No Result
View All Result
SWR to run special trains for Good Friday, Easter rush
English Articles

Regulation, Diversion and Rescheduling of Trains in the Solapur–Wadi Section

by ಕಲ್ಪ ನ್ಯೂಸ್
June 1, 2026
0

Kalpa Media House  |  Hubballi  | Due to technical works being carried out in the Solapur–Wadi section, temporary regulation, diversion...

Read moreDetails
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ

Hennur Sparsh Hospital Completes One Year | A Reflection of Multispecialty Care

May 25, 2026
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ

Duniya Vijay, Rachita Ram & Raj B. Shetty’s Landlord Premieres This Saturday on Zee Kannada

May 22, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
  • Advertise With Us
  • Grievances
  • About Us
  • Contact Us
Monday, June 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಪನ್ನ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 1, 2020
in ಉತ್ತರ ಕನ್ನಡ
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಹೊನ್ನಾವರ: ಇಡಿಯ ರಾಜ್ಯದ ಸಾಂಸ್ಕೃತಿಕ ಕ್ಷೇತ್ರವನ್ನು ಪ್ರತಿನಿಧಿಸಿದಂತೆ ನಡೆದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಪನ್ನಗೊಂಡಿದೆ.

ಐದನೆಯ ದಿನ ಸಮಾರಂಭದ ಸಭಾಸದರು, ಕಲಾವಿದರು, ಕಲಾಪೋಷಕರು ಮತ್ತು ಊರ ನಾಗರಿಕರೊಂದಿಗೆ ಮೆರವಣಿಗೆಯ ಮೂಲಕ ಬಯಲು ರಂಗಮಂದಿರಕ್ಕೆ ತಲುಪಿ, ಯಕ್ಷಗಾನ ಶೈಲಿಯಲ್ಲಿ ಗಣಪತಿ ಪೂಜೆಯೊಂದಿಗೆ ಶುಭಾರಂಭಗೊಂಡಿತು.

ಕಾರ್ಯಾಧ್ಯಕ್ಷ ಲಕ್ಷ್ಮೀ ನಾರಾಯಣ ಕಾಶಿಯವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಈ ದಿನದ ಕಾರ್ಯಕ್ರಮವನ್ನು ದಿ. ಹೊಸ್ತೋಟ ಮಂಜುನಾಥ ಭಾಗವತರಿಗೆ ಸಮರ್ಪಿಸಿದರು. ದೀಪ ಬೆಳಗುವುದರ ಮೂಲಕ ವಿಧಾನ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಉದ್ಘಾಟಿಸಿದರು.


ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪುರಸ್ಕಾರ-2019 ನ್ನು ಚೆನ್ನೈನ ಖ್ಯಾತ ಭರತನಾಟ್ಯ ಕಲಾವಿದರಾದ ಪದ್ಮಭೂಷಣ ಡಾ. ಪದ್ಮಸುಬ್ರಹ್ಮಣ್ಯಂ ಅವರಿಗೆ ಸರ್ವರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಪರವಾಗಿ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಇವರು ಅಭಿನಂದಿಸುತ್ತಾ ಸೂರ್ಯನು ಉದಯಿಸುವಾಗ ಪದ್ಮ ಅರಳುತ್ತದೆ. ಆದರೆ ಪ್ರಸ್ತುತ ಕಲಾರಂಗದಲ್ಲಿ ಪದ್ಮ ಅರಳುವಾಗ ನಾಟ್ಯರಂಗ ಅರಳುತ್ತದೆ. ಅದಕ್ಕೆ ಪೂರಕವಾಗಿ ಪದ್ಮ ಸುಬ್ರಹ್ಮಣ್ಯಂ ಅವರಿಗೆ ಶಿವರಾಮ ಹೆಗಡೆ ಪ್ರಶಸ್ತಿ ಪ್ರದಾನ ಯತಾರ್ಥವಾಗಿದೆ ಎಂದು ಅಭಿನಂದಿಸಿದರು.

ಪ್ರಶಸ್ತಿ ಸ್ವೀಕರಿಸಿದ ಡಾ. ಪದ್ಮಸುಬ್ರಹ್ಮಣ್ಯಂ ನಾಟ್ಯಾಂಗಣದ ಬಗ್ಗೆ ಭಾವನೆ ವ್ಯಕ್ತಪಡಿಸುತ್ತಾ ಶ್ರೀಶಂಭು ಹೆಗಡೆಯವರ ಹೆಸರಿನಲ್ಲಿ ನಿರ್ಮಿಸಿದ ಈ ಬಯಲು ರಂಗಮಂದಿರ ದೈವಿಕ ಶಕ್ತಿಯನ್ನು ಹೊಂದಿದ್ದು ಮುಂದೊಂದು ದಿನ ಈ ದೈವಿಕ ವೇದಿಕೆಯಲ್ಲಿ ನೃತ್ಯ ಮಾಡುವುದಾಗಿ ಅಪ್ಯಾಯಮಾನವಾದ ಭಾವನೆ ವ್ಯಕ್ತಪಡಿಸಿದರು. ನಾನು ಪ್ರಕೃತಿಯ ಎಲ್ಲಾ ಚರಾಚರಗಳಲ್ಲಿ ನೃತ್ಯದ ಭಾವವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ, ನನ್ನ ನೃತ್ಯಕ್ಕೆ ಪೂರಕವಾಗಿಸುತ್ತೇನೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭರತಮುನಿಯ ನಾಟ್ಯಶಾಸ್ತ್ರ ಜಂಬೂದ್ವೀಪದವರೆಗೆ ವಿಸ್ತರಿಸಿದೆ ಎಂದರು.

ಸ್ವಾಮಿ ವಿದ್ಯಾರಣ್ಯರು ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಭಾರತೀಯತೆಯೊಂದಿಗೆ ಏಕತೆಯನ್ನು ಈ ಸಾಂಸ್ಕೃತಿಕ ಲೋಕ ನಿರ್ಮಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಶ್ರೀಮಯ ಕಲಾಪೋಷಕ ಪ್ರಶಸ್ತಿಯನ್ನು ಗೀತಾ ಎಚ್. ಎಸ್. ಎನ್. ಫೌಂಡೇಶನ್, ಕುಂದಾಪುರ ಇದರ ಶ್ರೀ ಎ. ಶಂಕರ ಐತಾಳ ಅವರಿಗೆ ಪುರಸ್ಕರಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾತ್ವಿಕ ಸಮಾಜ ಪಥದ ದಿಗ್ದರ್ಶನದ ನಿರೀಕ್ಷೆಯಲ್ಲಿ ಸಮಾಜ ಸೇವೆಯಲ್ಲಿರುವ ನನಗೆ ಈ ಪ್ರಶಸ್ತಿ ಸಂಭ್ರಮ ತಂದಿದೆ ಎಂದರು.

ಬೆಂಗಳೂರು ಅದಮ್ಯ ಚೇತನ ಫೌಂಡೇಶನ್,ದ ಮ್ಯಾನೆಜಿಂಗ್ ಟ್ರಸ್ಟಿಯಾದ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಅಂತಾರಾಷ್ಟ್ರೀಯದಂತಹ ಇಂತಹ ರಾಷ್ಟ್ರೀಯ ಕಾರ್ಯಕ್ರಮ ಈ ಗ್ರಾಮೀಣ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಆಯೋಜಿಸುತ್ತಿರುವುದರ ಬಗ್ಗೆ ಅಭಿನಂದನೆ ವ್ಯಕ್ತಪಡಿಸಿದರು.

ಪ.ರಾ. ಕೃಷ್ಣಮೂರ್ತಿಯವರು ಮಾತನಾಡುತ್ತಾ ಸಮಾಜ ಸುಧಾರಣೆಗೆ ಕಲೆಯ ಅಭ್ಯುದಯವೇ ನೈಜ ಮಾರ್ಗ ಎಂದರು. ಹೊಸದಿಗಂತದ ಸಂಪಾದಕರಾದ ಶ್ರೀ ವಿನಾಯಕ ಭಟ್ ಮೂರೂರುರವರು ಮಾತನಾಡಿ, ಯಕ್ಷಗಾನದಿಂದ ಪೌರಾಣಿಕ ಕಥನ ರಾಮಾಯಣ, ಮಹಾಭಾರತದ ಕಲ್ಪನೆ ಜೀವನ ಆಧಾರವಾಗಿ ಮೈಗೂಡಿ ಸಂಸ್ಕಾರ ಸೌಭಾಗ್ಯ ಮೇಳೈಸುತ್ತದೆ ಎಂದರು.

ಚಲನಚಿತ್ರ ನಟರಾದ ನೀರ್ನಳ್ಳಿ ರಾಮಕೃಷ್ಣರವರು ಮಾತನಾಡಿ, ನಾಟ್ಯೋತ್ಸವ ನಿತ್ಯೋತ್ಸವವಾಗಿದೆ ಎಂದರು.

ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಯಕ್ಷಗಾನ ಸಮೃದ್ಧವಾಗಿ ಬೆಳೆದರೆ ಸಮಾಜದ ಸಂಸ್ಕಾರ ಹೆಚ್ಚುತ್ತದೆ. ಈ ಅತ್ಯುತ್ತಮ ಸಂಸ್ಕಾರ ವರ್ಧಿಸುವ ಕಾರ್ಯಕ್ಕೆ ಸರ್ಕಾರದಿಂದ ಸಂಪೂರ್ಣ ಬೆಂಬಲ ಸಹಕಾರ ನೀಡುತ್ತೇವೆ. ಬೌದ್ಧಿಕವಾಗಿ ಸಮಾಜ ಉನ್ನತೀಕರಿಸುವ ಜವಾಬ್ದಾರಿಯ ಭಾಗವಾಗಿ ಯಕ್ಷಗಾನವನ್ನು ಸಮೃದ್ಧಿಗೊಳಿಸುವ ಅನಿವಾರ್ಯತೆ ಇದೆ ಎಂದರು.

ನಾಟ್ಯೋತ್ಸವ ಪೂರ್ಣ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಶ್ರೀ ಎಂ ಎ ಹೆಗ್ಗಡೆ ಮತ್ತು ರಾಜ್ಯ ಪ್ರವಾಸೋದ್ಯಮ ಕಾರ್ಯಪಡೆ ಸದಸ್ಯ ಹಾಗೂ ಶಿವಮೊಗ್ಗ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಶ್ರೀ ಲಕ್ಷ್ಮೀನಾರಾಯಣ ಕಾಶಿ ಉಪಸ್ಥಿರಿದ್ದರು. ಶಿವಾನಂದ ಹೆಗಡೆಯವರು ಸರ್ವರನ್ನೂ ವಂದಿಸಿದರು. ಲಕ್ಷ್ಮೀಕಾಂತ ಗೌಡ ಮತ್ತು ಬಿ.ಎಂ. ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು.

(ವರದಿ ಸಂಗ್ರಹ : ಡಾ.ಎನ್. ಸುಧೀಂದ್ರ)

Get in Touch With Us info@kalpa.news Whatsapp: 9481252093

Tags: HonnavaraKannada News Websitekeremane Shambhu Hegde National Dance FestivalNational Dance Festivalಅದಮ್ಯ ಚೇತನ ಫೌಂಡೇಶನ್ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವರಾಷ್ಟ್ರೀಯ ಪುರಸ್ಕಾರಲಕ್ಷ್ಮೀ ನಾರಾಯಣ ಕಾಶಿವಿಶ್ವೇಶ್ವರ ಹೆಗಡೆ ಕಾಗೇರಿಹೊನ್ನಾವರ
Share200Tweet123Send
Previous Post

ದೃಢ ಭಕ್ತಿಯಿಂದ ಬೇಡಿದವರ ಪಾಲಿಗೆ ನಾನಿದ್ದೇನೆ..ನಾನಿದ್ದೇನೆ.. ಎಂದು ಅನುಗ್ರಹಿಸುವ ವಾತ್ಸಲ್ಯಮೂರ್ತಿ ಶ್ರೀರಾಯರು

Next Post

ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರು ಬದ್ದರಾಗಿರಿ: ಶಾಸಕ ಶಿವಶಂಕರ್ ರೆಡ್ಡಿ ಸೂಚನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರು ಬದ್ದರಾಗಿರಿ: ಶಾಸಕ ಶಿವಶಂಕರ್ ರೆಡ್ಡಿ ಸೂಚನೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮರ ಬಿದ್ದು, ಸಾಗರ ಶಿವಮೊಗ್ಗ ಮಧ್ಯೆ ಹೆದ್ದಾರಿ ಬಂದ್ | ಇಲ್ಲಿದೆ ಪರ್ಯಾಯ ಮಾರ್ಗ

ಮರ ಬಿದ್ದು, ಸಾಗರ ಶಿವಮೊಗ್ಗ ಮಧ್ಯೆ ಹೆದ್ದಾರಿ ಬಂದ್ | ಇಲ್ಲಿದೆ ಪರ್ಯಾಯ ಮಾರ್ಗ

June 1, 2026
ಅಜ್ಜಂಪುರ–ಬೀರೂರು ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ | ಚನ್ನರಾಯಪಟ್ಟಣದಲ್ಲಿ ಹಾಸನ–ಸೊಲ್ಲಾಪುರ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ನಿಲುಗಡೆ

ಅಜ್ಜಂಪುರ–ಬೀರೂರು ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ | ಚನ್ನರಾಯಪಟ್ಟಣದಲ್ಲಿ ಹಾಸನ–ಸೊಲ್ಲಾಪುರ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ನಿಲುಗಡೆ

June 1, 2026
ಗುಬ್ಬಿಯಲ್ಲಿ ರಸ್ತೆ ಕೆಳ ಸೇತುವೆ ಶಂಕುಸ್ಥಾಪನೆ | ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ | ಸಚಿವ ವಿ. ಸೋಮಣ್ಣ

ಗುಬ್ಬಿಯಲ್ಲಿ ರಸ್ತೆ ಕೆಳ ಸೇತುವೆ ಶಂಕುಸ್ಥಾಪನೆ | ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ | ಸಚಿವ ವಿ. ಸೋಮಣ್ಣ

June 1, 2026
SWR to run special trains for Good Friday, Easter rush

Regulation, Diversion and Rescheduling of Trains in the Solapur–Wadi Section

June 1, 2026
ಮಾನವೀಯ ಮೌಲ್ಯಗಳ ಸರದಾರ ಅಂಬರೀಷ್: ಸುರೇಶ್ ಋಗ್ವೇದಿ

ಮಾನವೀಯ ಮೌಲ್ಯಗಳ ಸರದಾರ ಅಂಬರೀಷ್: ಸುರೇಶ್ ಋಗ್ವೇದಿ

June 1, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL