ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇಟಲಿಯ ರಾಜಬೀದಿ!
ನಿರ್ಜನ! ನೀರವ!
ಅಂಗಾತ ಬಿದ್ದ ರಸ್ತೆ..
ಕೊರೋನ ನಾಲಗೆ ಚಾಚಿದಂತೆ
ಓರ್ವನೇ ಪ್ರವಾಸಿ,
ಬೀದಿಯಲ್ಲಿ ಹೆಜ್ಜೆಹಾಕುತ್ತಿದ್ದಾನೆ.
ಅದೂ ಭರವಸೆಯಿಲ್ಲ
ಯಾವ ಮಳಿಗೆ, ಕೆಫೆ ಬಾಗಿಲು
ತೆರೆದಿದೆ ಗೊತ್ತಿಲ್ಲ.
ಕೊರೋನ ಕಾಫಿನ್ನು ಮಾತ್ರ
ಭರ್ಜರಿ ಮಾರಾಟ!.
ಸಿಮೆಟ್ರಿಯ ಬೇಲಿ ಕಿತ್ತುಹಾಕಿದೆ.
ಅಪರೂಪಕ್ಕೆ ಗೇಟು ತೆರೆಯಲಾಗಿತ್ತಿತ್ತು.
ಈಗ ಗೇಟು ಕಿತ್ತು,ಬೇಲಿಯೂ ಇಲ್ಲ.!
ಆದರೂ ಪಟಪಟ ರೆಕ್ಕೆ
ಬಡಿದು ಹಾರ ಬಂದವು
ಬಿಳಿ ಬಿಳೀ ಪಾರಿವಾಳ ಗುಂಪಾಗಿ.
ಒಂಟಿ ಪ್ರವಾಸಿ ಇರುವುದೊಂದೇ ಜೀವ!
ಎಲ್ಲಿ ತರುವನು ಕಾಳು?
ಪಾರಿವಾಳಗಳ ಹಸಿದ ಹೊಟ್ಟೆಗೆ!.
ಪ್ರತೀ ನಡೆಗೂ ಅವುಗಳ ರೆಕ್ಕೆ ಬಡಿತ
ಸನಿಹದಲ್ಲೇ ಶವಗಳ ಪ್ರಭಾತಫೇರಿ!
ಜಗತ್ತು ಚಿರಂಜೀವಿತನಕ್ಕೆ
ಹೋರಾಡುತ್ತಿದೆ.
ಪ್ರವಾಸಿಗರನ್ನ ಸೆಳೆದ ಪೀಸಾ ಗೋಪುರ
ಅಂದ ಕಳೆದ ಆಕೃತಿ.
ಅನಾಥ ನಿಂತಿದೆ !.
ಕೊರೋನ ಎದುರು ಕುಸಿದಿದೆ.
ಶಾಂತಿ ದೂತ ಪಾರಿವಾಳ
ಗುಂಪುಗುಂಪಾಗಿ ಒಂಟಿ ಮನುಷ್ಯನನ್ನ
ಮುತ್ತಿಕ್ಕಿವೆ!
ಆತ ಇಡೀ ಜಗದ ದುರಂತಕ್ಕೆ
ಸಾಕ್ಷಿಯಾಗಿ ದುಃಖಿಸುತ್ತಿದ್ದಾನೆ.!
Get in Touch With Us info@kalpa.news Whatsapp: 9481252093
Discussion about this post