ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪತ್ರಕರ್ತರ ಮತ್ತು ಬಹಳ ಮುಖ್ಯವಾಗಿ, ಜಿಲ್ಲಾಮಟ್ಟದ ಪತ್ರಿಕೆಗಳ ಸಮಸ್ಯೆ ಗಳ ಪರಿಹಾರಕ್ಕೆ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಸ್ಪಷ್ಟ ಭರವಸೆ ನೀಡಿದರು.
ಅವರು, ಇಂದು ತಮ್ಮ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಸಕಾ೯ರದಿಂದ ಪತ್ರಿಕೆಗಳಿಗೆ ಜಾಹೀರಾತು ವಿತರಣೆ, ಜಾಹೀರಾತು ಬಾಕಿ ಹಾಗೂ ಕೊರೋನಾ ಸಂಕಷ್ಟದಿಂದ ಬಾಧಿತರಾಗಿರುವ ಪತ್ರಕರ್ತರಿಗೆ ನೆರವು ಒದಗಿಸುವ ಬಗ್ಗೆ ಚರ್ಚೆ ನಡೆಸಿದರು.
ಸಂಘದ ಅಧ್ಯಕ್ಷರಾದ ಕೆ.ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ ಅವರು ಪತ್ರಕರ್ತರ, ಪತ್ರಿಕೆಗಳ ಸಮಸ್ಯೆಗಳನ್ನು ಸಮಗ್ರವಾಗಿ ಸಂಸದರಿಗೆ ವಿವರಿಸಿದರು. ಜಾಹೀರಾತು ಕೊರತೆ ಹಾಗೂ ಪತ್ರಿಕೆಗಳಿಗೆ ಬರಬೇಕಾದ ಜಾಹೀರಾತು ಬಾಕಿಯಿಂದಾಗಿ, ಜಿಲ್ಲಾ ಹಾಗೂ ಗ್ರಾಮೀಣ ಪತ್ರಿಕೆಗಳು ಸಂಕಷ್ಟವನ್ನು ಎದುರಿಸುತ್ತಿದ್ದು, ಈ ಕೊರೋನಾ ಸಂದಭ೯ದಲ್ಲಿ ಪತ್ರಕತ೯ರು ಅತಂತ್ರರಾಗುವ ಆತಂಕ ಕಾಡುತ್ತಿದೆ ಎಂದು ಮನವರಿಕೆ ಮಾಡಿಕೊಟ್ಚರು..
ಮಾತಿನ ನಡುವೆ, ವಾರ್ತಾ ಇಲಾಖೆ ಆಯುಕ್ತರಾದ ಸಿದ್ರಾಮಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಂಸದರು, ಜಾಹೀರಾತು ಬಾಕಿ ಹಾಗೂ ಜಾಹೀರಾತು ಕೊರತೆಯ ಸಮಗ್ರ ಮಾಹಿತಿ ಪಡೆದರು. ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕಿರುವುದರಿಂದ ವಿವರಗಳನ್ನು ಸಿದ್ದಪಡಿಸುವಂತೆ ಸೂಚಿಸಿದರು.
ಪತ್ರಕರ್ತರ ಭಾವನೆಗಳನ್ನು ಸರ್ಕಾರ ಅರ್ಥಮಾಡಿಕೊಳ್ಳಲಿದೆ. ಶೀಘ್ರದಲ್ಲೆ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪತ್ರಕರ್ತರ ಮತ್ತು ಪತ್ರಿಕೆಗಳ ಹಿತಕಾಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದಭ೯ದಲ್ಲಿ ಕನಾ೯ಟಕ ರಾಜ್ಯ ಕಾಯ೯ನಿರತ ಪತ್ರಕತ೯ರ ಸಂಘದ ನಿದೆ೯ೕಶಕ ಎನ್. ರವಿಕುಮಾರ್ ಉಪಸ್ಥಿತರಿದ್ದು ಅಗತ್ಯ ಮಾಹಿತಿ ನೀಡಿದರು.
Get in Touch With Us info@kalpa.news Whatsapp: 9481252093






Discussion about this post