No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Wednesday, March 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅಪ್ಪಣ್ಣಾಚಾರ್ಯರು ನುಡಿದಂತೆ ರಾಯರ ಅನುಗ್ರಹ ಕಲ್ಪನೆಗೆ ಮೀರಿದ್ದು ಎಂಬುದಕ್ಕೆ ಪವರ್’ಸ್ಟಾರ್ ಪುನೀತ್ ಸಾಕ್ಷಿ

ಯೋಗವು ಒಮ್ಮೆ ಬರುವುದು ನಮಗೆ.. ರಾಯರ ಅನುಗ್ರಹಕ್ಕೆ ಪಾತ್ರವಾದ ಡಾ.ರಾಜ್ ಕುಟುಂಬ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 13, 2020
in Special Articles
0
ಅಪ್ಪಣ್ಣಾಚಾರ್ಯರು ನುಡಿದಂತೆ ರಾಯರ ಅನುಗ್ರಹ ಕಲ್ಪನೆಗೆ ಮೀರಿದ್ದು ಎಂಬುದಕ್ಕೆ ಪವರ್’ಸ್ಟಾರ್ ಪುನೀತ್ ಸಾಕ್ಷಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಇತ್ತೀಚೆಗೆ ಮಂತ್ರಾಲಯದ ಗುರುರಾಯರ ಸನ್ನಿಧಿಯಲ್ಲಿ ಶ್ರೀ ಪುನೀತ್ ರಾಜಕುಮಾರ್ ಸರ್. ಈ ಸಂದರ್ಭದಲ್ಲಿ ಡಾ. ರಾಜ್ ಕುಮಾರ್ ಅವರ ಮಂತ್ರಾಲಯದ ಗುರುರಾಯರ ನಂಟು – ಅನುಗ್ರಹವನ್ನು ಸ್ಮರಿಸಿದ ಪುನೀತ್ ಅವರು, ರಾಯರ ಸನ್ನಿಧಿಯಲ್ಲಿ ವಾರ ಬಂತಮ್ಮಾ ಗುರುವಾರ ಬಂತಮ್ಮ ಭಕ್ತಿಗೀತೆಯನ್ನೂ ಸ್ಮರಿಸಿ ಹಾಡಿದರು.

ಪುನೀತ್ ಅವರನ್ನೂ ಒಳಗೊಂಡಂತೆ ಅವರ ಇಡೀ ಕುಟುಂಬದವರ ರಾಯರ ಸೇವೆ, ಸ್ಮರಣೆ ಅನನ್ಯ.

ರಾಯರ ಅನುಗ್ರಹ ಎಂಥದು ಎಂಬುದನ್ನು ಶ್ರೀಪೂರ್ಣಬೋಧ….. ಸ್ತೋತ್ರದಲ್ಲಿ ಅಪ್ಪಣ್ಣಾಚಾರ್ಯರು ತಿಳಿಸಿಕೊಡುತ್ತಾರೆ.

ಸರ್ವಾಭೀಷ್ಟಾರ್ಥ ಪ್ರವೃದ್ಧಿ: (ಎಲ್ಲಾ ಇಷ್ಟಾರ್ಥಗಳ ಪ್ರಾಪ್ತಿ) ಎಂದು ತಿಳಿಸಿಕೊಡುವ ಅಪ್ಪಣ್ಣಾಚಾರ್ಯರು, ಜೊತೆಗೆ ಸ್ಯಾನ್ನಾತ್ರಕಾರ್ಯಾ ವಿಚಾರಣಾ ಎಂದೂ ಸೇರಿಸುತ್ತಾರೆ. ಅಂದರೆ, ಅದರ ಬಗ್ಗೆ ಮರುಚಿಂತಿಸಬೇಕಾದ ಅಗತ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿ ವಾಕ್ಯವನ್ನು ಪೂರ್ಣಪಡಿಸುತ್ತಾರೆ.

ಹಾಗೆಂದರೇನು?
ಯಾವುದೇ ಗಮ್ಯಸಿದ್ಧಿಗೆ ಧಾರ್ಮಿಕ ಪ್ರಯತ್ನಗಳ ಜೊತೆಗೆ ನಮ್ಮ ಕರ್ಮಭಾಗದ ಪ್ರಯತ್ನಗಳೂ ಇದ್ದೇ ಇರಬೇಕಲ್ಲವೇ?
ಆ ಕರ್ಮಭಾಗದ ಪ್ರಯತ್ನಗಳನ್ನು ರಾಯರು ಯಾವ ರೀತಿ ಮಾಡಿಸುವ ಮೂಲಕ ಗಮ್ಯಸಿದ್ಧಿಯನ್ನು ಅನುಗ್ರಹಿಸುತ್ತಾರೆ??
ಅದನ್ನಿಲ್ಲಿ ಗಮನಿಸೋಣ..

ರಾಯರನ್ನು ತಮ್ಮದೇ ಆದ ರೀತಿಯಲ್ಲಿ ಸೇವಿಸುವವರೆಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಒಳಿತಾಗುವುದು ಬಹಳಷ್ಟು ಜನರಿಗೆ ಅನುಭವಕ್ಕೆ ಬಂದಿರುತ್ತದೆ. ಅಂತಹ ಲಕ್ಷಾಂತರ ಭಕ್ತರು ರಾಯರಿಗಿದ್ದಾರೆ.

ಆದರೆ, ರಾಯರು ತೋರುವ ಮಾರ್ಗದರ್ಶನವನ್ನು ಪೂರ್ಣ ನಂಬಿಕೆಯಿಟ್ಟು, ರಾಯರೇ ಅನನ್ಯವಾಗಿ ಸ್ಮರಿಸುವ ಭಕ್ತಿ, ಅನನ್ಯವಾಗಿ ಸೇವೆ ಮಾಡುವ ಶಕ್ತಿ ಕೊಟ್ಟು ಮನೋಭೀಷ್ಟಾದಿಗಳನ್ನು ಅನುಗ್ರಹಿಸಿಕೊಡಲು ಮುನ್ನಡೆಸುವವರ ವಿಚಾರ ಅದಕ್ಕಿಂತಲೂ ಭಿನ್ನ, ಅಪರೂಪ. ಅಂತಹ ಅಪರೂಪದ ವಿಚಾರಗಳು ರಾಯರ ಅನುಗ್ರಹದಿಂದಷ್ಟೇ ಸಾಧ್ಯ.

ಇಂತಹ ಪ್ರಕರಣಗಳಲ್ಲಿ ಭಕುತರು ತಾವು ಸೇವೆ ಮಾಡುತ್ತಿದ್ದೇವೆ ಎಂಬುದಕ್ಕಿಂತಾ ಅನೇಕಾನೇಕ ಅಡೆತಡೆಗಳ ನಡುವೆಯೂ ರಾಯರು ಫಲ ಕೊಡಲೇಬೇಕೆಂದು ಸಂಕಲ್ಪಿಸಿ ಅನನ್ಯವಾಗಿ ಸೇವೆ ಮಾಡಿಸುತ್ತಿರುವುದರಿಂದಲೇ ಸೇವೆಯನ್ನು ಮಾಡಲು ಸಾಧ್ಯವಾಗುತ್ತಿದೆ ಎಂಬುದು ಇಲ್ಲಿ ಹೆಚ್ಚು ಪ್ರಸಕ್ತ ಹಾಗೂ ಸೂಕ್ತ.

ಅಪ್ಪಣ್ಣಾಚಾರ್ಯರು ಸರ್ವಾಭೀಷ್ಟಗಳನ್ನೂ ರಾಯರು ನಿಸ್ಸಂಶಯವಾಗಿ ಅನುಗ್ರಹಿಸುವರೆಂದು ತಿಳಿಸಿಕೊಟ್ಟಿರುವುದು ಇಂತಹ ಅನನ್ಯ ವಿಚಾರಗಳನ್ನುದ್ದೇಶಿಸಿಯೇ.

ಭಕುತರ ಮನೋಭೀಷ್ಟಗಳ ಗುರಿ – ಗಮ್ಯಗಳನ್ನು ಅವಶ್ಯ ತಲುಪಿಸುವುದರೊಂದಿಗೆ, ಭಕುತರೇ ಸ್ವತಃ ಊಹಿಸಿರಲಾರದ ಎತ್ತರಕ್ಕೆ ಹಂತ ಹಂತವಾಗಿ ಏರಿಸುತ್ತಾರೆ.

ಹಾಗೆ ರಾಯರು ಮುನ್ನಡೆಸುವಾಗ ಭಕುತರಲ್ಲಿ ಸಹಜವಾಗಿ ಮನೆಮಾಡಿರುವ, ಸುಲಭಕ್ಕೆ ಗುರುತಿಸಿಬಿಡಬಹುದಾದ ಗುಣಗಳ್ಯಾವುವು?
ಬೆಳ್ಳಿತೆರೆಯ ಮೇಲಿನ ಪಾತ್ರವೃತ್ತಿಯ ಹೊರತಾಗಿಯೂ ಡಾ. ರಾಜ್ ಅವರಲ್ಲಾಗಲಿ ಅಥವಾ ಪುನೀತ್ ಅವರಲ್ಲಾಗಲಿ ನಾವು ಕಾಣುವುದು ಅಂಥದ್ದೇ ಗುಣಗಳು.

  • ಎಷ್ಟೇ ಎತ್ತರಕ್ಕೇರುತ್ತಾ ಸಾಗಿದರೂ ಬದಲಾಗದ ವ್ಯಕ್ತಿತ್ವ – ಮನಸು.
  • ಅನೇಕ ಚಿತ್ರಗಳು ಯಶಸ್ಸನ್ನು ಕಂಡದ್ದೂ ಉಂಟು, ಹಲವು ಚಿತ್ರಗಳು ಹಿನ್ನಡೆ ಕಂಡದ್ದೂ ಉಂಟು. ಚಿತ್ರಗಳು ಹಿನ್ನಡೆ ಕಂಡಾಗ ನಿಜವಾಗಿ ತೀರ್ಪು ನೀಡುವ ಪೂರ್ಣ ಸ್ವಾತಂತ್ರ್ಯವನ್ನು ಹೊಂದಿರಬೇಕಾದ ತಮ್ಮ ಏಳ್ಗೆಗೆ ಕಾರಣರಾದ ಪ್ರೇಕ್ಷಕರನ್ನೂ ಅರ್ಥಮಾಡಿಕೊಂಡು ಪ್ರೇಕ್ಷಕ ಪ್ರಭುಗಳಿಗೆ ಇನ್ನು ಯಾವ ರೀತಿ ಮನಮುಟ್ಟುವಂತೆ ತಲುಪಬೇಕು ಎಂಬ ಚಿಂತನೆಯಿಂದ ಕಾರ್ಯಪ್ರವೃತ್ತರಾದರು.
  • ತನ್ನ ಗುರಿಯ ದಾರಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಚಿಂತನೆ…
  • ತಾಳ್ಮೆ… ಆ ಕ್ಷಣಕ್ಕೆ ಯಶಸ್ಸು ಸಿಕ್ಕಿಬಿಡಬೇಕೆಂಬ ತಾರಾತುರಿಯಿರುವುದಿಲ್ಲ… Success can’t be fast tracked. It comes in its own pace, but certainly it comes.
  • ಒಂದೊಮ್ಮೆ ಏಕಪಕ್ಷೀಯವಾಗಿ ಅಭಿಪ್ರಾಯ ಬೇಧವಿರುವವರನ್ನೂ ತಾಳ್ಮೆಯಿಂದ ವಿಚಾರಗಳ ನೈಜ ಚಿತ್ರಣ ನೀಡಿ, ಸತತ ಹೋರಾಟದ ಮೂಲಕ ತಾಳ್ಮೆಯಿಂದ ಗೆಲ್ಲುವ ಮನಸ್ಥಿತಿ ಹಾಗೂ ಹೋರಾಟದ ಹಾದಿಯಲ್ಲಿ ಎಲ್ಲರ ಸವಾಲುಗಳ ಪರಿಹಾರಕ್ಕೂ ಆದ್ಯತೆ (ಗೋಕಾಕ್ ಚಳುವಳಿಯು ಅಂತಹ ಉದಾಹರಣೆಗಳಲ್ಲೊಂದು)..
  • ತಮ್ಮ ಬೆಳವಣಿಗೆಗೆ ಕಾರಣದ ಭಾಗವಾದ ಯಾರನ್ನೂ ಮರೆಯದಿರುವಿಕೆ.
  • Unconditional love towards their people – (ಅಭಿಮಾನಿ ದೇವರುಗಳು ಎಂಬುದು ರಾಜ್ ಅವರ ಕುಟುಂಬದಲ್ಲಿ ಕೇವಲ ವೇದಿಕೆಯ ಮೇಲಿನ ಹೇಳಿಕೆಯಷ್ಟೇ ಅಲ್ಲ, ಅದು ಆ ಇಡೀ ಕುಟುಂಬದ ಆಂತರಿಕ ಭಾವನೆಯೂ ಹೌದು).
  • ಅಭಿಪ್ರಾಯ ಬೇಧವಿರುವವರನ್ನೂ ಚಿಂತನೆಯಿಂದಲೂ, ಪದಗಳಲ್ಲೂ ಗೌರವದಿಂದಲೇ ಕಾಣುವ ಸಹಜಾಭಿವ್ಯಕ್ತಿ.
  • ಆಡಿಸಿಯೇ ನೋಡು, ಬೀಳಿಸಿಯೇ ನೋಡು.. ಎಂದೂ ಸೋಲದು…. ಎಂಬುದು ಚಿತ್ರಗೀತೆಯ ಸಾಲುಗಳಾದರೆ, ಅಂತೆಯೇ ಅದು ಇಡೀ ರಾಜ್ ಕುಟುಂಬದ ಎಲ್ಲರ ಅನುಭವ ಕಥನವೂ ಹೌದು.
  • Not being cinematic- ಚಲನಚಿತ್ರ ಕಲಾವಿದರ ಕಲೆ, ಮನರಂಜನೆ ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅದ್ಭುತ ವೇದಿಕೆ. ಆದರೆ ಇಡೀ ರಾಜ್ ಕುಟುಂಬದಲ್ಲಿ ಕಲೆಯನ್ನು – ಮನರಂಜನಾ ಪ್ರಪಂಚವನ್ನು ಪೋಷಿಸುವುದರ ಜೊತೆಜೊತೆಗೆ ಚಲನಚಿತ್ರದ ಶೈಲಿಯ ಭ್ರಮಾತ್ಮಕ ಅನುಕರಣೆಯನ್ನು ನೈಜ ಜೀವನದಲ್ಲಿ ಮಾಡದಿರುವ ಪ್ರಬುದ್ಧತೆ.
  • ಚಿತ್ರರಂಗದಲ್ಲಿ ಬೇರೆಯವರೂ ಬೆಳೆದು, ನೆಲೆನಿಲ್ಲಲು ಅಗತ್ಯ ನೆರವು ನೀಡಿ ಅವಕಾಶ ಮಾಡಿಕೊಡುವುದರ ಜೊತೆಜೊತೆಗೆ ತಾವೂ ಚಿತ್ರರಂಗದಲ್ಲಿ ಬೆಳೆದು ನೆಲೆನಿಲ್ಲುವ ಸಮದರ್ಶಿತ್ವ – ಸಿಕ್ಕಂತಹ ಅವಕಾಶಗಳನ್ನು ಸೂಕ್ತವಾಗಿ ಪಡೆದು ಚಿತ್ರರಂಗದಲ್ಲಿ ನೆಲೆನಿಲ್ಲಬೇಕೆಂಬುದು ಎಲ್ಲರ ಅಪೇಕ್ಷೆ.
  • ಅವಕಾಶಗಳನ್ನರಸುವವರು ಹೆಚ್ಚಿನ ಅವಕಾಶಗಳು ಸಿಗಲೆಂದು ಅಪೇಕ್ಷಿಸುವುದು ಸಹಜ. ಆದರೆ, ತಮಗೆ ಅವಕಾಶಗಳು ಸಿಗಬೇಕೆಂಬ ಕಾರಣಕ್ಕೆ ಬೇರೊಬ್ಬರ ಬಹುನಿರೀಕ್ಷೆಯ ಅವಕಾಶಗಳಿಗೆ ಅಡ್ಡಿಯಾಗುವಂತಾಗಬಾರದು, ಅಲ್ಲವೇ?
  • ಚಿತ್ರರಂಗದ ಹಿರಿಯ ಕಲಾವಿದರನೇಕರನ್ನು ಮಾತನಾಡಿಸಿದಾಗ ಅನೇಕರು ಇಡೀ ರಾಜ್ ಕುಟುಂಬದವರು ಇಂತಹ ವಿಚಾರಗಳೆದುರಾದಾಗ ಬೇರೆಯವರಿಗೂ ಅವಕಾಶಗಳನ್ನು ಮಾಡಿಕೊಟ್ಟು ತಾವೂ ಚಿತ್ರರಂಗದಲ್ಲಿ ಬೆಳೆದು ನೆಲೆ ನಿಂತಂತಹ ಅನೇಕ ಘಟನೆಗಳನ್ನು ಸ್ವಾರಸ್ಯಪೂರ್ಣವಾಗಿ ವಿವರಿಸುತ್ತಾರೆ.

ಅದಕ್ಕೇ ಹೇಳಿದ್ದು, ಅಪ್ಪಣ್ಣಾಚಾರ್ಯರು ಸುಮ್ಮನೆ ಹೇಳಿಲ್ಲ.. ರಾಯರು ಕೊಡುವವರು. ಬೇಡಿ ಪಡೆಯುವವರನ್ನೂ ಗುಣಗ್ರಾಹಿಗಳನ್ನಾಗಿಸಿ – ವೃತ್ತಿ ಜೀವನದಲ್ಲೂ, ವೈಯಕ್ತಿಕ ಜೀವನದಲ್ಲೂ ಸುಗುಣಸಾರವನ್ನೂ ತುಂಬಿ ಗಮ್ಯವನ್ನು ಅನುಗ್ರಹಿಸುವವರಾಗಿದ್ದಾರೆ. ವೈಯಕ್ತಿಕವಾಗಿಯೂ – ವೃತ್ತಿರಂಗದಲ್ಲೂ ಪುನೀತ್ ತಮ್ಮ ಎಲ್ಲಾ ಗಮ್ಯಗಳನ್ನು ತಲುಪಲು ರಾಯರ ಅನುಗ್ರಹ ಜೊತೆಗಿದೆ.

ಲೇಖನ: ಶಶಿಧರ್ ರಾವ್

Get in Touch With Us info@kalpa.news Whatsapp: 9481252093

Tags: Dr RajkumarKannada MoviesMantralayamPower Star Puneeth RajkumarsandalwoodSri PoornabodhaSri Raghavendra Swamyಚಲನಚಿತ್ರ ಕಲಾವಿದಡಾ. ರಾಜ್ ಕುಮಾರ್ಪವರ್'ಸ್ಟಾರ್ ಪುನೀತ್ ರಾಜಕುಮಾರ್ಮಂತ್ರಾಲಯಶ್ರೀ ರಾಘವೇಂದ್ರ ಸ್ವಾಮಿಗಳುಶ್ರೀಪೂರ್ಣಬೋಧ
Share2282Tweet123Send
Previous Post

ವಿಷ್ಣುಗುಪ್ತ ವಿಶ್ವವಿದ್ಯಾಪೀಠ: ಅಧ್ಯಯನಕ್ಕೆ ಅರ್ಜಿ ಆಹ್ವಾನ

Next Post

ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವೆ: ಕೃಷಿ ಸಚಿವ ಬಿ.ಸಿ. ಪಾಟೀಲ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವೆ: ಕೃಷಿ ಸಚಿವ ಬಿ.ಸಿ. ಪಾಟೀಲ್

ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವೆ: ಕೃಷಿ ಸಚಿವ ಬಿ.ಸಿ. ಪಾಟೀಲ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

March 18, 2026
ಬಡವರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ | ಉಗ್ರಾಣಗಳಲ್ಲಿ 7 ತಿಂಗಳಾದರೂ ಔಷಧಿ ಪೂರೈಕೆಯಿಲ್ಲ: ಶಾಸಕ ಡಾ. ಧನಂಜಯ ಸರ್ಜಿ

ಬಡವರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ | ಉಗ್ರಾಣಗಳಲ್ಲಿ 7 ತಿಂಗಳಾದರೂ ಔಷಧಿ ಪೂರೈಕೆಯಿಲ್ಲ: ಶಾಸಕ ಡಾ. ಧನಂಜಯ ಸರ್ಜಿ

March 18, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಶುಭಹಾರೈಕೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಶುಭಹಾರೈಕೆ

March 18, 2026
ಸಂತುಷ್ಟರಾಗಿ ವರಗಳನ್ನು ನೀಡುವ ಶ್ರೀ ಸತ್ಯ ಸಂತುಷ್ಟ ತೀರ್ಥರು

ಸಂತುಷ್ಟರಾಗಿ ವರಗಳನ್ನು ನೀಡುವ ಶ್ರೀ ಸತ್ಯ ಸಂತುಷ್ಟ ತೀರ್ಥರು

March 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL