ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ಲಾಕ್ ಡೌನ್’ನಿಂದಾಗಿ ಸಂಕಷ್ಟದಲ್ಲಿರುವ ನಗರದ ನೂರಾರು ಬಡವರಿಗೆ ಶಿವಮೊಗ್ಗದ ಉದ್ಯಮಿ ಸುರೇಶ್ ಬಾಳೆಗುಂಡಿ ಅವರು ರೇಷನ್ ಕಿಟ್ ವಿತರಿಸಿದ್ದಾರೆ.
ಲಾಕ್ ಡೌನ್ ಹಿನ್ನಲೆಯಲ್ಲಿ ಬಡ ಕುಟುಂಬದವರಿಗೆ ರೇಷನ್ ಕಿಟ್ ವಿತರಣೆ ಮಾಡುವಲ್ಲೂ ಪಕ್ಷ , ಜಾತಿ , ಸಮುದಾಯಗಳ ರಾಜಕೀಯ ನಡೆದಿದೆ. ಹೀಗಿರುವಾಗ ಶಿವಮೊಗ್ಗದ ಉದ್ಯಮಿ ಸುರೇಶ್ ಬಾಳೆಗುಂಡಿಯವರು ಜಾತಿ, ಧರ್ಮ ಯಾವುದಕ್ಕೂ ಮಣೆ ಹಾಕದೇ ನಗರದ ವಿವಿಧ ಬಡಾವಣೆಯ 600 ಕ್ಕೂ ಹೆಚ್ಚು ಬಡ ಕುಟುಂಬದವರನ್ನು ಗುರುತಿಸಿ ರೇಷನ್ ಕಿಟ್ ವಿತರಣೆ ಮಾಡಿದ್ದಾರೆ.
ಕಳೆದೊಂದು ವಾರದಿಂದ ನಗರದ ಬಡಾವಣೆಗಳಲ್ಲಿ ಖುದ್ದು ಸಂಚರಿಸಿ ಆಹಾರಕ್ಕಾಗಿ ಪರದಾಡುತ್ತಿರುವ ಬಡವರನ್ನು ಗುರುತಿಸಿ ಅವರಿಗೆ ಟೋಕನ್ ಹಂಚಿದ್ದಾರೆ. ಇಂದು ರಂಗನಾಥ ಬಡಾವಣೆಯ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ತಲಾ 10 ಕೆಜಿ ಅಕ್ಕಿ , ತಲಾ 1 ಕೆಜಿ ಬೇಳೆ , ಸಕ್ಕರೆ , ಅಡುಗೆ ಎಣ್ಣೆ , ಗೋಧಿ ಹಿಟ್ಟು, 1/4 ಕೆಜಿ ಖಾರದ ಪುಡಿ, ಧನಿಯಾ ಪುಡಿ, ಟೀ ಪುಡಿ ಇರುವ ಕಿಟ್ ವಿತರಣೆ ಮಾಡುವ ಮೂಲಕ ಬಡವರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಬಿಜೆಪಿ ರೈತ ಮೊರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ ಹಾಗೂ ಮಮತಾ ಸುರೇಶ ಬಾಳೇ ಗುಂಡಿ ಹಾಜರಿದ್ದರು.
Get in Touch With Us info@kalpa.news Whatsapp: 9481252093
Discussion about this post