ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: 38 ಸ್ಥಾನ ಪಡೆದು ಮುಖ್ಯಮಂತ್ರಿಯಾಗಿದ್ದರೂ ನಮ್ಮ ತಂದೆ ರೈತರ ಸಾಲಮನ್ನಾ ಮಾಡುವ ಕಾಯಕ ಮಾಡಿದ್ದರು. ಆದರೂ, ಯಾಕೆ ಸೋಲುಂಟಾಯಿತು ಎಂಬುದು ನಮ್ಮನ್ನು ಕಾಡುತ್ತಿದೆ. ನಮ್ಮ ತಂದೆ ಮಾಡಿದ ಅನ್ಯಾಯವಾದರೂ ಏನು ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಈ ಕುರಿತಂತೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಫಲಿತಾಂಶ ನೋಡಿ ನಮ್ಮ ಮನಸ್ಸಿಗೆ ತೀವ್ರ ದುಃಖವಾಗಿದೆ. ಬಹುಮತ ಇಲ್ಲದೇ ಇದ್ದರೂ ಸಹ ನಮ್ಮ ತಂದೆ ರೈತರ ಸಾಲಮನ್ನಾ ಮಾಡಿ, ಅನ್ನದಾತನ ನೆರವಿಗೆ ನಿಂತಿದ್ದರು. ಈ ಕಾಯಕದಿಂದಲೇ ಉಪಚುನಾವಣೆಗೆ ಜನರ ಮುಂದೆ ಬಂದಿದ್ದೆವು. ಆದರೆ, ಜನ ಯಾಕೆ ಸೋಲಾಯಿತು ಎಂಬುದು ನಮ್ಮನ್ನು ಕಾಡುತ್ತಿದೆ. ಉಪಚುನಾವಣೆಯಲ್ಲಿ ಅನರ್ಹರು ಗೆದ್ದಿದ್ದರೂ, ಅವರಿಗೆ ಮತ ನೀಡಿದ ಮತದಾರರು ಸೋತಿದ್ದಾರೆ ಎಂದಿದ್ದಾರೆ.
ನನ್ನ ತಂದೆ ಎರಡನೆಯ ಬಾರಿಗೆ ಹೃದಯಶಸ್ತ್ರ ಚಿಕಿತ್ಸಗೆ ಓಳಗಾಗಿದ್ದಾರೆ. 14 ದಿನಗಳ ಕಾಲ ಚುನಾವಣಾ ಪ್ರಚಾರದ ವೇಳೆ ಅವರು ಒಂದು ಕ್ಷಣ ಮಲಗಿಲ್ಲ. 15 ಕ್ಷೇತ್ರದ ಜನ ಅನರ್ಹರಿಗೆ ಪಾಠ ಕಲಿಸುತ್ತಾರೆ ಎಂದು ನನ್ನ ಬಳಿ ಹೇಳುತ್ತಿದ್ದರು. ಇದು ಅನರ್ಹರ ಗೆಲುವು ಇರಬಹುದು. ಆದರೆ ಇದು ಮತದಾರರ ಸೋಲು ಎಂದಿದ್ದಾರೆ.
Get in Touch With Us info@kalpa.news Whatsapp: 9481252093















