ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮನಾಲಿ: ಭಾರತ ಪ್ರಾಕೃತಿಕ ಸ್ವರ್ಗವೆಂದೇ ಕರೆಯಲ್ಪಡುವ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ಪರಿಣಾಮವಾಗಿ ರಸ್ತೆಯಲ್ಲಾ ಹಿಮಗಡ್ಡೆಯಾಗಿ ಮಾರ್ಪಟ್ಟಿದೆ.
ಭಾರೀ ಹಿಮಪಾತದ ಪರಿಣಾಮ ರಸ್ತೆಗಳೆಲ್ಲ ಮಂಜುಗಡ್ಡೆಯಿಂದ ಆವೃತ್ತವಾಗಿರುವ ಕಾರಣ ಸಂಚಾರಕ್ಕೆ ತೊಂದರೆಯಾಗಿದ್ದು, ಸುಮಾರು ನಾಲ್ಕು ಕಿಮೀಗೂ ಅಧಿಕ ದೂರ ಟ್ರಾಫಿಕ್ ಜಾಮ್ ಆಗಿದೆ.
ಲಾಹೌಲ್-ಸ್ಪಿಟಿ ಜಿಲ್ಲೆಯ ಮನಾಲಿ-ಕೇಲಾಂಗ್ ಮಾರ್ಗದಲ್ಲಿ ಸೋಮವಾರ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ, ಇಂದು ಹಿಮವನ್ನು ಕೊಂಚ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಸಂಚಾರ ಸ್ಪಲ್ಪಮಟ್ಟಿಗೆ ಆರಂಭವಾಗಿದೆ.
ಈ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಸಹ ಅಧಿಕವಾಗಿದೆ. ಕುಲು-ಮನಾಲಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಗುಲಾಬಾ, ಸೋಲಾಂಗ್ ಮತ್ತು ಕೋಠಿ ಪ್ರದೇಶದಲ್ಲಿ ಹಿಮಪಾತ ಕಡಿಮೆಯಾಗಿದೆ. ಕಾಲ್ಪಾ, ಕಿನ್ನೌರ್ ಜಿಲ್ಲೆ ಮತ್ತು ಕೇಲಾಂಗ್, ಲಾಹೌಲ್ ಸೇರಿದಂತೆ ಹಲವು ಕಡೆಗಳಲ್ಲಿ ದಟ್ಟ ಹಿಮ ಸುರಿಯುತ್ತಿದೆ.
Get in Touch With Us info@kalpa.news Whatsapp: 9481252093
















