ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ 873 ತಲುಪಿದ್ದು, ಸಾವಿರದ ಗಡಿಯತ್ತ ಹೋಗುತ್ತಿರುವಂತೆಯೇ ವಿಶ್ವ ಆರೋಗ್ಯ ಸಂಸ್ಥೆ ಭಾರತ ಕೋವಿಡ್19 ಮೂರನೆಯ ಹಂತಕ್ಕೆ ಹೋಗುವ ಅಪಾಯವಿದೆ ಎಂದು ಎಚ್ಚರಿಸಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ಭಾರತವನ್ನು ಎಚ್ಚರಿಸಿದ್ದು, ದೇಶದ ಮೂರನೆಯ ಹಂತದತ್ತ ಸಾಗುತ್ತಿದೆ. ಒಂದು ವೇಳೆ ಭಾರತವೇನಾದರೂ ಈ ಹಂತ ತಲುಪಿದರೆ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಏರಿಕೆಯಾಗುತ್ತದೆ ಎಂದು ಎಚ್ಚರಿಸಿದೆ.
ಭಾರತದ ಜನಸಂಖ್ಯಾ ಸಾಂದ್ರತೆಗೆ ತುಲನೆ ಮಾಡಿದಾಗ ಒಂದು ವೇಳೆ ಭಾರತವೇನಾದರೂ ಮೂರನೆಯ ಹಂತಕ್ಕೆ ತಲುಪಿದರೆ ಎಪ್ರಿಲ್ 15ರ ವೇಳೆಗೆ ಭಾರತದಲ್ಲಿ 50 ಸಾವಿರ ಮಂದಿ ಬಲಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ವಿದೇಶಿ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಇನ್ನು, ದೇಶದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಇಷ್ಟು ದಿನ ಸೋಂಕಿತರ ಜನರಷ್ಟೇ ಕಂಡು ಬರುತ್ತಿದ್ದ ಕೇರಳ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಹಾಮಾರಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದು, ಕರ್ನಾಟದಲ್ಲಿ ಮತ್ತೆ 5 ಹೊಸ ಪ್ರಕರಣಗಳು ಕಂಡು ಬಂದಿದೆ. ಇದರಂತೆ ದೇಶದಲ್ಲಿ ಸೋಂಕಿತರ ಸಂಖ್ಯೆ 873ಕ್ಕೆ ಏರಿಕೆಯಾಗಿದೆ.
ಎರ್ನಾಕುಲಂ ಜಿಲ್ಲೆಯ ಚುಲಿಕ್ಕಲ್ ಪ್ರದೇಶದಲ್ಲಿ 69 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಪ್ರಸ್ತುತ ಮೃತಪಟ್ಟಿರುವ ವ್ಯಕ್ತಿ ಮಾರ್ಚ್ 16 ರಂದು ದುಬೈನಿಂದ ಕೇರಳ ರಾಜ್ಯಕ್ಕೆ ಬಂದಿದ್ದರು ಎಂದು ವರದಿಗಳು ತಿಳಿಸಿವೆ.
ಪರಿಸ್ಥಿತಿ ಇಷ್ಟು ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಜನರು ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮನೆಯಿಂದ ಹೊರಕ್ಕೆ ಬಾರದೇ ಸೋಂಕು ಹರಡುವುದನ್ನು ತಡೆಗಟ್ಟಲು ಸಹಕಾರ ನೀಡಬೇಕಿದೆ. ಇಲ್ಲದೇ ಹೋದಲ್ಲಿ, ದೇಶಕ್ಕೆ ಅಮೆರಿಕಾ, ಇಟಲಿ ಹಾಗೂ ಚೀನಾದಂತಹ ಅಪಾಯಗಳು ತಪ್ಪಿದ್ದಲ್ಲ ನೆನಪಿಡಿ…
Get in Touch With Us info@kalpa.news Whatsapp: 9481252093
Discussion about this post