಸಿ, ಪ್ರಥಮ ಹಂತದಲ್ಲಿ ದಿನಾಂಕ ಸೆ.23ರಂದು ಒಂದು ದಿನದ ಸುರಕ್ಷತಾ ತರಬೇತಿ ಕಾರ್ಯಕ್ರಮ ವನ್ನು ಜಿಂದಾಲ್ ಕಾರ್ಖಾನೆಯ ಓಪಿಜಿ ಸೆಂಟರ್’ನಲ್ಲಿ ಆಯೋಜಿಸಲಾಗಿತ್ತು. ಈ ತರಬೇತಿ ಕಾರ್ಯಕ್ರಮಕ್ಕೆ ಬಳ್ಳಾರಿ ಕೊಪ್ಪಳ ಜಿಲ್ಲೆಯ ವಿವಿಧ ಕಾರ್ಖಾನೆಯ ಸುಮಾರು 190 ಉದ್ಯೋಗಿಗಳು ಭಾಗವಹಿಸಿದ್ದರು.ತರಬೇತಿ ಕಾರ್ಯಕ್ರಮವನ್ನು ಎಂ.ಎಸ್. ಮಹಾದೇವ್ ಉಪ ನಿರ್ದೇಶಕರು, ಕಾರ್ಖಾನೆಗಳ ವಿಭಾಗ ಬಳ್ಳಾರಿ ಮತ್ತು ಕೊಪ್ಪಳ ಡಿವಿಜನ್, ಬಳ್ಳಾರಿ, ಜಿಂದಾಲ್ ಕಾರ್ಖಾನೆಯ ಪ್ರೆಸಿಡೆಂಟ್ ರಾಜಶೇಖರ ಪಟ್ಟಣಶೆಟ್ಟಿ, ಪ್ರಾಕ್ಸೇರ್ ಕಾರ್ಖಾನೆಯ ಜನರಲ್ ಮ್ಯಾನೇಜರ್ ಭೀಮೇಶ್ವರ ರೆಡ್ಡಿ, ಜಿಂದಾಲ್ ಸುರಕ್ಷತೆ ವಿಭಾಗದ ಜನರಲ್ ಮ್ಯಾನೇಜರ್ ಸಂಪತ್ ಕುಮಾರ್ ಮತ್ತು ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ಸಾದಿಕ್ ಸಾಬ್ ಬಡಿಗೇರ್ ಮತ್ತು ಶೇಷಾದ್ರಿ ಶೇಕರ್ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.

ಉದ್ಘಾಟನಾ ನಂತರ ಸುರಕ್ಷತೆ ಮತ್ತು ಮಹತ್ವದ ಬಗ್ಗೆ ವೇದಿಕೆಯ ಮೇಲೆ ಆಸಿನರಾಗಿದ್ದ ಅತಿಥಿಗಳು ತಮ್ಮ ಭಾಷಣದಲ್ಲಿ ತಿಳಿಸಿದರು. ನಂತರ 10 ಘಂಟೆಯಿಂದ ಸುರಕ್ಷತಾ ವಿಷಯದ ಮೇಲೆ ಉಪನ್ಯಾಸ ಪ್ರಾರಂಭವಾಗಿ ಸಂಜೆ 6.00 ಘಂಟೆಗೆ ಕಾರ್ಯಕ್ರಮ ಮುಕ್ತಾಯವಾಯಿತು. ನಂತರ ಜಿಂದಾಲ್ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷರಾದ ವಿಜಯಕುಮಾರ್ ಸಿನ್ನಾರವರ ಅಧ್ಯಕ್ಷತೆಯಲ್ಲಿ ಮುಕ್ತಾಯ ಸಮಾರಂಭ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ವಿತರಣೆ ನೆರವೇರಿತು.

ಈ ಕಾರ್ಯಕ್ರಮ ಯಶಸ್ವಿಗೆ ಕಾರಣಿಕರ್ತರಿಗೆ ಬಿ.ಕೆ. ರೈಸ್ ಸಮಿತಿಯಿಂದ ಪ್ರಾಕ್ಸೆಎರ್ ಕಂಪನಿಯ ಆಡಳಿತ ಮಂಡಳಿ ಮತ್ತು ಸುರಕ್ಷತಾ ವಿಭಾಗ ಮತ್ತು ಬಳ್ಳಾರಿ ವಿಭಾಗದ ಕಾರ್ಖಾನೆಗಳ ಇಲಾಖೆಯ ಉಪನಿರ್ಧೇಶಕರಾದ ಎಂ.ಎಸ್. ಮಹದೇವ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.

(ವರದಿ: ಮುರಳಿಧರ್ ನಾಡಿಗೇರ್, ಹೊಸಪೇಟೆ)

Tags: BellaryIndustrial developmentIndustrial SafetyJindalkirloskar ferrous industries limitedKoppalRTPSSafety Training Programಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ಕೈಗಾರಿಕಾ ಅಭಿವೃದ್ಧಿಕೊಪ್ಪಳಜಿಂದಾಲ್ಬಳ್ಳಾರಿಸುರಕ್ಷತಾ ತರಬೇತಿ
Share205Tweet123Send
Previous Post

Big Breaking: ರಾಜ್ಯ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ: ಅನರ್ಹರಿಗೆ ತಾತ್ಕಾಲಿಕ ರಿಲೀಫ್

Next Post

ಭದ್ರಾವತಿ-ಜನಪದ ಕಲೆಗಳು ಅಗಾಧ ಸಮುದ್ರ, ಕಲಿಕೆಗೆ ಆಸಕ್ತಿ ಮುಖ್ಯ: ಡಿ.ಮಂಜುನಾಥ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭದ್ರಾವತಿ-ಜನಪದ ಕಲೆಗಳು ಅಗಾಧ ಸಮುದ್ರ, ಕಲಿಕೆಗೆ ಆಸಕ್ತಿ ಮುಖ್ಯ: ಡಿ.ಮಂಜುನಾಥ್

Leave a Reply Cancel reply

Your email address will not be published. Required fields are marked *

  • Trending
  • Latest
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಬೇಸೂರು ಗ್ರಾಮದಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ನಿಲ್ಲಿಸುವಂತೆ ಡಿಸಿಗೆ ಮನವಿ

ಬೇಸೂರು ಗ್ರಾಮದಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ನಿಲ್ಲಿಸುವಂತೆ ಡಿಸಿಗೆ ಮನವಿ

May 2, 2026
ಬೆಳೆಹಾನಿ ರೈತರಿಗೆ ಸೂಕ್ತ ಪರಿಹಾರ ಒದಗಿಸಿ: ಕೃಷಿಕ ಸಮಾಜ ಆಗ್ರಹ

ಬೆಳೆಹಾನಿ ರೈತರಿಗೆ ಸೂಕ್ತ ಪರಿಹಾರ ಒದಗಿಸಿ: ಕೃಷಿಕ ಸಮಾಜ ಆಗ್ರಹ

May 2, 2026
ಶಿವಮೊಗ್ಗ ನಗರದ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಅನುದಾನ ನೀಡಿ

ಶಿವಮೊಗ್ಗ ನಗರದ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಅನುದಾನ ನೀಡಿ

May 2, 2026
ಬಂಗಾರಪ್ಪ ಅವರ ಕೂಲಿಂಗ್ ಗ್ಲಾಸಿನ ಹಿಂದೆ ಬಡವರಿಗೆ ಸೂರು ಕಲ್ಪಿಸುವ ಕನಸು ಇತ್ತು : ಸಚಿವ ಮಧು ಬಂಗಾರಪ್ಪ

ಬಂಗಾರಪ್ಪ ಅವರ ಕೂಲಿಂಗ್ ಗ್ಲಾಸಿನ ಹಿಂದೆ ಬಡವರಿಗೆ ಸೂರು ಕಲ್ಪಿಸುವ ಕನಸು ಇತ್ತು : ಸಚಿವ ಮಧು ಬಂಗಾರಪ್ಪ

May 2, 2026
Landmark Heart Surgery in Davanagere | SS Narayana hospital completes first modified Bentall procedure

ದಾವಣಗೆರೆ | ವೈದ್ಯಕೀಯ ಮೈಲಿಗಲ್ಲು | ಎಸ್ಎಸ್ ನಾರಾಯಣ ಆಸ್ಪತ್ರೆಯಲ್ಲಿ ಮಧ್ಯ ಕರ್ನಾಟಕದ ಮೊದಲ ‘ಬೆಂಟಾಲ್’ ಶಸ್ತ್ರಚಿಕಿತ್ಸೆ ಯಶಸ್ವಿ

May 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL