ಪ್ರತಿ ನಿತ್ಯ ಜೀವನದ ಜಂಜಾಟದಲ್ಲಿ ಕಚೇರಿ ಹಾಗೂ ಮನೆಯ ಓಡಾಟ. ಆ ಸಮಯದಲ್ಲಿ ರಸ್ತೆಯ ಬದಿಯಲ್ಲಿ ಸಾಗುತ್ತಾ ಜೀವನದ ಯಾನದಲ್ಲಿ ಪ್ರತಿನಿತ್ಯ ತಮ್ಮ ತಮ್ಮ ಕಾಯಕದಲ್ಲಿ ತೊಡಗಿರುವ ಕಾರ್ಮಿಕರ ಕೆಲವೇ ಕೆಲವು ಛಾಯಾಚಿತ್ರಗಳು ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದೇ ಈ ಲೇಖನಕ್ಕೆ ಮೂಲವಸ್ತುವಾಗಿದ್ದು, ಹೆಚ್ಚಿಗೆ ಏನೂ ಬರೆಯದೇ ಫೋಟೋಗಳ ಮೂಲಕವೇ ಹೇಳುವ ಪ್ರಯತ್ನವಿದು.
ಇಟ್ಟಮಡುವಿನ ಟಿಜಿ ಲೇಔಟ್ ರಸ್ತೆಯಲ್ಲಿ ಕೂಲಿ ಕಾರ್ಮಿಕರ ಸಂಸಾರ ಕಂಡು ಬಂದಿತ್ತು. ಗಾಡಿಯ ಒಳಗೆ ಪುಟ್ಟ ಮಗು ಹಾಗೂ ಅಪ್ಪನ ಭುಜದ ಮೇಲೆ ಪುಟ್ಟನ ಸವಾರಿವಿದ್ಯಾಪೀಠ ದ ಬಳಿ ಇರುವ ಶಂಕರನಾಗ್ ವೃತ್ತದ ಬಳಿ ಇರುವ ಕ್ರೀಡಾಂಗಣದಲ್ಲಿ ಹಣತೆ ಮಾರುತ್ತಾ ಕುಳಿತ ಅಜ್ಜಿಗೆ ಬಿಸಿಲಿನ ತಾಪ ಬೀಳದೆ ಇರಲಿ ಎಂದು ಛತ್ರಿ ಹಿಡಿದು ಆಸರೆಯಾಗಿ ನಿಂತ ಮೊಮ್ಮಗ!ಸ್ಯಾಂಕಿ ರಸ್ತೆಯ ಕಾವೇರಿ ಚಿತ್ರ ಮಂದಿರದ ಎದುರು ಗೋಲಿ ಸೋಡಾ ವ್ಯಾಪಾರಿಮೈಸೂರು ರಸ್ತೆಯ ಬದಿಯಲ್ಲಿ – ರಾಜರಾಜೇಶ್ವರಿ ಕಾಮಾನು ಹಾಗೂ ಗೋಪಾಲನ್ ಮಾಲ್’ನಿಂದ ಕೊಗಳತೆ ದೂರದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ಗಣಪತಿ ವಿಗ್ರಹ ತಯಾರಿಯಲ್ಲಿಬೆಂಗಳೂರು ನಗರದ ಪ್ರತಿಷ್ಠಿತ ಬಸವನಗುಡಿಯ ದೊಡ್ಡ ಬಸವನ ಜಾತ್ರೆ ಸಮಯದಲ್ಲಿ ಜಾತ್ರೆಯ ವ್ಯಾಪಾರ!ಕೆಆರ್ ಪುರಂ ನ ಪ್ರಮುಖ ರಸ್ತೆಯಲ್ಲಿ ಸೈಕಲ್ ಆಟೋ ರಿಕ್ಷಾಕೆಆರ್ ಪುರಂನ ಪ್ರಮುಖ ರಸ್ತೆಯಲ್ಲಿ ರಸ್ತೆ ಕಾಮಗಾರಿಯಲ್ಲಿ ಕಾರ್ಮಿಕರು
Discussion about this post