ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಾರ್ಚ್ 28ರಂದು ನಿಗದಿಯಾಗಿದ್ದ ಕುವೆಂಪು ವಿವಿ 30ನೆಯ ವಾರ್ಷಿಕ ಘಟಿಕೋತ್ಸವವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದೆ.
ಈ ಕುರಿತಂತೆ ಮಾತನಾಡಿರುವ ಕುಲಸಚಿವ ಪ್ರೊ.ಎಸ್.ಎಸ್. ಪಾಟೀಲ್, ಘಟಿಕೋತ್ಸವವನ್ನು ಮಾರ್ಚ್ 28 ರಂದು ನಿಗಧಿಪಡಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ದೇಶದಲ್ಲಿ ಕೊರೋನಾ ಮಾರಾಣಾಂತಿಕ ವೈರಾಣು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಸಭೆ, ಸಮಾರಂಭ ಇತ್ಯಾದಿಗಳನ್ನು ಮುಂದೂಡಲು ನವದೆಹಲಿಯ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕಾರ್ಯದರ್ಶಿಗಳು ಸೂಚಿಸಿರುವುದರಿಂದ ಘಟಿಕೋತ್ಸವವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
Get in Touch With Us info@kalpa.news Whatsapp: 9481252093

















