ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ್ ಅವರ ಪತ್ನಿ ಶಿಕ್ಷಕಿ ಸುಮಾ ಅವರು ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾರೆ.
ಭದ್ರಾವತಿಯ ಸಂಚಿಯ ಹೊನ್ನಮ್ಮ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಾ ಅವರು ಇತ್ತೀಚೆಗಷ್ಟೇ ಶಿವಮೊಗ್ಗದ ಸರ್ಕಾರಿ ಶಾಲೆಗೆ ವರ್ಗವಾಗಿ ಬಂದಿದ್ದರು.
ನಗರದ ನಿಸರ್ಗ ಲೇಔಟ್’ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿನ್ನೆ ರಾತ್ರಿ ಅವರು ನೇಣಿಗೆ ಶರಣಾಗಿದ್ದು, ಕಾರಣ ತಿಳಿದುಬಂದಿಲ್ಲ.
ನಿನ್ನೆ ಶಾಲೆಯಿಂದ ಎಂದಿನಂತೆಯೇ ಮನೆಗೆ ಆಗಮಿಸಿದ ಅವರು, ಮನೆಯವರೊಂದಿಗೆ ಸಂತೋಷದಿಂದಲೇ ಮಾತನಾಡಿದ್ದಾರೆ. ಮನೆಯವರೆಲ್ಲಾ ಹೊರಗಡೆ ಮಾತನಾಡುತ್ತಾ ಕುಳಿತಿರುವಂತೆಯೇ ಸಹಜವಾಗಿಯೇ ಕೊಠಡಿಗೆ ತೆರಳಿದ ಅವರು ನೇಣಿಗೆ ಶರಣಾಗಿದ್ದಾರೆ.
ಸುಮಾ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಒಡನಾಟವನ್ನೇ ಹೊಂದಿದ್ದರು. ತಾವು ಎಸಿ ಪತ್ನಿ ಎಂಬ ಹಮ್ಮುಬಿಮ್ಮುಗಳಿಲ್ಲದೇ ಎಲ್ಲರೊಂದಿಗೂ ಉತ್ತಮ ಸ್ನೇಹಜೀವಿಯಾಗಿದ್ದರು. ಇವರ ಅಕಾಲಿಕ ಮರಣ ಶಿವಮೊಗ್ಗ ಜಿಲ್ಲೆಯ ಶಿಕ್ಷಕ ವರ್ಗಕ್ಕೆ ಆಘಾತವನ್ನುಂಟು ಮಾಡಿದ್ದು, ಹಲವು ಶಿಕ್ಷಕರು ಸಂತಾಪ ಸೂಚಿಸಿದ್ದಾರೆ.
Get in Touch With Us info@kalpa.news Whatsapp: 9481252093
















