ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಭಾರತದ ರಾಷ್ಟ್ರೀಯ ಪೌರತ್ವ ಪಡೆಯಲು ವೋಟರ್ ಐಡಿ, ಆಧಾರ್ ಕಾರ್ಡ್ ಹಾಗೂ ಪಾಸ್’ಪೋರ್ಟ್ ದಾಖಲೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಕುರಿತಂತೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಕೇಂದ್ರದ ಅಧಿಕಾರಿಗಳು, ಭಾರತದ ಪೌರತ್ವ ಪಡೆಯಲು ವ್ಯಕ್ತಿಯ ಜನನ ಪ್ರಮಾಣ ಪತ್ರ, ಜನನ ಸ್ಥಳ ಪ್ರಮಾಣಪತ್ರ ದಾಖಲೆಯಾಗುತ್ತದೆಯೇ ಹೊರತು, ಆಧಾರ್ ಕಾರ್ಡ್, ಪಾಸ್’ಪೋರ್ಟ್, ವೋಟರ್ ಐಡಿ ಸೇರಿದಂತೆ ಯಾವುದೇ ದಾಖಲೆಗಳು ಆಧಾರವಾಗುವುದಿಲ್ಲ ಎಂದಿದ್ದಾರೆ.
ಇವುಗಳನ್ನು ಸಲ್ಲಿಸಿ ಪ್ರಮಾಣಪತ್ರ ಪಡೆಯಬಹುದಾಗಿದೆಯೇ ವಿನಾ, ಪೌರತ್ವ ಕಾಯ್ದೆ ಹೆಸರಿನಲ್ಲಿ ಯಾರಿಗೂ ಕಿರುಕುಳ ನೀಡುವುದಾಗಲಿ, ಅನನುಕೂಲತೆ ಮಾಡುವುದಾಗಲಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
#Citizenship of India may be proved by giving any document relating to date of birth or place of birth or both. Such a list is likely to include a lot of common documents to ensure that no Indian citizen is unduly harassed or put to inconvenience.#CAA2019
10/n
— Spokesperson, Ministry of Home Affairs (@PIBHomeAffairs) December 20, 2019
ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್’ಆರ್’ಸಿ ಬಗ್ಗೆ ಎದ್ದಿರುವ ಪ್ರತಿಭಟನೆ ಮತ್ತು ಹಿಂಸಾಚಾರ ಸಂಬಂಧ 13 ಪ್ರಶ್ನೆಗಳನ್ನು ಅದಕ್ಕೆ ಉತ್ತರಗಳನ್ನು ಸಿದ್ದಪಡಿಸಿರುವ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಇರುವ ವಾಸ್ತವಾಂಶಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದೆ.
ಚುನಾವಣಾ ಗುರುತುಪತ್ರ, ಆಧಾರ್ ಕಾರ್ಡ್ ಮತ್ತು ಪಾಸ್’ಪೋರ್ಟ್‌ಗಳು ಪ್ರಯಾಣ ಮಾಡುವಾಗ ಸಲ್ಲಿಸುವ ದಾಖಲೆಗಳಾಗಿದ್ದು, ಭಾರತದಲ್ಲಿ ವಾಸವಿದ್ದೇವೆ ಎಂದು ತೋರಿಸುವ ಆಧಾರಗಳಾಗಿವೆಯೇ ವಿನಾ ಪೌರತ್ವ ಪಡೆಯಲು ಸಲ್ಲಿಸಬೇಕಾದ ದಾಖಲೆಗಳನ್ನಾಗಿ ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post