ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಡಿತರ ವಿತರಿಸುತ್ತಿರುವ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಹಾರ ಸಚಿವ ಗೋಪಾಲಯ್ಯರವರು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಡವರಿಗೆ ನೀಡುತ್ತಿರುವ ಪಡಿತರ ವಿತರಣೆಯನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರು ಬಂದಿದೆ. ಸರ್ಕಾರ ಉಚಿತವಾಗಿ ವಿತರಿಸುತ್ತಿರುವ ಅಕ್ಕಿವನ್ನು ಕೆಜಿಗೆ 12 ರಿಂದ 15 ರೂಗಳಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಕೋಟ್ಯಂತರ ರೂ. ವ್ಯಯ ಮಾಡಿ ಸರ್ಕಾರ ಬಡವರಿಗೆ ಪಡಿತರ ಒದಗಿಸುತ್ತಿದೆ. ಆದರೆ ಇದನ್ನು ದುರ್ಬಳಕೆ ಮಾಡಿಕೊಳ್ಳುವುದು ತಪ್ಪು. ದುರ್ಬಳಕೆ ತಡೆಯಲು ಕಾನೂನು ಜಾರಿ ಮಾಡುವ ಸಂಬಂಧ ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.
ಪಡಿತರ ಬೇಡ ಎಂದರೆ ಅದನ್ನು ಅಂಗಡಿಯಲ್ಲೇ ಬಿಟ್ಟುಬಿಡಿ. ಅದರಿಂದ ಬಡವರಿಗೆ ಅನುಕೂಲವಾಗುತ್ತದೆ. ಅದು ಬಿಟ್ಟು ಉಚಿತವಾಗಿ ಪಡಿತರ ಪಡೆದು ಅದನ್ನ ಮಾರಾಟ ಮಾಡುವುದು ಸರಿಯಲ್ಲ. ಇಂತಹವರ ಪಡಿತರ ಚೀಟಿಯನ್ನು ರದ್ದು ಮಾಡುವುದಾಗಿಯೂ ಅವರು ಎಚ್ಚರಿಕೆ ನೀಡಿದರು.
ನೋಟಿಸ್ ಜಾರಿ
ಪಡಿತರ ದುರ್ಬಳಕೆ ಮಾಡಿಕೊಂಡಿರುವ 499 ಅಂಗಡಿಗಳಿಗೆ ನೋಟೀಸ್ ನೀಡಲಾಗಿದೆ. 33 ಅಂಗಡಿಗಳ ಲೈಸೆನ್ಸ್ ರದ್ದು ಮಾಡಿದ್ದೇವೆ ಎಂದರು.
ಇನ್ನು ಗುಲ್ಬರ್ಗ, ಮೈಸೂರು ಮತ್ತು ದಾವಣಗೆರೆ ಖಾಸಗಿ ಗೋದಾಮುಗಳ ಮೇಲೆ ನಮ್ಮ ಇಲಾಖೆ ಅಧಿಕಾರಿಗಳು, ಮತ್ತು ಪೊಲೀಸರು ದಾಳಿ ನಡೆಸಳಾಗಿದೆ. ಸಾವಿರಾರು ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಇದು ನಮ್ಮ ಸರಕಾರದ ಅಕ್ಕಿಯೋ ಇಥವಾ ಬೇರೆ ರಾಜ್ಯದ ಅಕ್ಕಿ ಎಂದು ತನಿಖೆ ನಡೆಸಲು, ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥರ ಎಷ್ಟೇ ಪ್ರಭಾವಿಯಾಗಳಾಗಿದ್ದರೂ ಚಿಂತಿಸುವುದಿಲ್ಲ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಕೊರೋನಾ ದೇಶದಲ್ಲಿ ಹೆಚ್ಚುಹಬ್ಬಲು ತಬ್ಲಿಘಿ ಹಾಗೂ ಆಜ್ಮೀರಾಗಳೇ ಕಾರಣ ಎಂದು ದೂರಿದರು.
ಈ ತಬ್ಲಿಘಿ ಹಾಗೂ ಆಜ್ಮೀರಾಗಳಿಗೆ ಜವಾಬ್ದಾರಿ ಇಲ್ಲವೆ. ಕೊರೋನಾ ವರಿಯರ್ಸ್‌ಗಳ ಮೇಲೆ ದಾಳಿ ನಡೆಸುವುದು ಸರಿಯಲ್ಲ. ತಬ್ಲಿಘಿಗಳು 2ನೆಯ ಹಂತದಲ್ಲಿ ಸೋಂಕು ಹಬ್ಬಿಸಲು ಕಳ್ಳಮಾರ್ಗದಲ್ಲಿ ರಾಜ್ಯಕ್ಕೆ ಬರುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಕೊರೋನಾ ಹಬ್ಬಲು ಶೇ.90 ರಷ್ಟು ಮುಸ್ಲಿಂ ಸಮುದಾಯದವರೇ ಕಾರಣ ಎಂದು ಅವರು ಗಂಭೀರವಾಗಿ ಆರೋಪಿಸಿದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post