No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
  • Advertise With Us
  • Grievances
  • About Us
  • Contact Us
Saturday, September 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಸೊರಬ

ಈಸೂರನ್ನು ಈಶ್ವರನ ನೆಲೆ ಎಂದು ದೃಡೀಕರಿಸುವ ಪ್ರಾಚೀನ ಶಾಸನ ಪತ್ತೆ

kalpa News by kalpa News
February 21, 2026
in ಸೊರಬ
0
ಈಸೂರನ್ನು ಈಶ್ವರನ ನೆಲೆ ಎಂದು ದೃಡೀಕರಿಸುವ ಪ್ರಾಚೀನ ಶಾಸನ ಪತ್ತೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ವರದಿ  |

ಸ್ವಾತಂತ್ರ ಸಂಗ್ರಾಮದ ಕಹಳೆಯ ಮೂಲಕ ರಾಷ್ಟ್ರದ ಮನಮನಗಳಲ್ಲಿ ತುಂಬಿರುವ ಈಸೂರು #Esooru ಗ್ರಾಮದ ಮೂಲವೇ ಈಶ್ವರನ ನೆಲೆ ಎಂದು ಇತ್ತೀಚೆಗೆ ಪತ್ತೆಯಾಗಿರುವ ಶಾಸನ ದೃಡೀಕರಿಸಿದೆ.

ಗ್ರಾಮದ ಹೆಗ್ಗೆರೆ ಕೆರೆಯ ಏರಿಯ ಮೇಲೆ ಶ್ರೀ ಹೆಗ್ಗೆರೆ ಚೌಡೇಶ್ವರಿ ದೇವಸ್ಥಾನ ಹೊಸದಾಗಿ ನಿರ್ಮಿಸಲು ಮೂಲ ಪೂಜನೀಯ ಶಿಲ್ಪವನ್ನು ಸ್ಥಳಾಂತರಿಸುವಾಗ ಅದರ ಕೆಳಭಾಗದಲ್ಲಿ ಈ ಶಾಸನವಿದ್ದುದನ್ನು ಸ್ಥಳೀಯ ಇತಿಹಾಸ ಸಂಶೋಧಕ ಮಂಜಪ್ಪ ಚುರ್ಚಿಗುಂಡಿ ಪತ್ತೆ ಮಾಡಿದ್ದಾರೆ
ಶಾಸನವು ಒಂದು ಸ್ಮಾರಕ ಶಿಲ್ಪದ ಕೆಳಭಾಗದಲ್ಲಿದ್ದು ಮೂರು ಸಾಲಿನಿಂದ ಕೂಡಿದೆ. ಮಹಾ ಸಾಮಾಂತಾಧಿ ಪತಿಯಾದ ಪುಸಿಮಯ್ಯನು ಈಶ್ವರ ಪುರವನ್ನು ಪ್ರತಿಪಾಳಿಸುತ್ತಿರುವುದಾಗಿ ಶಾಸನ ತಿಳಿಸುತ್ತದೆ. ಶಾಸನವು ತೃಟಿತವಾಗಿರುವುದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗುವುದಿಲ್ಲ. ಶಾಸನದ ಲಿಪಿ ಮತ್ತು ಶಿಲ್ಪದ ವಿನ್ಯಾಸಗಳು ರಾಷ್ಟ್ರಕೂಟರ ಅವಧಿಗೆ ಸೇರುತ್ತವೆ.

ಶಾಸನದಲ್ಲಿ ಉಲ್ಲೇಖಿತ ಈಶ್ವರಪುರವು ಈಗಿನ ಈಸೂರಿನ ಹೆಸರಾಗಿದೆ. ಈಸೂರಿನ ನಾಮವನ್ನು ಅನೇಕ ಶಾಸನಗಳು ಉಲ್ಲೇಖಿಸುತ್ತವೆ. 7ನೇ ಶತಮಾನಕ್ಕೆ ಸೇರಿದ ಜಂಬಾನಿಯ ಶಾಸನದ ಉಲ್ಲೇಖ ಅತ್ಯಂತ ಹಳೆಯದಾಗಿದ್ದು ಅದರಲ್ಲಿ ಇಸವುರ ಎಂದಿದೆ. ಪಕ್ಕದ ಗ್ರಾಮವಾದ ಸಾಲೂರಿನ ರಾಷ್ಟ್ರಕೂಟರ ಶಾಸನ ಒಂದರಲ್ಲಿ ಈಸವೂರ್ ಎಂದು ಉಲ್ಲೇಖವಿದೆ. ಹತ್ತನೆಯ ಶತಮಾನದ ನಂತರದ ಹಲವು ಶಾಸನಗಳಲ್ಲೂ ಈಸವೂರು ಎಂದು ಉಲ್ಲೇಖ ಕಂಡುಬರುತ್ತದೆ.

ಜಂಬಾನಿ ಗ್ರಾಮದ ಶಾಸನದಲ್ಲಿ ಈಸೂರನ್ನು ಅಂದಿನ ವಾರಣಾಸಿಯಂತಹ ಪವಿತ್ರ ಸ್ಥಳವೆಂದು ಉಲ್ಲೇಖಿಸಲಾಗಿದೆ. ಏಳನೇ ಶತಮಾನದ ವೇಳೆಗಾಗಲೇ ಈಸೂರು ಒಂದು ಪ್ರಮುಖ ಶಿವನ ಆರಾಧನಾ ಕ್ಷೇತ್ರವಾಗಿತ್ತು ಎಂದು ತಿಳಿಯುತ್ತದೆ.

ಈಗ ದೊರೆತಿರುವ ಶಾಸನವು ಇಸವೂರು ಎಂದರೆ ಈಶ್ವರನ ಊರು(ಈಶ್ವರ ಪುರ) ಎಂಬ ಸ್ಪಷ್ಟ ಮಾಹಿತಿಯನ್ನು ನೀಡುವ ಮೂಲಕ ಈಸೂರು ಮೂಲತಃ ಈಶ್ವರನ ನೆಲೆಯೆಂದು ದೃಡೀಕರಿಸಿದೆ.
ಇದಕ್ಕೆ ಪೂರಕವಾಗಿ ಗ್ರಾಮದಲ್ಲಿ ಗಜಪೃಷ್ಠಾಕಾರದ ತಳಪಾಯ ಹೊಂದಿರುವ ಶಿವಾಲಯವಿದ್ದು ಇದು ಶಾತವಾಹನರ ಅವಧಿಯ ದೇವಾಲಯವಾಗಿದೆ. 2 -3 ನೇ ಶತಮಾನದಲ್ಲಿಯೇ ಇಲ್ಲಿ ಶಿವನ ಆರಾಧನೆ ಉನ್ನತ ಮಟ್ಟದಲ್ಲಿದ್ದುದರಿಂದ ಈ ಊರಿಗೆ ಈಶ್ವರ ಪುರ ಈಶನ ಊರು , ಇಸವೂರು, ಈಸೂರು ಎಂಬ ನಾಮ ಬಂದಿದೆ.

ಶಾಸನವಿರುವ ಸ್ಮಾರಕ ಶಿಲ್ಪದ ಬಳಿ ಈಗ ಮಾತೆ ಚೌಡೇಶ್ವರಿಯನ್ನು ಪ್ರತಿಷ್ಟಾಪಿಸಲಾಗುತ್ತಿದೆ. ಈ ಸ್ಥಳವು ಹೆಗ್ಗೆರೆ ಎಂದು ಕರೆಯಲ್ಪಡುತ್ತಿದ್ದು ಪ್ರಾಚೀನ ದೊಡ್ಡ ಕೆರೆಯ ಕಲ್ಪನೆಯನ್ನು ತೆರೆದಿಡುತ್ತದೆ. ಹಾಗಾಗಿ ಇಲ್ಲಿನ ಚೌಡೇಶ್ವರಿ ಅಮ್ಮನನ್ನು ಹೆಗ್ಗೆರೆ ಚೌಡೇಶ್ವರಿ ಎಂದು ಆರಾಧಿಸಲಾಗುತ್ತಿದೆ.

ದಿವಂಗತ  ಜಗದೀಶ್ ಅಗಸಿಬಾಗಿಲು ಶಾಸನ ಓದಿಕೊಟ್ಟಿರುತ್ತಾರೆ. , ಶೇಜೇಶ್ವರ್ ನಿರ್ದೇಶಕರು ರಾಜ್ಯ ಪುರಾತತ್ವ ಇಲಾಖೆ ಮತ್ತು  ರಮೇಶ್ ಬಿ ಹಿರೇಜಂಬೂರು ಇವರು ಶಾಸನ ಅಧ್ಯಯನಕ್ಕೆ ಸಲಹೆ ನೀಡಿರುತ್ತಾರೆ. ಮತ್ತು ಬೇಕರಿ ರಾಘಣ್ಣ ದನಿಮನಿ ಜಯಪ್ಪ ಬೇಗೂರು ಶಿವಪ್ಪ ಮತ್ತು ಶ್ರೀ ಹೆಗ್ಗೆರೆ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳಾದ ಸುರೇಶ ಚುರ್ಚಿಗುಂಡಿ, ಆಂಜನೆಯ ಪ್ರಭು ಸಂಡದ ಕುಮಾರ ಸ್ವಾಮಿ, ರವಿ ಮತ್ತು ಸದಸ್ಯರು ಶಾಸನ ಅಧ್ಯಯನಕ್ಕೆ ಸಹಕಾರ ನೀಡಿರುತ್ತಾರೆ.

ವರದಿ: ಮಧುರಾಮ್, ಸೊರಬ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: EsooruKannada NewsKannada News LiveKannada News Online ShivamoggaKannada WebsiteKannadaNewsWebsiteLatestNewsKannadaLocalNewsMalnadNewsNews in KannadaNews KannadaShikaripuraShimogaShivamoggaNewsಈಸೂರುಮಲೆನಾಡು_ಸುದ್ಧಿವಿಶೇಷ ವರದಿಶಿವಮೊಗ್ಗ_ನ್ಯೂಸ್
Share200Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

ಬೆಂಗಳೂರು | ಫೆ.22ರಿಂದ ಮಾರ್ಚ್ 3ರವರೆಗೂ ಶ್ರೀನಗರ ರಾಯರ ಮಠದಲ್ಲಿ ವಿಶೇಷ ಉಪನ್ಯಾಸ

Next Post

ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿರುವುದೇ ಗಲಭೆಗೆ ಕಾರಣ | ಈಶ್ವರಪ್ಪ ಕಿಡಿ

kalpa News

kalpa News

Next Post
ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿರುವುದೇ ಗಲಭೆಗೆ ಕಾರಣ | ಈಶ್ವರಪ್ಪ ಕಿಡಿ

ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿರುವುದೇ ಗಲಭೆಗೆ ಕಾರಣ | ಈಶ್ವರಪ್ಪ ಕಿಡಿ

Leave a Reply Cancel reply

Your email address will not be published. Required fields are marked *

No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL