ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬರಬೇಕಾದ ಸೌಲಭ್ಯ ಸಿಗದಿದ್ದಾಗ ಆ ಸಮುದಾಯಕ್ಕೆ ಅನ್ಯಾಯ, ಈ ಸಮುದಾಯಕ್ಕೆ ಅನ್ಯಾಯ ಎಂದು ಗುಂಪುಗೂಡಿ ಮೆರವಣಿಗೆ, ಸತ್ಯಾಗ್ರಹ ಇತ್ಯಾದಿ ಪ್ರತಿಭಟನೆ ಮಾಡುತ್ತಾರೆ. ಇದು ತಪ್ಪು ಎಂದು ಹೇಳುತ್ತಿಲ್ಲ. ಮಾಡಲೇಬೇಕು. ಆದರೆ ಕೇವಲ ಸೌಲಭ್ಯ ಲಾಭಕ್ಕೇ ನಮ್ಮ ಒಗ್ಗಟ್ಟು ಸೀಮಿತವಾಗಬಾರದು ಅಲ್ವೇ?
ಇಡೀ ಭಾರತೀಯ ಸಮುದಾಯಕ್ಕೇ ಈ ಘೋರ ವ್ಯಾಧಿಯು ಮಾರಕವಾಗಿದೆ. ವ್ಯಾಧಿಯು ತನ್ನ ಅನುದಾನಕ್ಕೆ ಯಾವ ಸಮುದಾಯದ ಪರವೂ ನೋಡುವುದಿಲ್ಲ. ಅದು ಕೇವಲ ಸಂಪರ್ಕ ಸ್ಪರ್ಷವನ್ನು ಮಾತ್ರ ನೋಡುತ್ತದೆ. ಇಂತಹ ಘೋರ ವ್ಯಾಧಿಯನ್ನು ತಡೆಯಲು ಕೇವಲ ನಮ್ಮನ್ನು ನಾವೇ ಗೃಹಬಂಧನದಲ್ಲಿಟ್ಟು ಹೊರ ಸಂಪರ್ಕವಾಗದಂತೆ ನೋಡುಕೊಳ್ಳುವುದು ದೇಶದ ಸ್ವಾಸ್ಥ್ಯಕ್ಕಾಗಿ ನಮ್ಮ ಮಹಾತ್ಯಾಗ ಆಗಲೇ ಬೇಕು. ಇವತ್ತು ಅವರ ಹಬ್ಬ, ಇವರ ಹಬ್ಬ ಎಂದು ಆಚರಣೆಗೆ ಹೊರಟರೆ ನಾಳೆ ಮಹಾಮಾರಿಹಬ್ಬವೇ ಆದೀತು.
ಇದಕ್ಕಾಗಿ ನಮ್ಮ ಪ್ರಧಾನಮಂತ್ರಿಗಳು ಒಂದು ನಿರ್ಧಾರಕ್ಕೆ ಬರಬೇಕಾಯಿತು. ಇಡೀ ಭಾರತವನ್ನೇ ಬಂಧಿಸಿ ಇಡುವ ಒಂದು ಕಾರ್ಯ. lock down India. ಆದರೆ ಇದು ಅನುಷ್ಠಾನಕ್ಕೆ ಬರಬೇಕಾದರೆ ಪ್ರಜಾ ಸಹಾಯ ಬೇಕೇ ಬೇಕು. ಈ 21 ದಿನದ lock down India ಕಾರ್ಯಕ್ಕೆ ನಾವು ಸಜ್ಜಾಗಬೇಕಿದೆ. ಆದರೆ ಇದರ ಉದ್ದೇಶವನ್ನು ಕೆಲವರು ತಪ್ಪು ಸಂದೇಶ ನೀಡಿಯೋ, ಕೆಲವರು ತಾವು ಮಹಾಬುದ್ಧಿವಂತರೆಂದೋ, ಕೆಲವರು ನಮ್ಮ ಧರ್ಮಕ್ಕೆ ವಿರೋಧ ಎಂದೋ ತಪ್ಪು ಮಾಹಿತಿ ನೀಡಿ ವಿಫಲಗೊಳಿಸಬಹುದು. ಎಲ್ಲಾದರೂ ವಿಫಲವಾದರೆ ಬಹುದೊಡ್ಡ ಬೆಲೆ ಕೊಡಬೇಕಾದೀತು. ನಮ್ಮ ಮುಂದಿನ ಪೀಳಿಗೆಯಿಂದ ಪೀಳಿಗೆಗೆ ಮಾರಕ ಪ್ರಸಾದವನ್ನೇ ಕೊಡಬೇಕಾದೀತು. ಶಾಶ್ವತವಾಗಿ ನಮ್ಮ ದೇಶವು ರೋಗಗ್ರಸ್ತ ದೇಶ ಎಂದು ಕರೆಸಿಕೊಳ್ಳಬೇಕಾದೀತು. ಹಾಗೇನಾದರೂ ಆದರೆ ನಮ್ಮ ಹುಟ್ಟು ಕೇವಲ ಕೀಟಗಳ ಹುಟ್ಟು ಸಾವಿನಂತಾದೀತೇ ವಿನಃ ಯಾವ ಪ್ರಯೋಜನವೂ ಇಲ್ಲದಂತಾದೀತು.
ಕೆಲವರು ಮೊಂಡು ವಾದ ಮಾಡಿ ಹೊರಗೆ ಹೋದಾರು. ಪೋಲೀಸರು ಎಷ್ಟು ಕೆಲಸ ಮಾಡಿಯಾರು? ಅವರಿಗೂ ಮನೆ ಮಠಗಳಿಲ್ಲವೇ? ಅವರು ರೋಗ ಪೀಡಿತರಾದರೆ ಅವರನ್ನು ಸಲಹುವವರಾರು? ಇಂತಹ ವಿಚಾರಧಾರೆಯನ್ನು ವಿದ್ಯಾವಂತರಾದ ನಾವು ತಿಳಿಯದವರಿಗೆ ಹೇಳಬೇಕು. ಈ ಶಕ್ತಿ ಇರುವುದು ಆಯಾಯ ಸಮುದಾಯಗಳ ಮುಖ್ಯಸ್ತರಿಗೆ ಮಾತ್ರ. ಮಠಾಧಿಪತಿಗಳು, ಸಂಘ ಸಂಸ್ಥೆಗಳು, ಸಮದಾಯಗಳ ಮುಖ್ಯಸ್ತರು ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣ, ಸಂದೇಶವಾಹಗಳ ಮೂಲಕ, ಕರೆ ಮಾಡುವುದರ ಮೂಲಕ ಮಾಡಬೇಕು. ಮೋದಿಗೆ ಹೆಸರು ಬರುತ್ತೆ, ಬಿಜೆಪಿಗೆ ಹೆಸರು ಬರುತ್ತೆ ಎಂಬ ಮತ್ಸರದಿಂದ ಮಾಡಬಾರದ್ದನ್ನು ಮಾಡಲು ಹೋಗಬಾರದು. ಈ ದೇಶದ ಎಲ್ಲಾ ನಾಗರಿಕರೂ ಭಾರತೀಯರೇ. ಹಾಗಾಗಿ ನಿಮ್ಮ ನಿಮ್ಮ ವ್ಯಾಟ್ಸಪ್, ಫೇಸ್ ಬುಕ್, ಇನ್ ಸ್ಟಾಗ್ರಾಂ ಇತ್ಯಾದಿ ಮಾಧ್ಯಮಗಳ ಮೂಲಕ ಜಾಗೃತಿ ಕಾರ್ಯವನ್ನು ಮಾಡಿಸಿ, ಈ ದೇಶದ ಉಳಿವಿಗೆ ನಮ್ಮ ಸೇವೆಯನ್ನು ಮಾಡೋಣ.
ಮಾತ್ರವಲ್ಲ, ಪೌರ ಕಾರ್ಮಿಕರಿಗೆ ಬೇಕಾಗಿ, ಪೋಲೀಸರಿಗೆ ಬೇಕಾಗಿ, ವೈದ್ಯರುಗಳಿಗೆ ಬೇಕಾಗಿ, ಅವರ ಆರೋಗ್ಯ ಆಯುಷ್ಯ ವೃದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸೋಣ.
ಸರ್ವೇ ಜನಾಃ ಸುಖಿನೋ ಭವಂತು, ಲೋಕಾ ಸಮಸ್ತಾ ಸುಖಿನೋ ಭವಂತು
ಜೈ ಹಿಂದ್
Get in Touch With Us info@kalpa.news Whatsapp: 9481252093
Discussion about this post