ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಮ್ಮನೆಂದರೆ ಆನಂದ, ಅಮ್ಮನೆಂದರೆ ಅಂಬಲ, ಅಮ್ಮನೆಂದರೆ ದಿವೌಷ್ಯಧಿ, ಅಮ್ಮನೆಂದರೆ ಅಮೃತ, ಅಮ್ಮನೆಂದರೆ ಕಡಲು, ಅಮ್ಮನೆಂದರೆ ನೆಮ್ಮದಿಯ ಅಗರ, ಅಮ್ಮ ಮಡಿಲೆಂದರೆ ಪರಮಾತ್ಮನಿಗಿಂತ ಮಿಗಿಲು, ಅಮ್ಮನೆಂದರೆ ಅಂದೊಂದು ವರ್ಣಿಸಲಾಗದ ಅನುಭೂತಿ. ಪ್ರೀತಿ, ತ್ಯಾಗ, ಕರುಣೆಯ ಪ್ರತಿರೂಪ ಅಮ್ಮನೇ ಅಲ್ವಾ. ಅವಳ ಬಗೆಗಿನ ವರ್ಣನೆಗೆ ಪದಗಳ ಪುಂಜವೇ ಸಾಲದು.
ಅಮ್ಮನನ್ನು ಹೊಗಳಿ ಹಾಡಿದ ಗೀತೆಗಳಿವೆ. ಹೇಳುವುದಕ್ಕೆ ತುಂಬಾ ಖುಷಿಯೆನಿಸುತ್ತದೆ. ಕೇಳತಾನೆ ಇರಬೇಕು ಅನ್ಸುತ್ತೆ. ಅಮ್ಮ, ಅಮ್ಮಿ, ಮಮ್ಮಿ, ಗೀತಾಮ್ಮ, ಬೇಬಿ, ಡಾರ್ಲಿಂಗ್ ಚಿನ್ನ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಂಡರು. ಮಮತೆ, ವಾತ್ಸಲ್ಯ ಒಂದೆ ರೀತಿಯದು. ವೇಷಭೂಷಣ ಬದಲಾಗದರೂ ಕರುಳ ಚಾಯೆ ಬದಲಾಗದು ಎಂದೇ ಹೇಳಬಹುದು.
ಹಳೆಕಾಲದ ಅಮ್ಮನಿಂದ ಆಧುನಿಕ ಕಾಲದ ಅಮ್ಮನವರೆಗೆ ಏನೇ ಬದಲಾದರೂ ಅಮ್ಮ ಪ್ರೀತಿ ಬದಲಾಗಿಲ್ಲ. ಎಲ್ಲಾರು ಅವಳ ಕೈತುತ್ತುನ್ನು ಉಂಡು ಬೆಳೆದವರೆ. ಯಾವ ಹೊಗಳಿಕೆಯನ್ನು ಅವಳು ಬಯಸಲಾರಳು. ಅಮ್ಮನಿಲ್ಲದ ಮನೆಯನ್ನು ಒಂದು ಕ್ಷಣ ಕೊಡ ನೆನೆಯಲು ಆಗಲಾರದು. ಹುಟ್ಟಿದ ಪ್ರತಿ ಮಗುವಿನ ಜೀವವೇ ಅಮ್ಮ ಅಲ್ವಾ. ತನ್ನಲ್ಲ ನೋವುಗಳನ್ನು ಮರೆತು ಮಕ್ಕಳ ಖುಷಿಯಲ್ಲಿ ತನ್ನ ಸಂತೋಷ ಕಾಣುತ್ತಾಳೆ. ಒಂದು ಜೀವವ ಸೃಷ್ಟಿಗೆ ತನ್ನ ಜೀವವನ್ನೆ ಪಣವಾಗಿಸುತ್ತಾಳೆ. ಹೆಣ್ಣೊಬ್ಬಳು ತಾಯಿಯಾಗುವುದರಲ್ಲಿ ವಿಶೇಷತೆ ಇಲ್ಲ. ಆದರೆ ತಂದೆಯಾಗಿ, ತಾಯಿಯಾಗಿ ಹತ್ತ ಮಕ್ಕಳ ಪಾಲಿಗೆ ಸಕಲವೂ ಆಗಿ ನಿಲ್ಲುವುದಿದೆಯಲ್ಲ ಅದು ನಿಜವಾದ ವೈಶಿಷ್ಟ್ಯ ಅಲ್ವಾ.
ಇನ್ನು ಅಮ್ಮನ ಧೈರ್ಯದ ಬಗ್ಗೆ ಹೇಳಲೇಬೇಕು. ತಾನು ಹೆಣ್ಣಾಗಿದ್ದರೂ ಕೆಲವು ಸಂದರ್ಭಗಳಲ್ಲಿ ಗಂಡಸೊಬ್ಬನ ಎದೆಯಲ್ಲಿ ನಡುಕ ಹುಟ್ಟಿಸುವಂಥ ಗಂಡಾಗಿ ಬಿಡುತ್ತಿದ್ದಳು. ಚಾಮುಂಡೇಶ್ವರಿ, ದುರ್ಗಮತೆ, ಮಾರಿಮ್ಮ ಮತ್ತು ಕಾಳಿ ಹೀಗೆ ಸಂಹಾರಕ್ಕಾಗಿಯೇ ಹುಟ್ಟಿದ ದೇವತೆಯರನ್ನು ನಾನು ಪೋಟೋದಲ್ಲಿಷ್ಟೇ ನೋಡಿದ್ದೆ ಆದರೆ ಅಂದೊಂದು ದಿನ ನನ್ನ ಅಮ್ಮನಲ್ಲಿ ಪ್ರತ್ಯಕ್ಷವಾಗಿ ನೋಟಿಯೆಬಿಟ್ಟೆ.
ಅದೆಷ್ಟೋಬಾರಿ ಅಮ್ಮನಿಗೆ ಎದುರಾಡಿದ್ದೇನೆ ನನ್ನದೇ ತಪ್ಪಿದರು ವಾದಿಸಿದ್ದೇನೆ. ಅವಳ ಅತಿಯಾದ ಸ್ವಾಭಿಮಾನ ಸಿಹಿಸಲಾಗದೆ ಆಕೆಯ ಮನಸ್ಸಿಗೆ ನೋವು ಮಾಡಿ ನಾನು ನೊಂದಿದ್ದೇನೆ. ಅಂತಹ ಸಂಧರ್ಭಗಳಲ್ಲಿ ಪ್ರತಿಬಾರಿಯೂ ಅವಳೆ ನನ್ನನ್ನು ಕ್ಷಮಿಸುತ್ತಾಳೆ. ನೀನೀಗ ನನ್ನ ಮಗಳಷ್ಟೇ ಅಲ್ಲ ಜವಬ್ದಾರಿಯುತ ತಾಯಿಯು ಎಂದೆಚ್ಚರಿಸುತ್ತಾಳೆ.
ಜಗತ್ತನ್ನು ಮರೆತು ಇರಬಹುದು ತಾಯಿಯನ್ನು ಮರೆತು ಕ್ಷಣ ಇರಲಾಗದು. ಸೃಷ್ಠಿಯ ಅದಮ್ಯ ಚೇತನಕ್ಕೆ ಈ ತಾಯಿ ಇವಳಿಗೆ ಆದಾವ ಹೋಲಿಕೆ ಸಾಟಿ ಹೇಳಿ..! ನಾನು ನಗುವಾಗ ಮರೆಯಲ್ಲೆ ನಿಂತು ಕಣ್ತುಂಬಿಕೊಳ್ಳವ ನನಗೆ ಚೂರು ನೋವಾದರೂ ಪ್ರತ್ಯೇಕ್ಷವಾಗಿ ಬಿಡುವ ನನ್ನ ದೇವತೆಯ ಋಣ ಸಂದಾಯಕ್ಕೆ ಮುಂದಿನ ಜನ್ಮದಲ್ಲಿ ಅವಳ ಪಾದುಕೆಯಾಗಿಯೇ ಹುಟ್ಟಬೇಕು.
ದೇವರು ತಾನು ಎಲ್ಲ ಕಡೆ ಇರುವುದಿಲ್ಲವೆಂದೆ ಪ್ರತೀ ಮನೆಗೂ ತಾಯಿಯನ್ನು ಸೃಷ್ಟಿಸಿದ್ದಾನೆ. ಮಾತೃದೇವೋಭವ ಎಂಬ ವಾಣಿ ಸದಾ ಎಲ್ಲ ಕಡೆ ಜನ ಜನಿತವಾಗಿದೆ. ಅವಳ ನೋಡಲು ಹೇಗೆ ಇರಲಿ ಮಾಸಿದ ಸೀರೆಯೆ ಇರಲಿ ಗುಣದಲ್ಲಿ ವಾತ್ಸಲ್ಯಮಯಿ. ನಾನು ನಿನ್ನ ಮಗಳಾಗಿ ಹುಟ್ಟಿರುವುದಕ್ಕೆ ನನಗೆ ಹೆಮ್ಮೆಯಿದೆ. ಆದು ಯಾವ ಜನ್ಮದ ಪುಣ್ಯವೋ ನಿನ್ನ ಮಡಿಲಿನಲ್ಲಿ ಮಗಳಾಗಿ ಹುಟ್ಟಿದ್ದೇನೆ. ಆ ದೇವರು ನನಗೆ ನಿನನ್ನು ಕರುಣಿಸಿದಕ್ಕೆ ಆ ದೇವರಿಗೆ ಎಷ್ಟೇ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿದರು ಸಾಲದು.
ಅಮ್ಮ ಐ ಲವ್ ಯು
Get in Touch With Us info@kalpa.news Whatsapp: 9481252093
Discussion about this post