ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಶಿವಮೊಗ್ಗ ನಗರ ಉಪವಿಭಾಗ-2ರ ವ್ಯಾಪ್ತಿಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕವರ್ಡ್ ಕಂಡಕ್ಟರ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ವಿ.ವಿ ಕೇಂದ್ರದ ವ್ಯಾಪ್ತಿ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಾದಿಹುದ, ಸೂಳೆ ಬೈಲು, ಊರುಗಡೂರು, ಬಿ.ಬಿ. ಸ್ಟ್ರೀಟ್, ಉಪ್ಪಾರಕೇರಿ, ಸಿನಿಮಾ ರಸ್ತೆ, ಸಿದ್ದಯ್ಯ ರಸ್ತೆ, ಓ.ಟಿ. ರಸ್ತೆ, ಕೆ.ಆರ್. ಪುರಂ, ಜಿಎಸ್’ಕೆ.ಎಂ ರಸ್ತೆ, ಪಂಚವಟಿ ಕಾಲೋನಿ, ಸೀಗೆಹಟ್ಟಿ, ಮುರಾದ್ ನಗರ, ದಿಲ್ಲಿ ದರ್ಬಾರ್, ಹಳೆ ಮಂಡ್ಲಿ, ಬೈಪಾಸ್ ರಸ್ತೆ, ನ್ಯೂ ಮಂಡ್ಲಿ, ಕುರುಬರ ಪಾಳ್ಯ, ಸವಾಹಿಪಾಳ್ಯ, ವಂದನಾ ಟಾಕೀಸ್, ಕುಂಬಾರ ಕೇರಿ, ಆಜಾದ್ ನಗರ, ಕಲ್ಲಪ್ಪನ ಕೇರಿ, ಶಿವಶಂಕರ ರೈಸ್ ಮಿಲ್, ಟಿ.ಎಸ್.ಆರ್. ರಸ್ತೆ, ರವಿವರ್ಮ ಬೀದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಜೂನ್ 4ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಶಿವಮೊಗ್ಗ ನಗರ
ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎ.ಎಫ್-10 ಫೀಡರ್‌ಗೆ ಸಂಬಂಧಿಸಿದಂತೆ ಮಾಡಲ್ ಸಬ್ ಡಿವಿಷನ್ ಯೋಜನೆಯಡಿ ಸ್ಪನ್ ಪೋಲ್ ಅಳವಡಿಕೆ ಕಾರ್ಯವಿರುವುದರಿಂದ ಈ ವ್ಯಾಪ್ತಿಯಲ್ಲಿ ಬರುವ ಜಯನಗರ, ಬಸವನಗುಡಿ, ತಿಲಕ್‌ನಗರ, ಕುವೆಂಪು ರಸ್ತೆ, ಆರ್.ಎಂ.ಆರ್.ರಸ್ತೆ, ರೀಂದ್ರನಗರ, ನಂಜಪ್ಪ ಆಸ್ಪತ್ರೆ ಹತ್ತಿರ, ಜಿಲ್ಲಾ ಪಂಚಾಯತ್ ಆಫೀಸ್ ಹತ್ತಿರ, ಗಾಂಧಿನಗರ, ಚನ್ನಪ್ಪ ಲೇಔಟ್, ದುರ್ಗಿಗುಡಿ, ಪಾರ್ಕ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್-04 ರಂದು ಬೆಳಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಶಿವಮೊಗ್ಗ ಗ್ರಾಮಾಂತರ
ಮಾಚೇನಹಳ್ಳಿ 110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ಲಿಂಕ್‌ಲೈನ್ ಮಾರ್ಗ ರಚಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ವಿವಿ ಕೇಂದ್ರದ ವ್ಯಾಪ್ತಿಯ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ ಮತ್ತು ಜಯಂತಿಗ್ರಾಮ, ಕಿಯೋನಿಕ್ಸ್ ಐ.ಟಿ.ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ. ಕಾಲೋನಿ, ನವುಲೆ, ಬಸವಾಪುರ, ಹಾತಿಕಟ್ಟೆ, ಹೊನ್ನವಿಲೆ, ಅಮರಾವತಿ ಕ್ಯಾಂಪ್, ಶೆಟ್ಟಿಹಳ್ಳಿ, ಹಳೇಶೆಟ್ಟಿಹಳ್ಳಿ, ಗುಡ್ರಕೊಪ್ಪ, ಮತ್ತಿಘಟ್ಟ, ಮಾಳೇನಹಳ್ಳಿ ಹಾಗೂ ಬಂಗಾರಪ್ಪ ಬಡಾವಣೆ, ವೀರಭದ್ರ ಕಾಲೋನಿ, ಹಸೂಡಿ ಫಾರಂ, ಹಸೂಡಿ, ಯಲವಟ್ಟಿ, ಚಿಕ್ಕಮರಡಿ, ಹಕ್ಕಿಪಿಕ್ಕಿ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜೂನ್-04 ರಂದು ಬೆಳಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
Get in Touch With Us info@kalpa.news Whatsapp: 9481252093
Discussion about this post