ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದಾವಣಗೆರೆ: ಗ್ರೀನ್ ಝೋನ್’ನಲ್ಲಿದ್ದ ಜಿಲ್ಲೆಯಲ್ಲಿ ಇಂದು ಕೊರೋನಾ ಸೋಂಕು ಎರಡನೆಯ ಪ್ರಕರಣ ಪತ್ತೆಯಾಗಿದ್ದು, ಜಾಲಿನಗರದ 69 ವರ್ಷದ ನಿವಾಸಿಗೆ ಸೋಂಕು ಇರುವುದು ದೃಢಪಟ್ಟಿದೆ.
ಈ ವೃದ್ಧ ಎ.28ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾ ಸೋಂಕು ಲಕ್ಷಣದ ಹಿನ್ನೆಲೆಯಲ್ಲಿ ಇವರ ಗಂಟಲು ದ್ರವ ಸಂಗ್ರಹಿಸಿ ಶಿವಮೊಗ್ಗದ ಲ್ಯಾಬ್’ಗೆ ಕಳುಹಿಸಲಾಗಿತ್ತು. ಇದರ ವರದಿ ಇಂದು ಲಭ್ಯವಾಗಿದ್ದು, ಇವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆತಂಕ ಕಾರ್ಮೋಡ ಆರಂಭವಾಗಿದೆ.
Get in Touch With Us info@kalpa.news Whatsapp: 9481252093

















