ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಕೊರೋನಾ ವೈರಸ್ ಹಾವಳಿಯಿಂದ ಕಂಗೆಟ್ಟವರಿಗೆ ಸಹಾಯ ಮಾಡುವ ಸಲುವಾಗಿ ಮೈನಿಂಗ್ ಇಂಜಿನಿಯರ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಮತ್ತು ಹೊಸಪೇಟೆ ಚಾಪ್ಟರ್ ವತಿಯಿಂದ ಕೋವಿಡ್19 ಮುಖ್ಯಮಂತ್ರಿ ಪರಿಹಾರ ನಿಧಿಗೆ 2.50 ಲಕ್ಷ ರೂ.ಗಳ ದೇಣಿಗೆ ನೀಡಲಾಗಿದೆ.
ಚೇರ್ಮನ್ ಪ್ರಭಾಕರ್ ರೆಡ್ಡಿ ಮತ್ತು ಅಧ್ಯಕ್ಷ ಕೆ. ಮಧುಸೂದನ್ ಹಾಗೂ ಇನ್ನಿತರ ನಿರ್ದೇಶಕರು ಇಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ದೇಣಿಗೆ ಚೆಕ್ ಅನ್ನು ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಸಚಿವ ಆನಂದ್ ಸಿಂಗ್, 53 ಸದಸ್ಯರಿಂದ ಸಂಗ್ರಹಿಸಲಾದ ದೇಣಿಗೆ ಒಳ್ಳೆಯ ಕಾರ್ಯಕ್ಕೆ ಉಪಯೋಗವಾಗುತ್ತದೆ ಎಂದರು.
ಕೊರೋನಾ ವೈರಸ್ ಒಂದೆಡೆ ಜನತೆಯ ಜೀವದೊಂದಿಗೆ ಚೆಲ್ಲಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ದೇಶದ ಆರ್ಥಿಕತೆಗೂ ಹೊಡೆತ ನೀಡಿದೆ. ಈ ಸಂದರ್ಭದಲ್ಲಿ ಸರ್ಕಾರದ ಆದೇಶಗಳನ್ನು ಚಾಚು ತಪ್ಪದೆ ಪಾಲಿಸಿಕೊಂಡು ಮೈನಿಂಗ್ ವ್ಯವಹಾರ ಸಂಪೂರ್ಣವಾಗಿ ಸ್ಥಗಿತಗೂಳಿಸಿ ಈ ಮೂಲಕ ಸರ್ಕಾರದ ಜೂತೆ ಕೈ ಜೋಡಿಸುವುದು ಅಭಿನಂದನಾರ್ಹ ಎಂದರು.
ವರದಿ: ಮುರುಳೀಧರ್ ನಾಡಿಗೇರ್
Get in Touch With Us info@kalpa.news Whatsapp: 9481252093
















