ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಶಿವಮೊಗ್ಗ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥರವರ ಹುಟ್ಟುವನ್ನು ಅವರ ಅಭಿಮಾನಿಗಳು ದುಗ್ಗಾವರ ಎಲ್’ಐಸಿ ರಂಗಸ್ವಾಮಿ ಅಭಿಮಾನಿ ಬಳದಿಂದ ಇಲ್ಲಿನ ಶ್ರೀಮಾನ್ಯ ವೃದ್ದಾಶ್ರಮದ ವೃದ್ದರಿಗೆ ಹಣ್ಣು, ಹಾಲು, ಬಿಸ್ಕತ್ ನೀಡುವ ಮೂಲಕ ಸರಳವಾಗಿ ಆಚರಿಸಿದರು.
ಅಭಿಮಾನಿಗಳಲ್ಲಿ ಒಬ್ಬರಾದ ದುಗ್ಗಾವರ ಎಲ್’ಐಸಿ ರಂಗಸ್ವಾಮಿ ಮಾತನಾಡಿ, ಎಸ್’ಎಸ್’ಎಲ್’ಸಿ ಯಿಂದ ಸ್ನಾತಕೋತ್ತರ ವಿಭಾಗದ ತನಕ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಪಿರಮಿಡ್ ಕೇಂದ್ರದ ಮೂಲಕ ಧ್ಯಾನ ಕೇಂದ್ರವನ್ನು ಆರಂಭಿಸಿದ್ದಾರೆ. ಫೆ. 14 ಅವರ ಹುಟ್ಟು ಹಬ್ಬವಾಗಿದ್ದು, ಅವರ 44ನೆಯ ಜನ್ಮದಿನದ ಪ್ರಯುಕ್ತ ವೃದ್ದಾಶ್ರಮಕ್ಕೆ ಭೇಟಿ ನೀಡಿ ಇಲ್ಲಿರುವ ವೃದ್ದರಿಗೆ ಹಣ್ಣು, ಹಾಲು ವಿತರಿಸಲಾಗಿದೆ ಎಂದರು.
ಬೆಸ್ಕಾಂ ನಿವೃತ್ತ ಅಧಿಕಾರಿ ಪಿ. ರುದ್ರಮೂರ್ತಿ ಮಾತನಾಡಿ, ಅವರು ಸದಾಕಾಲ ಅವರದ್ದೇ ಆದ ಕಾರ್ಯದ ಮೂಲಕ ಎಲ್ಲರಿಗೂ ಆದರ್ಶವಾಗಿದ್ದಾರೆ. ಇಂತಹ ಆದರ್ಶ ಹೊಂದಿರುವ ಡಾ.ಪಿ. ರಂಗನಾಥರವರ ಕಾರ್ಯ ಎಲ್ಲರೂ ಮೆಚ್ಚುವಂತದ್ದು ಎಂದರು.
ಈ ಸಂದರ್ಭದಲ್ಲಿ ಬೇಕರಿ ವಿಜಯ್, ಬಿ. ಚನ್ನಕೇಶವ, ಎಂ.ಟಿ. ರಮೇಶ್, ಮನಮೋಹನ್, ಎಂ. ಭಾಷ, ಮಹಂತೇಶ್, ಮುಸ್ಕಾನ್ ಮುಂತಾದವರು ಉಪಸ್ಥಿತರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post