ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕರೋನ ಎಂಬುದು ಒಂದು ರೀತಿಯ ಜ್ವರ ಬಾಧೆ, ನಿಮೋನಿಯಾ, ಟೈಫಾಯ್ಡ್, ವಿಷಮಶೀತ ಜ್ವರ ಇತ್ಯಾದಿಗಳಿದ್ದಂತೆ. ಜ್ವರ ಎಂದ ಹಾಗೆ ನೆನಪಾಗುವುದು ದೇಹದೊಳಗಿನ ತಾಪಮಾನ ಏರುವಿಕೆ. ಒಂದು ನಿರ್ಧಿಷ್ಟ ತಾಪಮಾನ ದಾಟಿದಾಗ ದೇಹವು ಅಸ್ತಿತ್ವ ಕಳೆದುಕೊಳ್ಳಲು ಶುರುಮಾಡುತ್ತದೆ.
ಆಗ ಕ್ಷಣ ಕ್ಷಣಕ್ಕೂ ದೇಹವು ಉತ್ಪತ್ತಿ ಮಾಡುವ(ಸ್ರವಿಸುವ) ಪೋಷಕಾಂಶಗಳೂ ಕಡಿಮೆಯಾಗುತ್ತದೆ. ಮುಂದೆ ದೇಹದೊಳಗಿನ ಖನಿಜಾಂಶಗಳು (Organs) ದುರ್ಬಲವಾಗುತ್ತಾ ಹೋಗುತ್ತವೆ. ಈ ಖನಿಜಾಂಶಗಳು ದೇಹದ ಪೋಷಕಾಂಶಕಗಳು ಎನ್ನುವುದಕ್ಕಿಂತ ಇದು ಧೈರ್ಯ ತುಂಬುವಂತದ್ದಾಗಿದೆ. ಯಾವಾಗ ಧೈರ್ಯ ಕಳೆದುಕೊಳ್ಳುತ್ತೇವೆಯೋ ಆಗ ದೇಹದಲ್ಲಿ ನಡುಕ ಉಂಟಾಗುತ್ತದೆ. ಅಂದರೆ body shivering. ಮುಂದೆ ಕುಸಿಯುತ್ತಾ ಹೋದಂತೆ ಮತ್ತೆ recovery ಕಷ್ಟವೂ ಆಗಬಹುದು, recovery ಆಗದೆಯೂ ಇರಬಹುದು. ಇದು ಮನುಷ್ಯನ ಮರಣವೇ ಆಗುತ್ತದೆ.
ಇಲ್ಲಿ ಮುಖ್ಯವಾಗಿ ನೋಡಬೇಕಾದ ಅಂಶಗಳು ಜಾತಕದಲ್ಲಿ ತುಂಬಾ ಸೂಕ್ಷ್ಮವಾಗಿದೆ. ಯಾವುದೋ ಒಂದು ಗ್ರಹಸ್ಥಿತಿಯು ಜ್ವರಬಾಧೆಯ ಲಕ್ಷಣ ಎಂದು ಗ್ರಂಥಗಳಲ್ಲಿ ಒಂದೆಡೆ ಸೂಚಿಸಿದರೂ ಇದನ್ನು ಬೇರೆ ಬೇರೆ ಆಯಾಮದಲ್ಲಿ ನೋಡದೆ ನಿರ್ಧರಿಸುವ ಹಾಗಿಲ್ಲ. ಅನೇಕ ನಿತ್ಯ ವಾತಾವರಣ ದೋಷದಿಂದ ಅಕ್ಷಿ (ಶೀನು)ಬಂದು ಶೀತ, ಜ್ವರ ಬಂದರೆ ಅದನ್ನು ಕರೋನ, ಟೈಫಾಯ್ಡ್ ಇತ್ಯಾದಿಗಳೆಂದು ತಿಳಿದುಕೊಳ್ಳಬಾರದು ಮತ್ತು ಭಯಗ್ರಸ್ತರೂ ಆಗಬಾರದು. ಹಾಗೇನಾದರೂ ಅಧಿಕ ಪ್ರಸಂಗ ಮಾಡಿಕೊಂಡು ಭಯಗ್ರಸ್ತರಾದರೆ ಮುಂದೆ ಆ ಕಾಯಿಲೆಗಳಿಗೆ ಅವರವ ಭಯವೂ ಕಾರಣವಾದೀತು. ಒಟ್ಟಿನಲ್ಲಿ ನನಗೇನೂ ಆಗಲ್ಲ ಎಂಬ ಧೈರ್ಯವಿದ್ದರೆ ಮರಣಕ್ಕೆ ಅಂಜಬೇಕಾಗಿಲ್ಲ.
ಸಾಮಾನ್ಯವಾಗಿ ಜಾತಕದ ಕುಂಡಲಿಯಲ್ಲಿ ಆರನೆಯ ಮನೆಯನ್ನು ರೋಗ, ಋಣ ಇತ್ಯಾದಿ ವಿಚಾರಗಳಿಗೆ ನೋಡುತ್ತಾರೆ. ಜ್ವರ ತಾಪಗಳನ್ನು ಕೊಡುವವನು ಕುಜ್. ಕುಜನಿಂದ ಸುಬ್ರಹ್ಮಣ್ಯ, ನೃಸಿಂಹ, ದುರ್ಗೆಯರ ಚಿಂತನೆ ಮಾಡಬೇಕೆಂದು ಶಾಸ್ತ್ರ ಹೇಳಿದೆ. ಅಂದರೆ ಈ ದೇವರುಗಳಿಗೆ ಉಷ್ಣ ತಾಪವನ್ನು ನೀಡುವ ಶಕ್ತಿಯೂ ಇದೆ, ಅದನ್ನೇ ಬೆಂಕಿಯನ್ನು ಬೆಂಕಿಯಿಂದ ಶಮನಗೊಳಿಸಬೇಕು ಎಂಬಂತೆ, ಶಮನ ಮಾಡುವ ಗುಣವೂ ಇರುತ್ತದೆ.
ಜ್ವರ ಸಮರ ಭಯೇ ಚಿಂತಯೇದ್ಯುಗ್ರ ನೃಸಿಂಹಂ ಎಂದು ನೃಸಿಂಹ ದೇವರ ಮಂತ್ರವೇ ಇದೆ. ಯುದ್ಧ, ರಣಗಳಲ್ಲಿ ದುರ್ಗಾರಾಧನೆ, ಸುಬ್ರಹ್ಮಣ್ಯನ ಪೂಜೆ ಮಾಡುವುದು ಇದಕ್ಕಾಗಿಯೆ. ಈ ದೇವರುಗಳಲ್ಲಿ ಸಂಕರ್ಷಣಾ(ಘರ್ಷಣೆ) ಶಕ್ತಿ ಹೆಚ್ಚು ಇರುವುದರಿಂದ ಇವರಿಗೆ ಸೇನಾಧಿಪತ್ಯ ಇರುತ್ತದೆ. ಸುಬ್ರಹ್ಮಣ್ಯನನ್ನು ಸೇನಾನಿ ಎಂದಿದ್ದಾರೆ. ದೇಹದೊಳಗೂ ಹೊರಗೂ ಶತ್ರುಗಳಿರುವುದು ಸ್ವಾಭಾವಿಕವಲ್ಲವೇ. ಈ ಶತ್ರು ನಿಗ್ರಹಕ್ಕಾಗಿ, ಧಮನಕ್ಕಾಗಿ ಈ ದೇವತಾ ಶಕ್ತಿಯನ್ನು ಆರಾಧನೆ ಮಾಡಿ ಎಂದರು ಪ್ರಾಜ್ಞ ಋಷಿ ಮುನಿಗಳು. ಈ ದೇವರ ಸ್ವರೂಪವನ್ನು ನೀಡುವವನೇ ಕುಜ ಗ್ರಹ. ಇವನು ಪ್ರಸರಿಸುವ ವಿಕಿರಣಗಳು ವಿಪರೀತ ಉಷ್ಣ. ತಾಪಮಾನ ಜಾಸ್ತಿ. ಇದಕ್ಕಾಗಿ ಜಾತಕದಲ್ಲಿ ಕುಜದೋಷ ಇದ್ದಾಗ ಸಿಟ್ಟು, ಅನಾಹುತಗಳಾಗುತ್ತದೆ. ಶಾಂತಿ ಮಾಡಿಸಿಕೊಳ್ಳಿ ಎಂದು ಜ್ಯೋತಿಷ್ಯರು ಸಲಹೆ ನೀಡುತ್ತಾರೆ.
ಕೇವಲ ಷಷ್ಟದಲ್ಲಿ ಕುಜ ಇದ್ದ ಮಾತ್ರಕ್ಕೇ ಅಪಾಯ ಎಂದೇನಿಲ್ಲ. ದುರ್ಬಲನಾಗಿ ಶತ್ರು ಕ್ಷೇತ್ರಗತನಾಗಿ ರವಿ ಸಂಪರ್ಕ ಇದ್ದಾಗ, ರವಿ ನವಾಂಶೆ ಪಡೆದಿದ್ದಾಗ ಇವನು ಜ್ವರಕಾರಕ. ದೇಹವು ಉಷ್ಣತೆ ಜಾಸ್ತಿ ನೀಡುತ್ತದೆ. ಇಲ್ಲಿಗೇ ಅಪಾಯಕಾರಿ ಜ್ವರ ಎಂದು ತೀರ್ಮಾನಿಸುವ ಹಾಗಿಲ್ಲ. ಇಂತಹ ಸ್ಥಿತಿಗೆ ಜಾತಕದಲ್ಲಿ ಶನಿಯೂ ದುರ್ಬಲನಾಗಿ, ಗುರುವೂ ಚಂದ್ರನಿಂದಲೋ, ಲಗ್ನದಿಂದಲೋ, ಲಗ್ನ, ಚಂದ್ರ ರಾಶ್ಯಾಧಿಪತಿಯಿಂದಲೋ ತೃತೀಯದಲ್ಲಿದ್ದರೆ ಬಡಿತ ಜಾಸ್ತಿಯಾಗುತ್ತದೆ. anxiety, aggressive nature ಸೃಷ್ಟಿಯಾಗುತ್ತೆ. ಆಗ ಇದನ್ನು ಅಪಾಯಕಾರಿ ಎನ್ನಬಹುದು. ಆದರೆ ಮರಣ ಎಂದು ಇನ್ನೂ ನಿರ್ಧರಿಸಲಾಗದು. ಹಾಗೆ ನಿರ್ಧರಿಸಬೇಕಾದರೆ, ಗೋಚರದಲ್ಲಿ ಲಗ್ನ, ಚಂದ್ರರಿಂದ, ಶನಿಯಿಂದ ಅಷ್ಟಮದಲ್ಲಿ ಶನಿ ಸಂಚಾರ ಇರಬೇಕು. ಇಷ್ಟಿದ್ದರೂ ಇನ್ನೂ ಅಪಾಯ ಎಂದೂ ನಿರ್ಧರಿಸುವ ಹಾಗಿಲ್ಲ. ಆಗ ದಶಾ ವಿಚಾರ ನೋಡಬೇಕು.
ಖರ ದ್ರೇಕ್ಕಾಣಾಧಿಪತಿಯ ದಶೆ ಭುಕ್ತಿಗಳು, ಅರುವತ್ತ ನಾಲ್ಕನೆಯ ನವಾಂಶಾಧಿಪತಿಯ ದಶೆಗಳೂ ಇದ್ದಲ್ಲಿ ಅಪಾಯ ನಿಶ್ಚಿತ ಎಂದು ತಿಳಿಯಬೇಕು. ಸುಮ್ಮ ಸುಮ್ಮನೆ YouTubeಗಳ ಮೂಲಕ ನೋಡಿ ರೋಗ ವಿಚಾರದ ವಿಚಾರವನ್ನು ತಿಳಿದುಕೊಂಡರೆ ಇದು ಭಯ ಹೆಚ್ಚಿಸಿ ಸಾವು ಬರುವಂತೆ ಮಾಡುತ್ತದೆಯೇ ವಿನಃ ಇನ್ನೇನೂ ಪ್ರಯೋಜನವಿಲ್ಲ. ಹಾಗೆ ಕೊಡುವುದಿದ್ದರೆ ನಾನೂ ನನ್ನ ಚಾನಲ್ ನಲ್ಲಿ ಇಂತಹ ವಿಚಾರ ಹೇಳಿ viewers ಹೆಚ್ವಿಸಿಕೊಂಡು ಲಾಭ ಮಾಡಬಹುದಿತ್ತು. ಆದರೆ ಇಂತಹ ವಿಚಾರ ನೇರ ನೇರ ಮುಖತಃ ವಿಚಾರ ಮಾಡಬೇಕೇ ವಿನಃ ಹಾಗೆಲ್ಲ ಹೇಳುವ ಹಾಗಿಲ್ಲ. ನೋಡುವವರು ಅವರವರ ಕುಂಡಲಿಯನ್ನು ತಾವೇ ವಿಮರ್ಷಿಸಿಕೊಂಡು ಚಿಂತೆಗೊಳಗಾಗುವಂತೆ ಮಾಡಿಕೊಂಡ ಹಾಗಾಗುತ್ತದೆ. ತಜ್ಞ ವೈದ್ಯರೂ ಅವರ ವೈದ್ಯಕೀಯ ವಿಮರ್ಷೆ(diagnosis) ಬಗ್ಗೆ ಹೀಗೇ ಸಲಹೆ ಕೊಡುತ್ತಾರೆ.
ಪ್ರತಿನಿತ್ಯ ಊಟದಲ್ಲಿ ಒಂದು ತುಳಸಿ ದಳವನ್ನು ಅನ್ನದೊಳಗಿಟ್ಟು ನುಂಗಬೇಕು. ಮಧ್ಯಾಹ್ನ ಅಥವಾ ಬೆಳಿಗ್ಗೆ, ರಾತ್ರಿ ಸೇವನೆ ಬೇಡ. ಹಲ್ಲಿಗೆ ತಾಗಿಸಬಾರದು. ತುಳಸಿ ಹಲ್ಲಿಗೆ ಮಾರಕವಾಗುತ್ತದೆ…
ಇಷ್ಟೇ ಅಲ್ಲ, ಜಾತಕನಿಗೆ ರೋಗೋತ್ಪತ್ತಿ ಆಗುವ ವಿಚಾರವನ್ನು ತೃತೀಯ ಮತ್ತು ದ್ವಿತೀಯದಿಂದ ತಿಳಿಯಬೇಕು. ಯಾವ ರೀತಿಯ ಆಹಾರ ಇಷ್ಟ ಪಡುತ್ತಾನೆ,(ದ್ವಿತೀಯವು ಆಹಾರ ಸೇವನೆ); ಎಲ್ಲೆಲ್ಲಿ ಹೇಗೆ ಹೇಗೆ ತಿನ್ನುತ್ತಾನೆ(ತೃತೀಯವು ಅನ್ನದ ಪಾತ್ರೆ)ಎಂಬ ಚಿಂತನೆಯೂ ಬೇಕು. ಅಲ್ಲದೆ ಗುರುವು (ಜ್ಞಾನ, ವಿವೇಚನೆ,) ಹೇಗಿದ್ದಾನೆ, ಆಯು ಕಾರಕ ಶನಿಯ ಸ್ಥಿತಿ ಹೇಗಿದೆ ಎಂಬುದು ಜ್ವರದ ನಿರ್ಣಯಕ್ಕೆ ಬಹಳ ಮುಖ್ಯ.
ಇದೆಲ್ಲ ವಿಚಾರ ಪೂರ್ಣ ತಿಳಿಯಲು ಅಸಾಧ್ಯ ಅಥವಾ ಹೇಳುವ ತಿಳುವಳಿಕೆಯುಳ್ಳವರೂ ವಿರಳ ಅಥವಾ ಕೇಳಿಸಿಕೊಳ್ಳುವ ಯೋಗ ಭಾಗ್ಯವೂ ಬೇಕು. ಅದಕ್ಕಾಗಿ ನಮ್ಮ ಹಿರಿಯರು ಊಟಕ್ಕೊಂದು ನಿಯಮ, ದೇವತಾ ಉಪಾಸನೆಗಳನ್ನು ಹೇಳಿದ್ದಾರೆ. ಅದನ್ನು ಕನಿಷ್ಟವಾಗಿಯಾದರೂ ಪಾಲಿಸಿಕೊಂಡು ಬರಬೇಕು.
ಅನಿಯಮಿತ ಆಹಾರ ಸೇವನೆ, ಅಪಥ್ಯ ಆಹಾರ ಸೇವನೆ, ಉದ್ದೀಪನಗೊಳ್ಳುವ(ಅಮಲು ಪದಾರ್ಥ) ಆಹಾರ ಸೇವನೆ, ರಸ್ತೆ ಬದಿಯ ಆಹಾರ ಇತ್ಯಾದಿ ವರ್ಜ್ಯ ಮಾಡಬೇಕು. ಮನೆಯಲ್ಲಿ ಅಡುಗೆ ಮಾಡಿದ ಆಹಾರವನ್ನೇ ಬುತ್ತಿಯಾಗಿ ಕೊಂಡೊಯ್ಯಬೇಕು. ದೇವರಿಗೆ ಸಮರ್ಪಣೆಯಾಗದ ಆಹಾರವು ದೇವಾನ ಆಹಾರ ಆಗುವುದಿಲ್ಲ. ಅದು ಪ್ರೇತಾನ್ನ ಆಗುತ್ತದೆ. ರಸ್ತೆ ಬದಿಯ ಆಹಾರ ಪ್ರೇತಾನ್ನವೇ. ದೇವಾನ್ನ ಆಗಬೇಕಾದರೆ ತುಳಸಿಧಳ ಹಾಕಿ ಸಮರ್ಪಣೆ ಆಗಿರಬೇಕು. ಅದೂ ಇಲ್ಲದಿದ್ದರೆ ಅಂತಹ ಅನಿವಾರ್ಯದಲ್ಲಿ ಮೊದಲ ತುತ್ತಿನ ಆಹಾರ ಸೇವಿಸುವಾಗ ಮನದಲ್ಲಿ ಕೃಷ್ಣಾರ್ಪಣಮಸ್ತು ಎಂದಾದರೂ ಹೇಳಿದರೆ ಆ ಭೋಜನವು ದೇವಾನ್ನ ಆಗುತ್ತದೆ. ಸಾಧ್ಯವಿದ್ದಷ್ಟು ಮಾಂಸಾಹಾರ ವರ್ಜ್ಯ ಮಾಡಲೇಬೇಕು. ಮಾಂಸಾಹಾರ ದೇವಾನ್ನ ಆಗಲಾರದು. ಆದರೂ ಮೀನು ಮಾತ್ರ ಮಾಂಸ ಆಹಾರಕ್ಕೆ ಯೋಗ್ಯವೇ. ಅತಿಯಾಗಬಾರದು. ಕುರಿ, ಕೋಳಿ, ಹಂದಿ, ಗೋವು ಇದೆಲ್ಲವೂ ದೇಹದ ಧಾರಣಾಶಕ್ತಿಯನ್ನು ಕುಸಿಯುವಂತೆ ಮಾಡುತ್ತದೆ. ಕೋಳಿ ಮೊಟ್ಟೆಯು ಪೌಷ್ಟಿಕವೂ ಅಪಾಯಕಾರಿಯೂ ಅಲ್ಲ ಎಂದು ಕೆಲ ಪ್ರಾಜ್ಞರು ಹೇಳಿದ್ದಿದೆ.
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂದು ತಿಳಿದವರು ಹೇಳಿದ್ದು ಇದಕ್ಕೆ. ದೇವಾನ್ನ ಭೋಜನ ಮಾಡಿ, ರೋಗದಿಂದ ಮುಕ್ತರಾಗಿ ಸ್ವಚ್ಛ ಜೀವನ ನಡೆಸಿ.
Get in Touch With Us info@kalpa.news Whatsapp: 9481252093
Discussion about this post