ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಶ್ರೀ ಧರ್ಮ ಜಾಗರಣಾ ಅರ್ಚಕರ ಸಭಾ ಮಂಡಳಿ ವತಿಯಿಂದ ಸಂಘದ ನೂರಕ್ಕೂ ಅಧಿಕ ನಗರ ಮತ್ತು ಗ್ರಾಮೀಣ ಪ್ರದೇಶದ ಅರ್ಚಕರಿಗೆ ಹಾಗೂ ಪುರೋಹಿತರಿಗೆ ಅಕ್ಕಿ, ಎಣ್ಣೆ, ಬೇಳೆ ಸೇರಿದಂತೆ ಹಲವು ದವಸ ಧಾನ್ಯಗಳನ್ನು ವಿತರಣೆ ಮಾಡಲಾಯಿತು.
ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕುಕ್ಕವಾಡೇಶ್ವರಿ ದೇವಾಲಯದಲ್ಲಿ ತಹಶೀಲ್ದಾರ್ ಸೋಮಶೇಖರ್ ಮತ್ತು ನಗರಸಭೆ ಆಯುಕ್ತ ಮನೋಹರ್ ಅವರ ಸಮ್ಮುಖದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ರಾಮಾನುಜ ಐಯ್ಯಂಗಾರ್, ಉಪಾಧ್ಯಕ್ಷ ಮುರಳೀಧರ ಶರ್ಮ, ಗೌರವಾಧ್ಯಕ್ಷ ಕೃಷ್ಣಮೂರ್ತಿ ಸೋಮಯಜಿ, ರಂಗನಾಥ ಶರ್ಮ, ಪದಾಧಿಕಾರಿಗಳಾದ ಶ್ರೀನಿವಾಸನ್, ಪ್ರಮೋದ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
(ವರದಿ: ಕೆ.ಎಸ್. ಸುಧೀಂದ್ರ, ಭದ್ರಾವತಿ)
Get in Touch With Us info@kalpa.news Whatsapp: 9481252093







Discussion about this post