ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭೋಪಾಲ್: ಸಾಂಕ್ರಾಮಿಕ ರೋಗ ಮಹಾಮಾರಿ ಕೊರೋನಾ ವೈರಸ್ ತಡೆಗಟ್ಟಲು ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಸರ್ಕಾರ ಹೇಳುತ್ತಿರುವಂತೆಯೇ, ಈ ಕ್ರಮವನ್ನು ಗೇಲಿ ಮಾಡಿದ್ದ ಮಧ್ಯಪ್ರದೇಶದ ಯುವಕನೊಬ್ಬನಲ್ಲಿ ಸೋಂಕು ದೃಢಪಟ್ಟಿದೆ.
ಇಲ್ಲಿನ ಸಾಗರ್ ಎಂಬ ಊರಿನ ಸಮೀರ್ ಖಾನ್ ಎಂಬ ಯುವಕ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವನ್ನು ಟಿಕ್ ಟಾಕ್’ನಲ್ಲಿ ವೀಡಿಯೋ ಮಾಡಿ ಅಪಹಾಸ್ಯ ಮಾಡಿದ್ದ.
ಈ ಕುರಿತಂತೆ ಟಿಕ್ ಟಾಕ್ ವೀಡಿಯೋ ಮಾಡಿದಲ್ಲಿ: ನೀನು ಮಾಸ್ಕ್ ಧರಿಸುವುದಿಲ್ಲವೇ ಎಂಬ ಒಬ್ಬ ಕೇಳುತ್ತಾನೆ. ಇದಕ್ಕೆ ಪ್ರತಿಕ್ರಿಯಿಸುವ ಸಮೀರ್ ಖಾನ್ ‘ತುಂಡು ಬಟ್ಟೆಯ ಮೇಲೆ ನಿಮಗೆ ವಿಶ್ವಾಸವೇಕೆ. ಇಡುವುದಾದರೆ ಮೇಲಿರುವವನ ಮೇಲೆ ವಿಶ್ವಾಸವಿಡು’ ಎಂದು ನಕ್ಕು ಅಪಹಾಸ್ಯ ಮಾಡುತ್ತಾನೆ. ಈ ವೀಡಿಯೋ ಸಿಕ್ಕಾ ಪಟ್ಟೆ ವೈರಲ್ ಆಗಿದ್ದು, ಬಹಳಷ್ಟು ಟೀಕೆಯೂ ಸಹ ವ್ಯಕ್ತವಾಗಿತ್ತು.
ಆದರೆ, ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಆತನನ್ನು ತಪಾಸಣೆಗೆ ಒಳಪಡಿಸಿದ್ದು, ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ.
Get in Touch With Us info@kalpa.news Whatsapp: 9481252093
Discussion about this post