ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಬ್ಬ ರಾಷ್ಟ್ರನಾಯಕ ಹೇಗೆ ಮಾತಾಡಬೇಕೋ ಹಾಗೆ ಮಾತಾಡಿದ್ದಾರೆ ಪ್ರಧಾನಿ. ಒಬ್ಬ ತಂದೆ ತನ್ನ ಮಕ್ಕಳಿಗೆ ಹೇಳುವಂತೆ, ಪ್ರಾಯಕ್ಕೆ ಬಂದ ಮಗಳಿಗೆ ತಾಯಿ ತಿಳಿಹೇಳುವಂತೆ, ಮದುವೆಯಾಗಿ ಮಾವನ ಮನೆಗೆ ಹೊರಟ ಮದುಮಗಳು ಸೊಸೆಗೆ ಸೋದರಮಾವ ಸಂತೈಸುವಂತೆ, ಅಜ್ಜಿಯೊಂದು ಮನೆಮಂದಿಯನ್ನೆಲ್ಲ ಕೂರಿಸಿಕೊಂಡು ಬುದ್ಧಿಮಾತು ಹೇಳುವಂತೆ…
ಎಷ್ಟು ಕೋಟಿ ಸಹಾಯಧನ ಬಿಡುಗಡೆ ಮಾಡ್ತಾರೆ ಹೇಳ್ಬೇಕಿತ್ತು… ಎಷ್ಟು ಆಸ್ಪತ್ರೆ ಓಪನ್ನಿಡ್ತಾರೆ ಹೇಳ್ಬೇಕಿತ್ತು, ಯಾವಾಗ ವ್ಯಾಕ್ಸೀನು ಹಾಕಿಸ್ತಾರೆ ಹೇಳ್ಬೇಕಿತ್ತು… ಎಂದೆಲ್ಲ ಹೇಳಬೇಕಾದ್ದರ ಪಟ್ಟಿಗಳನ್ನು ಎಡಬಿಡಂಗಿಗಳು ತಂತಮ್ಮ ಜಾಲಕಟ್ಟೆಗಳಲ್ಲಿ ಪೋಸ್ಟಿಸಿಕೊಂಡು ಪ್ರಧಾನಿಗೆ ತುಳುಕ್ ಬುಳುಕ್ ವ್ಯಾಕ್ ಥೂ ಎಂದು ಉಗುಳುತ್ತಿರುವುದನ್ನು ನೋಡಿದರೆ ಈ ದುರಂತ ಸಮಯದಲ್ಲೂ ನಗೆ ಬರುತ್ತದೆ. ಪ್ರಧಾನಿ ಆ ಎಲ್ಲ ವಿಷಯಗಳ ಪ್ರಸ್ತಾಪ ಮಾಡಿಲ್ಲ ಎಂದ ಮಾತ್ರಕ್ಕೆ ಅವೆಲ್ಲ ಅವರಿಗೆ ಆದ್ಯತೆಯ ವಿಷಯಗಳಲ್ಲ ಎಂದು ಇವರಿಗೆ ಕಿವಿ ಕಚ್ಚಿ ಹೇಳಿದವರು ಯಾರು? ಪ್ರಧಾನಿ ತಾನು ಅಥವಾ ತನ್ನ ಸರಕಾರ ಮಾಡುತ್ತಿರುವ ಕೆಲಸಗಳನ್ನೆಲ್ಲ ಭಾಷಣದಲ್ಲಿ ಹೇಳಲೇಬೇಕಾ? ಯಾವ ವಿಷಯ ಹೇಳಬೇಕು, ಯಾವುದನ್ನು ಹೇಳದೆ ಮಾಡಿ ತೋರಿಸಬೇಕು ಎಂಬುದು ಸರಕಾರಕ್ಕೆ ಗೊತ್ತಿದೆ.
ಭಾರತ ಸರಕಾರ ಈ ಮಹಾಮಾರಿ ಸಾಂಕ್ರಾಮಿಕ ಕಾಯಿಲೆಯನ್ನು ಹದ್ದುಬಸ್ತಿನಲ್ಲಿ ಇಡಲು ಏನೆಲ್ಲ ಮಾಡುತ್ತಿದೆ ಎಂಬುದು ಗೊತ್ತಾಗಬೇಕಾದರೆ ವಿಶ್ವದ ನಾಯಕರು ಭಾರತದ ಬಗ್ಗೆ ಏನು ಹೇಳುತ್ತಿದ್ದಾರೆ ನೋಡಬೇಕು. ಈ ಕ್ಷಣದಲ್ಲಿ ಭಾರತ ನಮ್ಮ ನಾಯಕ; ಅದು ಹೇಳಿದಂತೆ ನಾವು ನಡೆಯುತ್ತೇವೆ ಎಂದು ಮುಕ್ಕಾಲು ಭಾಗ ಜಗತ್ತು ನಮ್ಮೊಂದಿಗೆ ನಿಂತಿದೆ ಎನ್ನುವುದೇ ಸಾಕು – ಈ ದೇಶದ, ದೇಶದ ನಾಯಕನ ತಾಕತ್ತು ಗೊತ್ತಾಗಲು. ಇನ್ನು ಇಷ್ಟೆಲ್ಲ ಕೆಲಸ ಮಾಡಿದ ವ್ಯಕ್ತಿಯನ್ನೂ ಬಯ್ಯುವವರು ಇರುತ್ತಾರಾ, ಇದ್ದರೆ ಅವರು ಹೇಗೆ ಬಟ್ಟೆ ಹರಿದುಕೊಂಡು ಬಯ್ದಾಡುತ್ತಾರೆ ಎಂಬುದನ್ನು ನೋಡಬೇಕಾದರೆ ರಾಹುಲ್ ಘಂಡಿಯ ಟ್ವೀಟುಗಳನ್ನು ನೋಡಿದರೆ ಸಾಕು! ಈಗ ಮೋದಿಯ ಮೊಸರಂಥ ಭಾಷಣದಲ್ಲಿ ಕಲ್ಲುಗುಂಡುಗಳನ್ನು ಹುಡುಕುತ್ತಿರುವ ಬೃಹಸ್ಪತಿಗಳೆಲ್ಲ ಈ ಪಪ್ಪು ಸಂತಾನದ ಗೌರಿಬೀಜಗಳೇ ಬಿಡಿ!
ನೀವು ಆತನನ್ನು ಪ್ರೀತಿಸಿ, ಇಲ್ಲವೇ ದ್ವೇಷಿಸಿ. ಆದರೆ ಖಂಡಿತ ಉಪೇಕ್ಷಿಸಲಾರಿರಿ. ಆ ವ್ಯಕ್ತಿಗೆ ಯಾವ ವೇದಿಕೆಯಲ್ಲಿ ಹೇಗೆ ಮಾತಾಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ತಾನು ಯಾರನ್ನು ಉದ್ದೇಶಿಸಿ ಮಾತಾಡುತ್ತಿದ್ದೇನೆ, ಅವರಿಗೆ ಯಾವ ವಿಷಯವನ್ನು ಹೇಗೆ ಯಾವ ಹದದಲ್ಲಿ ಹೇಳಬೇಕು ಎಂಬುದು ಆತನಿಗೆ ಗೊತ್ತಿದೆ. ಸದ್ಯಕ್ಕೆ ಬೇಕಿರುವುದು ಗೊಂದಲಗಳಿಗೆ ಕಡಿವಾಣ. ಸುರಕ್ಷತೆಯ ಎಚ್ಚರ. ರೋಗಕ್ಕೆ ಪರಿಣಾಮಕಾರಿಯಾಗಿ ಬೇಲಿ ಹಾಕಿಡುವ ಕಲೆ.
ಹಾಗೆಯೇ ಮನುಷ್ಯ ಸಂಬಂಧಗಳ, ಬಾಂಧವ್ಯಗಳ ವೃದ್ಧಿ. ಗಾಯಕ್ಕೆ ಬರೆ ಹಾಕದೆ ಮದ್ದು ಹಚ್ಚುವ ಪ್ರೀತಿ. ಎಲ್ಲಕ್ಕಿಂತ ಮುಖ್ಯವಾಗಿ ತುರ್ತಾಗಿ ಬೇಕಿರುವುದು – ಜೀವನ ಪ್ರೀತಿ. ಜೊತೆ ಜೊತೆಗೇ ಸಾಮಾಜಿಕ ಜವಾಬ್ದಾರಿ. ನಾಗರಿಕ ಪ್ರಜ್ಞೆ. ಇವಿಷ್ಟು ಆದರೆ ದೇಶ ತಾನೇ ತಾನಾಗಿ ಹಳಿಗೆ ಬರುತ್ತದೆ ಎಂಬ ಆತ್ಮವಿಶ್ವಾಸವನ್ನು ರಾಷ್ಟ್ರನಾಯಕ ಮೊದಲು ತನ್ನಲ್ಲಿ ತುಂಬಿಕೊಂಡು, ನಂತರ ಅದನ್ನೇ ತನ್ನ ದೇಶವಾಸಿಗಳ ಎದೆಯೊಳಗೂ ಹಬ್ಬಬೇಕಾಗುತ್ತದೆ. ಪ್ರಧಾನಿ ಮಾಡಿದ್ದು ಅದನ್ನೇ.
ಕೆಂಡದ ದಾರಿಯಲ್ಲಿ ತಟವಟ ಕುಣಿಯದೆ ಸಂಯಮದಿಂದ ನಡೆಯುವುದೂ ಒಂದು ಕಲೆ. ಗುರಿ ಸ್ಪಷ್ಟವಿದ್ದಾಗ ಮಾತ್ರ ಕಾಲ ಕೆಳಗಿನ ಆ ಉರಿಯನ್ನೂ ತಾಳುವ ಸಂಯಮ ಬಂದೀತು. ಉರಿಯನ್ನು ಮೆಟ್ಟಿ ನಿಂತು ಸಾಧಕನಾಗುವುದೋ, ಸಾಧಕನನ್ನು ನೋಡುತ್ತ ಉರಿದು ಬೂದಿಯಾಗುವುದೋ – ಯಾವುದು ನಿಮ್ಮ ಆಯ್ಕೆ?
Get in Touch With Us info@kalpa.news Whatsapp: 9481252093
Discussion about this post