ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ವರ್ಷಗಟ್ಟಲೆ ಪ್ರೀತಿಸಿ ಕಟ್ಟಿಕೊಂಡ ಹೆಂಡತಿಯನ್ನೇ ಕೊಲೆ ಮಾಡಿ ಬಳಿಕ ಅಪಘಾತ ಎಂದು ಬಿಂಬಿಸಲು ಹೋದ ಖದೀಮ ಗಂಡನನ್ನು ಮಂಚೇನಹಳ್ಳಿ ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ತೊಂಡೇಭಾವಿ ಹೋಬಳಿಯ ಕ್ರಿಶ್ಚಿಯನ್ ಕಾಲೋನಿ ಗೇಟ್ ಬಳಿ ಇಂದು ನಡೆದಿದೆ.
8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿ ಹೆದ್ದಾರಿಯಲ್ಲಿ ಹಾಕಿ ಅಪಘಾತ ಎಂದು ಬಿಂಬಿಸಿದ ಪತಿರಾಯ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.
ಚಿಕ್ಕಬಳ್ಳಾಪುರ ತಾಲೂಕಿನ ದೇವರ ಹೊಸಹಳ್ಳಿ ಗ್ರಾಮದ ಆನಂದ್(34) ಆರೋಪಿಯಾಗಿದ್ದು, ಕೆ.ಎಸ್. ಪವಿತ್ರ(26) ಕೊಲೆಯಾದ ಮಹಿಳೆ.
ಕಳೆದ 4 ವರ್ಷದಿಂದ ಪ್ರೀತಿಯಲ್ಲಿದ್ದ ಆನಂದ್ ಹಾಗೂ ಪವಿತ್ರ ಮನೆಯಿಂದ ಓಡಿ ಹೋಗಿ 3 ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದರು. ಆದರೆ ಹಲವು ತಿಂಗಳಿನಿಂದ ಸಂಸಾರದಲ್ಲಿ ಕಲಹಗಳು ಏರ್ಪಟ್ಟಿದ್ದು, ಆನಂದ್ ತನ್ನ ಪತ್ನಿಯನ್ನು ಕಳೆದ ರಾತ್ರಿ ಬಂದಾರ್ಲಹಳ್ಳಿ ತೋಟದ ಮನೆಗೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ರಸ್ತೆಯಲ್ಲಿ ಬಿಸಾಡಿ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ. ಆದರೆ ಯಾವುದೇ ವಾಹನಗಳು ಪವಿತ್ರಾಳ ಶವದ ಮೇಲೆ ಹೋಗದೇ ಇದ್ದುದನ್ನು ಸವಾರರು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಸಿಪಿಐ ಎಸ್. ರವಿ ಹಾಗೂ ಮಂಚೇನಹಳ್ಳಿ ಪಿಎಸ್’ಐ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳದಲ್ಲಿ ಸಿಕ್ಕ ಮೃತಳ ಚುನಾವಣಾ ಗುರುತಿನ ಚೀಟಿ ಆಧಾರದ ಮೇಲೆ ವಿಚಾರಣೆ ನಡೆಸಿ ಆರೋಪಿ ಆನಂದ್’ನನ್ನು ಬಂಧಿಸಿದ್ದಾರೆ.
ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post