ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ದೊರೆತಿದ್ದು, ಸೆನೆಗಲ್ ದೇಶದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಶೀಘ್ರ ಕರ್ನಾಟಕಕ್ಕೆ ಕರೆದುಕೊಂಡು ಬರಲಾಗುತ್ತಿದೆ.
ಈ ಕುರಿತಂತೆ ಇದ್ದ ತೊಡಕಾಗಿದ್ದ ಕೆಲವು ಕಾನೂನು ಸಮಸ್ಯೆಗಳು ಪರಿಹಾರವಾಗಿದ್ದು, ಆತನ ಹಸ್ತಾಂತರಕ್ಕೆ ಅಗತ್ಯವಿರುವ ಪ್ರಕ್ರಿಯೆಗಳೂ ಸಹ ಆರಂಭವಾಗಿವೆ.
ಸೆನಗಲ್ ದೇಶದ ಜೊತೆಗೆ ಭಾರತಕ್ಕೆ ಒಪ್ಪಂದ ಹಿನ್ನೆಲೆಯಲ್ಲಿ ರವಿ ಪೂಜಾರಿ ಬಂಧನಕ್ಕೆ ತೊಡಕಾಗಿತ್ತು. ಇದೀಗ ರವಿ ಪೂಜಾರಿಯನ್ನು ರಾಜ್ಯಕ್ಕೆ ಕರೆತರುವ ಸಂಬಂಧ ಕಾನೂನು ಪ್ರಕ್ರಿಯೆಗಳು ನಿವಾರಣೆಯಾಗಿದ್ದು, ಸದಸ್ಯದಲ್ಲಿಯೇ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಪೊಲೀಸರ ತಂಡ ಸೆನಗಲ್’ಗೆ ತೆರಳಿ ಆತನನ್ನು ರಾಜ್ಯಕ್ಕೆ ಕರೆ ತರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ರವಿ ಪೂಜಾರಿ ವಿರುದ್ಧ ಈತನ ವಿರುದ್ಧ ಬೆಂಗಳೂರಿನಲ್ಲಿ 39, ಮಂಗಳೂರಿನಲ್ಲಿ 36, ಉಡುಪಿಯಲ್ಲಿ 11 ಮತ್ತು ಮೈಸೂರು, ಹುಬ್ಬಳ್ಳಿ-ಧಾರವಾಡ, ಕೋಲಾರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.
Get in Touch With Us info@kalpa.news Whatsapp: 9481252093
Discussion about this post