ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ತಾಲೂಕಿನ ವಿವಿದೆಢೆ ಇಸ್ಪೀಟ್ ದಂಧೆ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು 11 ಜನರನ್ನು ಬಂಧಿಸಿದ್ದು, 32,800 ರೂ. ಹಣ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಡಿವೈಎಸ್’ಪಿ ರೊಷನ್ ಜಮೀರ್, ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಇ. ಆನಂದ್ , ಪಿಎಸ್’ಐ ಎಸ್.ಡಿ. ನೂರ್ ಆಹ್ಮಾದ್, ಜಂಟಿ ಕಾರ್ಯಚರಣೆ ನಡೆಸಿ, ತಾಲೂಕಿನ ನಗರಂಗೆರೆ ಕೆರೆಯಲ್ಲಿ ಇಸ್ಪೀಟ್ ಆಡುತ್ತಿದ್ದ ಕೃಷ್ಣಮೂರ್ತಿ, ಚಳ್ಳಕೆರೆ ಹಳೇ ಟೌನ್, ರಾಜಣ್ಣ, ಮದಕರಿನಗರ, ಶಶಿಧರ್ ಹೀರೆಹಳ್ಳಿ, ಮಹಾಲಿಂಗಪ್ಪ ಚಿಕ್ಕಚಲ್ಲೂರು, ವೀರೇಶ್ ವೆಂಕಟೇಶ ನಗರ, ರೇಣುಕಾಪುರ ಜಾಲಪ್ಪ ಶ್ರೀಧರ್, ಭೀಮಣ್ಣ, ಬೋರಪ್ಪನಹಟ್ಟಿಯ ಗ್ರಾಮದ ಸಣ್ಣಪಾಪಯ್ಯ, ದಾದಾಪೀರ್, ಶಿವಮೂರ್ತಿ ಎಂಬುವವರನ್ನು ಬಂಧಿಸಿದ್ದು, ಇವರಿಂದ 32.800 ರೂ.ವಶ ಪಡಿಸಿಕೊಂಡು ಕೇಸ್ ದಾಖಲಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093







Discussion about this post