ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ ಹಜಾರೆ ಕಪ್, ಪಂದ್ಯದಲ್ಲಿ 4ನೆಯ ಬಾರಿ ಕರ್ನಾಟಕ ತಂಡವು ವಿಜಯ ಸಾಧಿಸಿದ್ದು, ಈ ತಂಡಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ತಮಿಳುನಾಡು ತಂಡದ ವಿರುದ್ಧ ರೋಚಕ ಬೌಲಿಂಗ್ ಪ್ರದರ್ಶನ ತೋರಿಸಿದ ಅಭಿಮನ್ಯು ಮಿಥುನ್ ಹಾಗೂ ಸಮಗ್ರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.















