No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
  • Advertise With Us
  • Grievances
  • About Us
  • Contact Us
Saturday, August 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಎಚ್ಚರಿಕೆ! ತಂಬಾಕು ಕೊಲ್ಲುತ್ತದೆ, ಕ್ಷಣಿಕ ಕಿಕ್’ಗಾಗಿ ಜೀವವನ್ನೇ ಕಳೆದುಕೊಳ್ಳದಿರಿ

kalpa News by kalpa News
October 26, 2019
in Special Articles
0
ಎಚ್ಚರಿಕೆ! ತಂಬಾಕು ಕೊಲ್ಲುತ್ತದೆ, ಕ್ಷಣಿಕ ಕಿಕ್’ಗಾಗಿ ಜೀವವನ್ನೇ ಕಳೆದುಕೊಳ್ಳದಿರಿ
Share on FacebookShare on TwitterShare on WhatsApp

ಒತ್ತಡದ ಜೀವನ ಮತ್ತು ತಪ್ಪು ಹೆಜ್ಜೆಗಳಿಂದಾಗಿ ಅಮಾಯಕ ಯುವಕರು ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಉತ್ತಮ ಭವಿಷ್ಯ ರೂಪಿಸಿಕೊಂಡು ಪೋಷಕರ ಕನಸು ನನಸು ಮಾಡಬೇಕಾದ ವಯಸ್ಸಿನಲ್ಲಿ ಚಟಕ್ಕೆ ಬಿದ್ದು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.

ಮೊದಮೊದಲು ಶೋಕಿಗಾಗಿ ಸಿಗರೇಟ್, ಗುಟ್ಕಾ, ತಂಬಾಕು, ಸೇವನೆ ಪ್ರಾರಂಭವಾಗಿ ನಂತರ ಅವು ಚಟವಾಗಿ ಪರಿಣಮಿಸಿ ಬೀಡಲು ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ತಲುಪುವರು. ಸಿಗರೇಟ್ ಸೇದುವುದರಿಂದ ಮತ್ತು ತಂಬಾಕು ಅಗಿಯುವುದರಿಂದ ಏನೋ ಒಂಥರ ಖುಷಿ-ಕಿಕ್ ಕೊಟ್ಟು ಮೆದುಳು ಚುರುಕುಗೊಂಡಂತೆ ಭಾಸವಾಗುತ್ತದೆ.

ಅತಿಯಾಗಿ ತಂಬಾಕು ಸೇವಿಸುವವರು ಇತರೆ ವ್ಯಕ್ತಿಗಳಿಗಿಂತ ಹೆಚ್ಚಾಗಿ ಚಹಾ, ಕಾಫಿಯನ್ನು ಸೇವಿಸುತ್ತಾರೆ. ಇಂಥವರಿಗೆ ವ್ಯಾಯಮ ಮಾಡಲಾಗುವುದಿಲ್ಲ, ಮಾಡಿದರೂ ಬೇಗ ಸುಸ್ತಾಗುತ್ತಾರೆ. ಉಸಿರಾಟದ ತೊಂದರೆ, ಓಡುವಾಗ ಆಟವಾಡುವಾಗ ಹೆಚ್ಚು ಬಳಲುತ್ತಾರೆ. ಯುವಕರು ಖಿನ್ನತೆಗೆ ತುತ್ತಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಕಾನೂನು ಪ್ರಕಾರ ಅಪರಾಧವಾಗಿದೆ. ಇದರ ಅರಿವಿದ್ದರೂ ಯುವ ಜನರು ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಧೂಮಪಾನ ನಿಷೇಧಿಸಿದೆ, ತಂಬಾಕು ಕೊಲ್ಲುತ್ತದೆ ಎಂಬ ಸೂಚನ ಫಲಕಗಳನ್ನು ಪ್ರತಿನಿತ್ಯ ನಾವು ಗಮನಿಸುತ್ತಲೇ ಇರುತ್ತೇವೆ. ಹೀಗೆ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಸಿಗರೇಟು, ಗುಟ್ಕಾ ಮುಂತಾದ ತಂಬಾಕುಯುಕ್ತ ಪದಾರ್ಥಗಳ ಪ್ಯಾಕೇಟಿನ ಮೇಲೆ ಶ್ವಾಸಕೋಶಗಳ ಹಾಳಾದ ಚಿತ್ರ ಸಹಿತ ಓದುತ್ತೇವೆ  ಹಾಗೂ ಚಿತ್ರಮಂದಿರಗಳಲ್ಲಿ ಚಿತ್ರದ ವೀಕ್ಷಣೆಗೆ ಹೋದರೆ ಅಲ್ಲೂ ಮೊದಲು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರವೆಂದು ಜಾಹೀರಾತು ನೋಡುತ್ತಲೇ ಇರುತ್ತವೆ. ಹೀಗೆ ಹಲವಾರು ಭಯಾನಕ ಚಿತ್ರಗಳನ್ನೂ ಕಾಣುತ್ತೇವೆ. ಆದರೂ ತಿಳಿದು ತಿಳಿದು ತಪ್ಪು ಮಾಡುವುದು ಯಾಕೆಂಬ ಪ್ರಶ್ನೆಯೂ ಸಹಜವಾಗಿ ಮೂಡುವುದು.

1984 ರಲ್ಲಿ ಇಂಗ್ಲೆಂಡಿನ ಹಲವರು ಧೂಮಪಾನಕ್ಕೆ ವಿರೋಧ ವ್ಯಕ್ತಪಡಿಸಿ, ಇದಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಮಾರ್ಚ್ ತಿಂಗಳು 2ನೆಯ ಬುಧವಾರದಂದು ಧೂಮಪಾನ ವಿರೋಧಿ ದಿನ ಆಚರಿಸಬೇಕೆಂದು ನಿರ್ಧರಿಸಿದರು. ಧೂಮಪಾನದಿಂದ ತಮ್ಮ ಮತ್ತು ಇತರರ ಆರೋಗ್ಯ ಹಾಳು ಮಾಡುತ್ತಿರುವ ವಿಷಯ ಜನರಿಗೆ ತಿಳಿಸುವುದೇ ಇದರ ಮುಖ್ಯ ಗುರಿಯಾಗಿದೆ.

ಭಾರತದಲ್ಲಿ ತಂಬಾಕಿನ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿದ್ದು ಬೀಡಿ, ಸಿಗರೇಟ್, ಗುಟ್ಕಾ ಇವು ಧೂಮಪಾನ ರೂಪದಲ್ಲಿ ತಂಬಾಕು ಸೇವನೆಯ ವಿಧಗಳು ಇವುಗಳಲ್ಲಿ 4 ಸಾವಿರಕ್ಕೂ ಹೆಚ್ಚು ರಾಸಾಯನಿಕಗಳು ಮತ್ತು 60ಕ್ಕೂ ಹೆಚ್ಚು ಕ್ಯಾನ್ಸರ್’ಕಾರಕ ವಸ್ತುಗಳಿವೆ. ತಂಬಾಕಿನಿಂದ ಮುಖ್ಯವಾಗಿ ಬಾಯಿ, ಗಂಟಲು, ಶ್ವಾಸಕೋಶ, ಅನ್ನನಾಳ, ಕರುಳು, ಮೂತ್ರಪಿಂಡ ಇವೇ ಮೊದಲಾದ ಅಂಗಗಳು ಕ್ಯಾನ್ಸರ್‌ಗೆ ತುತ್ತಾಗುತ್ತದೆ. ಸಮಾನ್ಯವಾಗಿ ಧೂಮಪಾನ ಮಾಡುವವರು ಹೆಚ್ಚಾಗಿ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಎಂಬ ಭೀತಿ ಜನರಲ್ಲಿದೆ ಸಂಶೋಧನೆಗಳ ಪ್ರಕಾರ ಸಿಗರೇಟ್ ಸೇದುವವರಿಗೆ ಈ ವ್ಯಾಧಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದು ಗೊತ್ತಾಗಿದೆ.

ಪ್ರತಿದಿನ 2 ಪ್ಯಾಕ್ ಧೂಮಪಾನ ಮಾಡುವ ವ್ಯಕ್ತಿಯೊಂದಿಗೆ ಇತರೆ ಯಾವ ವ್ಯಕ್ತಿ ಇದ್ದರೂ ಪರೋಕ್ಷವಾಗಿ ಆತನು ದಿನಕ್ಕೆ 3 ಸಿಗರೇಟ್ ಸೇದಿದಂತಾಗುತ್ತದೆ. ಪರೋಕ್ಷವಾಗಿ ಧೂಮಪಾನ ಮಾಡಿದವರ ಮೂತ್ರ ಪರೀಕ್ಷೆಯಿಂದ ಅವರ ಮೂತ್ರದಲ್ಲಿ ನಿಕೋಟಿನ್ ವಿರುವ ಅಂಶ ಕಂಡುಬಂದಿದೆ. ಈ ಪರೋಕ್ಷ ಧೂಮಪಾನಿಗಳಿಗೆ ಪ್ಯಾಸೀವ್ ಸ್ಮೋಕ್‌ರ್ಸ್‌ ಎನ್ನುವರು.

ಭಾರತ ಸರ್ಕಾರವು ಜನಸಾಮಾನ್ಯರನ್ನು ತಂಬಾಕಿನ ದುಷ್ಟರಿಣಾಮಗಳಿಂದ ರಕ್ಷಿಸಲು ಒಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯ್ದೆಯಡಿಯಲ್ಲಿ ಸಾರ್ವಜನಿಕ ಪ್ರದೇಶಗಳಾದ ಆಸ್ಪತ್ರೆ, ಸರ್ಕಾರಿ ಕಛೇರಿಗಳಲ್ಲಿ ತಂಬಾಕು ಉತ್ಪನ್ನ ಜಾಹೀರಾತು ಹಾಗೂ ಶಾಲಾ-ಕಾಲೇಜುಗಳಿಂದ ಸುಮಾರು 100 ಅಡಿಗಳ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲವೆಂದು ಶಿಫಾರಸ್ಸುಗಳನ್ನು ಮಾಡಿದೆ.

ವಿಶ್ವದಾದ್ಯಂತ ತಡೆಗಟ್ಟಬಹುದಾದ ಕಾಯಿಲೆ ಮತ್ತು ಮರಣಗಳ ಕಾರಣಗಳಲ್ಲಿ ತಂಬಾಕು ಸೇವನೆಯು ಏಕೈಕ ಪ್ರಮುಖ ಕಾರಣವಾಗಿದೆ. ಪ್ರತೀ ವರ್ಷ ವಿಶ್ವದಾದ್ಯಂತ 55 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಭಾರತದಲ್ಲಿ 10 ಲಕ್ಷ ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಇದು ಏಡ್ಸ್‌, ಕ್ಷಯ ಹಾಗೂ ಮಲೇರಿಯಾ ಈ ಮೂರು ರೋಗಗಳಿಂದ ಒಟ್ಟಾರೆಯಾಗಿ ಸಾಯುವ ಜನರಿಗಿಂತ ಹೆಚ್ಚಿನ ಸಂಖ್ಯೆಯಾಗಿದೆ. ತಂಬಾಕಿನಿಂದ ಸಾವನ್ನಪ್ಪುವವರ ಪೈಕಿ ಶೇ.80ರಷ್ಟು ಜನ ಗ್ರಾಮೀಣ ಭಾಗದವರು ಎಂಬುದು ಅಘಾತಕಾರಿ ಸಂಗತಿ.

ಭಾರತದಲ್ಲಿ ಪುರುಷರು ಮತ್ತು ಮಹಿಳೆಯರು ತಂಬಾಕಿನಿಂದ ಬರುವ ಕ್ಯಾನ್ಸರ್’ನ ಪ್ರಮಾಣ ಕ್ರಮವಾಗಿ ಶೇ. 56.4 ಮತ್ತು ಶೇ 44.6 ಆಗಿದೆ. 100 ಕ್ಯಾನ್ಸರ್ ಪ್ರಕರಣಗಳಲ್ಲಿ 40 ತಂಬಾಕು ಸೇವನೆಗೆ ಸಂಬಂಧಿಸಿದ್ದಾಗಿದೆ. ಸುಮಾರು ಶೇ.95 ರಷ್ಟು ಬಾಯಿ ಕ್ಯಾನ್ಸರ್’ಗೆ ಕಾರಣ ತಂಬಾಕು ಸೇವನೆಯಾಗಿದೆ ಎಂದು ಕೆಲವೂಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ತಂಬಾಕು ಸೇವಿಸುವವರು ತಮ್ಮ ವಯಸ್ಸಿಗಿಂತ 10 ವರ್ಷ ಹೆಚ್ಚು ವಯಸ್ಸಾದಂತೆ ಕಾಣುತ್ತಾರೆ.

ಇಷ್ಟೆಲ್ಲಾ ದುಷ್ಟರಿಣಾಮಗಳ ಅರಿವಿದ್ದರೂ, ಯುವಜನತೆ ವ್ಯಸನಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸ. ಕಾಲೇಜು ಯುವಕರೇ ಹೆಚ್ಚು ಹೆಚ್ಚು ಮಾದಕ ವ್ಯಸನಕ್ಕೆ ಗುರಿಯಾಗುತ್ತಿದ್ದಾರೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಕಡೆ ಹೆಚ್ಚಿನ ಗಮನಕೊಡದಿರುವುದೇ ಇದಕ್ಕೆ  ಕಾರಣವಾಗಿದೆ. ಮಕ್ಕಳ ಪಾಲನೆ, ಪೋಷಣೆ, ಶಿಕ್ಷಣ ಎಷ್ಟು ಮುಖ್ಯವೋ ಅವರ ಜೀವನವೂ ಅಷ್ಟೇ ಮುಖ್ಯ, ಈ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಲೇಖನ: ಸಂಧ್ಯಾ ಸಿಹಿಮೊಗೆ

Tags: CancerCigaretteGovernment of IndiaGutkaNational Tobacco Control ActSmokingSpecial ArticleTobacco killsWarningಎಚ್ಚರಿಕೆಕ್ಯಾನ್ಸರ್ಗುಟ್ಕಾತಂಬಾಕುಧೂಮಪಾನಭಾರತಭಾರತ ಸರ್ಕಾರರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯ್ದೆಸಿಗರೇಟು
Share206Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ: ನ.1ರಂದು ಕೆ.ಎಸ್. ಪವಿತ್ರ ಅವರಿಂದ ಉಪನ್ಯಾಸ ಪ್ರಾತ್ಯಕ್ಷಿಕೆ

Next Post

ಗೌರಿಬಿದನೂರು: ಬೊಮ್ಮಸಂದ್ರ ಪಂಚಾಯ್ತಿ ಸೇರ್ಪಡೆಗೆ ವಿರೋಧ

kalpa News

kalpa News

Next Post

ಗೌರಿಬಿದನೂರು: ಬೊಮ್ಮಸಂದ್ರ ಪಂಚಾಯ್ತಿ ಸೇರ್ಪಡೆಗೆ ವಿರೋಧ

Leave a Reply Cancel reply

Your email address will not be published. Required fields are marked *

No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL