ಕೂಡಲಿ: ಶಿವಮೊಗ್ಗ ಜಿಲ್ಲೆಯ ತುಂಗಭದ್ರಾ ನದಿ ದಡದಲ್ಲಿರುವ ಶ್ರೀ ಯಮಳಪುರಿ(ಶ್ರೀ ಕ್ಷೇತ್ರ ಕೂಡಲಿ)ಯಲ್ಲಿರುವ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿಯವರ ಕಲ್ಯಾಣೋತ್ಸವ ಹಾಗೂ ರಥಾರೋಹಣ ಮಹೋತ್ಸವ ನಾಳೆ ನಡೆಯಲಿದೆ.
ನಾಳೆ ಕಾರ್ತಿಕ ಮಾಸ ಪೌರ್ಣಿಮಯ ಮಂಗಳವಾರ ಮಧ್ಯಾಹ್ನ 12-30 ಗಂಟೆಗೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ಕೂಡಲಿ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿಯವರ ‘‘ರಥಾರೋಹಣ ಮಹೋತ್ಸವ’’ ನಡೆಯಲಿದೆ.
ಶ್ರೀ ಕ್ಷೇತ್ರ ಕೂಡಲಿಯಲ್ಲಿ ಚಿಂತಾಮಣಿ ನರಸಿಂಹಸ್ವಾಮಿಯು ನೆಲೆ ನಿಂತು ಭಕ್ತಾದಿಗಳ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿವಾರಣೆ ಮಾಡುತ್ತಿದ್ದು, ಸಂಪ್ರದಾಯಕವಾಗಿ ಪೂಜಾ ವಿಧಿ ವಿಧಾನಗಳು ಜರುಗುತ್ತಿರುತ್ತವೆ.
ಇಲ್ಲಿಯ ನರಸಿಂಹಸ್ವಾಮಿ ತಲೆಯ ಮೇಲೆ ಚಕ್ರಕಾರದ ಚಿಹ್ನೆ ಹಾಗೂ ಹಣೆಯ ಮೇಲೆ ಹೆಬ್ಬೆಟ್ಟಿನ ಗುರುತು ಇದೆ. ಹಾಗೂ ಮೂರ್ತಿಯ ಬಲಗೈಯಲ್ಲಿ ಚಿಂತಾಮಣಿ ಇರುವುದರಿಂದ ಇಲ್ಲಿ ನೆಲೆಸಿರುವ ನರಸಿಂಹ ಸ್ವಾಮಿಗೆ ಚಿಂತಾಮಣಿ ನರಸಿಂಹಸ್ವಾಮಿ ಎಂದು ಕರೆಯುವ ಪ್ರತೀತಿ ಇದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ರಥೋತ್ಸವದಲ್ಲಿ ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿ, ಸ್ವಾಮಿಯ ದರ್ಶನ ಪಡೆದು ನರಸಿಂಹಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದೆ.
Get In Touch With Us info@kalpa.news Whatsapp: 9481252093, 94487 22200
Discussion about this post