ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಒಂದೆಡೆ ದೇಶದಲ್ಲಿ ಕೊರೋನಾ ವೈರಸ್ ಲಾಕ್ ಡೌನ್ ಇದ್ದರೂ ಮರಣಮೃದಂಗ ಮುಂದುವರೆದಿದ್ದರೆ ಇನ್ನೊಂದೆಡೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರ ನಡುವೆಯೇ ಮೇ 3ರ ನಂತರ ಲಾಕ್ ಡೌನ್ ತೆರವಾಗುತ್ತದೆಯೇ ಇಲ್ಲವೇ ಎಂಬ ಪ್ರಶ್ನೆಗಳು ಈಗಿನ ಚರ್ಚಿತ ವಿಚಾರವಾಗಿದೆ.
ಇದರ ಬೆನ್ನಲ್ಲೇ ಎ.27ರ ನಾಳೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ನಡೆಸಲಿದ್ದು, ಇದರಲ್ಲಿ ಏನು ಅಭಿಪ್ರಾಯ ಸಂಗ್ರಹವಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಇನ್ನು, ಕೊರೋನಾ ಹಾಟ್ ಸ್ಪಾಟ್ ಆಗಿರುವ 5 ರಾಜ್ಯಗಳು ಈಗಾಗಲೇ ಲಾಕ್ ಡೌನ್ ಮುಂದುವರೆಸುವ ಕುರಿತು ಕೇಂದ್ರದ ಬೆಂಬಲಕ್ಕೆ ನಿಂತಿದ್ದು, ಉಳಿದ ರಾಜ್ಯಗಳ ನಿರ್ಧಾರಗಳೇನು ಎಂಬುದು ಕುತೂಹಲ ಸೃಷ್ಠಿಸಿದೆ.
ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್, ಒಡಿಶಾ ರಾಜ್ಯಗಳು ಮೇ 3 ರ ನಂತರವೂ ಲಾಕ್ ಡೌನ್ ಮುಂದುವರೆಸುವ ಅಭಿಪ್ರಾಯ ಹೊಂದಿವೆ. ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ ರಾಜ್ಯಗಳು ಕೇಂದ್ರದ ನಿರ್ದೇಶನದ ಪ್ರಕಾರ ನಿರ್ಧಾರ ಕೈಗೊಳ್ಳಲಿವೆ ಎನ್ನಲಾಗಿದೆ.
ಇನ್ನು, ಮೇ 3 ರ ನಂತರ, ಶೂನ್ಯ ಕೋವಿಡ್ 19 ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳು ಸಾಮಾಜಿಕ ದೂರವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಮತ್ತು ಸೋಂಕುಗಳು ಪತ್ತೆಯಾದಾಗ ಮತ್ತು ನಿಯಂತ್ರಣ ವಲಯಗಳಲ್ಲಿ ಸಂಪರ್ಕ ಪತ್ತೆಹಚ್ಚಲು ಸಂಪೂರ್ಣ ವ್ಯವಸ್ಥಿತ ಸಿದ್ಧತೆಯೊಂದಿಗೆ ತೆರೆಯಬೇಕು ಎಂಬ ನಿರ್ಧಾರಕ್ಕೂ ಬರಲಾಗಿದೆ ಎನ್ನಲಾಗಿದೆ.
ಇದು ಒಂದು ತಿಂಗಳ ಹಿಂದೆ ಹೇರಿದ ಲಾಕ್‌ಡೌನ್ ಕೊನೆಯ ವಾರಕ್ಕೆ ದೇಶವು ಪ್ರವೇಶಿಸುತ್ತಿರುವುದರಿಂದ ಸರ್ಕಾರದ ಪ್ರತಿಕ್ರಿಯೆಯನ್ನು ರೂಪಿಸುವಲ್ಲಿ ತೊಡಗಿರುವ ನೀತಿ ನಿರೂಪಕರು ಮತ್ತು ತಜ್ಞರಲ್ಲಿ ಇದು ಒಮ್ಮತದ ಅಭಿಪ್ರಾಯವಾಗಿದೆ.
ಇನ್ನು, ಯಾವುದೇ ಪ್ರಕರಣಗಳಿಲ್ಲದ ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಿಸಬಾರದು. ಆದರೆ ಅಂತಿಮ ಮಾರ್ಗಸೂಚಿಯಲ್ಲಿ ರಾಜ್ಯಗಳಿಗೆ ಬಹಳ ಮುಖ್ಯವಾದ ಪಾತ್ರವಿದೆ. ಅದಕ್ಕಾಗಿಯೇ ಸೋಮವಾರದ ಸಭೆ ಸ್ವಲ್ಪ ಸ್ಪಷ್ಟತೆಯನ್ನು ತರುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ವಾರದ ಆರಂಭದಲ್ಲಿ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಜಿಲ್ಲಾವಾರು ಮಾಹಿತಿಯ ಪ್ರಕಾರ, ದೇಶದ 718 ಜಿಲ್ಲೆಗಳಲ್ಲಿ 429 ಸಕಾರಾತ್ಮಕ ಪ್ರಕರಣಗಳನ್ನು ವರದಿ ಮಾಡಿದ್ದು, 289 ಪ್ರಕರಣಗಳು ಸ್ಪಷ್ಟವಾಗಿವೆ.
ಇನ್ನೊಂದೆಡೆ, ಗ್ರೀಜ್ ಝೋನ್ ಪ್ರದೇಶಗಳಲ್ಲಿ ಸಹ ಲಾಕ್ ಡೌನ್ ತೆರವುಗೊಳಿಸಿದರೆ ಜನರ ಓಡಾಟ ಹೆಚ್ಚಾಗಿ, ಹೊಸದಾಗಿ ಸೋಂಕು ಹರಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹೀಗಾಗಿ, ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಲಾಕ್ ಡೌನ್ ಮುಂದುವರೆಸುವ ಸಾಧ್ಯತೆಯೂ ಸಹ ಇದೆ ಎನ್ನಲಾಗಿದೆ.
ಇದಕ್ಕೆ ಪೂರಕವಾಗಿ ಯಾವುದೇ ರೀತಿಯ ರೈಲ್ವೆ, ವಿಮಾನ ಹಾಗೂ ಬಸ್ ಟಿಕೇಟ್’ಗಳ ಮುಂಗಡ ಕಾಯ್ದಿರಿಸುವಿಕೆ ಇನ್ನೂ ಸ್ಥಗಿತಗೊಂಡಿರುವುದನ್ನು ಪರಿಗಣಿಸಬಹುದಾಗಿದೆ.
Get in Touch With Us info@kalpa.news Whatsapp: 9481252093
Discussion about this post