ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಸನ್ ನೆಟ್’ವರ್ಕ್ ಒಡೆತನದ ಉದಯ ಟೀವಿಯ ನೌಕರರಿಗೆ ಬೋನಸ್, ಹಕ್ಕಿನ ರಜೆ ಭತ್ಯೆ ಮತ್ತು ತುಟ್ಟಿಭತ್ಯೆ ನೀಡುವಂತೆ ಉದಯ ಟಿವಿ ನೌಕರರ ಸಂಘ ಒತ್ತಾಯಿಸಿದೆ.
ಸಂಘದ ಅಧ್ಯಕ್ಷ ಜಿ.ಆರ್. ಶಿವಶಂಕರ್ ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ, ಕಳೆದ 25 ವರ್ಷಗಳಿಂದ ಚಾನಲ್ ನಡೆಸುತ್ತಿರುವ ಆಡಳಿತ ಮಂಡಳಿ 2008ರಿಂದ ಈವರೆಗೆ ಬೋನಸ್ ನೀಡಿಲ್ಲ.ಅಲ್ಲದೆ ದುಡಿಯುವ ಕಾರ್ಮಿಕರಿಗೆ ತುಟ್ಟಿಭತ್ಯೆ ಹಾಗೂ ಹಕ್ಕಿನ ರಜೆ ನೀಡದೆ ಸನ್ ನೆಟ್’ವರ್ಕ್ ವಂಚಿಸಿದೆ ಎಂದು ಆರೋಪಿಸಿದರು.
ಕನಿಷ್ಠ ವೇತನ ಕಾಯ್ದೆಯಡಿ ಕಾರ್ಮಿಕ ಇಲಾಖೆ ಇದೀಗ ಎಲ್ಲ ನೌಕರರಿಗೆ 6 ತಿಂಗಳಿಗೆ 54 ಲಕ್ಷ ರೂ.ಗಳಷ್ಟು ತುಟ್ಟಿಭತ್ಯೆ ನೀಡಲು ಆದೇಶಿಸಿದೆ. ಆದರೆ ಈ ಆದೇಶಕ್ಕೆ ಸನ್ ನೆಟ್’ವರ್ಕ್ ಮನ್ನಣೆ ನೀಡದೆ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಶಿವಶಂಕರ್ ದೂರಿದರು.
ಕಾರ್ಮಿಕ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಸನ್ ನೆಟ್’ವರ್ಕ್‌ನ ವಂಚನೆಯ ಅರಿವದ್ದರೂ ಅವರ ಮೇಲೆ ಒತ್ತಡ ತಂದು ಬೋನಸ್, ತುಟ್ಟಿಭತ್ಯೆ ಮತ್ತು ಹಕ್ಕಿನ ರಜೆ ನಗದು ಮಾಡಿಸಲು ಗಮನ ಹರಿಸುತ್ತಿಲ್ಲ ಎಂದು ಟೀಕಿಸಿದರು.
Get in Touch With Us info@kalpa.news Whatsapp: 9481252093















