Saturday, July 5, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

Karnataka Crime News!

August 30, 2016
in ಬೆಂಗಳೂರು ನಗರ
0 0
0
Share on facebookShare on TwitterWhatsapp
Read - 5 minutes

ಬನ್ನಂಜೆ ರಾಜಾ ಸೇರಿ 10 ಆರೋಪಿಗಳು ನ್ಯಾಯಾಲಯಕ್ಕೆ ಹಾಜರು
ಬೆಳಗಾವಿ: ಆ:30; ಉದ್ಯಮಿ ಆರ್.ಎನ್.ನಾಯಕ ಕೊಲೆ ಪ್ರಕರಣ. ಬೆಳಗಾವಿಯ ಕೋಕಾ ನ್ಯಾಯಾಲಯಕ್ಕೆ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 10 ಆರೋಪಿಗಳನ್ನ ಹಾಜರುಪಡಿಸಲಾಯಿತು.
ಪ್ರಕರಣದ 11ನೇ ಆರೋಪಿ ಮಹಮ್ಮದ್ ರಶಬ್ ಶಾಬ್ರುದ್ದಿನ್ @ ಬಾಬು. ನಾನು ಭಟ್ಕಳದವನೆಂದು ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. 5 ನಿಮಿಷ ಕೆಲಸ ಇದೆ ಬಾ ಎಂದು ಕರೆದುಕೊಂಡು ಬಂದ ಕಾರವಾರ ಪೊಲೀಸರು ಇದೀಗ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಕಳೆದ ಎರಡು ವರ್ಷದಿಂದ ಜೈಲಿನಲ್ಲಿದ್ದೀನಿ ಜಾಮೀನು ಸಿಗ್ತಿಲ್ಲ. ಭಟ್ಕಳಕ್ಕೆ ಅಂಕೋಲಾ ಸಮೀಪವಾಗಿದ್ದರಿಂದ ಕಾರವಾರ ಪೊಲೀಸರು ನನ್ನನ್ನು ಸಿಲುಕಿಸಿದ್ದಾರೆ ಎಂದು ಅಳಲನ್ನು ತೋಡಿಕೊಂಡಿದ್ದಾನೆ. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಲಾಗಿದೆ.

ಕಿರಾಣಿ ಬಾಕಿ ಹಣ ಕೇಳಿದ್ದಕ್ಕೆ ಕೊಲೆ!
ಕೊಪ್ಪಳ: ಆ:30: ಕಿರಾಣಿ ಬಾಕಿ ಹಣ ಕೇಳಿದ್ದಕ್ಕೆ ಕೊಲೆ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮದಲ್ಲಿ ನಡೆದಿದೆ.
ಈರಣ್ಣ ರಡ್ಡೇರ್ ( 45) ಕೊಲೆಯಾದ ದುದರ್ೈವಿ. ಕೊಲೆಯಾದ ಈರಣ್ಣ ರಡ್ಡೇರ್ ಅಂಗಡಯಲ್ಲಿ ಹಣಮಂತ ತಳವಾರ ಬಾಕಿ ಉಳಿಸಿಕೊಂಡಿದ್ದ. ಬಾಕಿ ಹಣ ಕೊಡು ಎಂದು ಕೇಳಿದ್ದಕ್ಕೆ ಕೋಪಗೊಂಡ ಹಣಮಂತ ತಳವಾರ, ಕಳೆದ ರಾತ್ರಿ ಈರಣ್ಣ ಮನೆಹೊಕ್ಕು ಕೊಲೆ ಮಾಡಿದ್ದಾನೆ.
ಈ ಕುರಿತು ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಹಣಮಂತ ತಳವಾರನನ್ನು ಬಂಧಿಸಿದ್ದಾರೆ.

ಮಹಿಳೆ ಕತ್ತು ಹಿಸುಕಿ ಕೊಲೆ
ಹಾಸನ: ಆ;30: ಹಳೇಬೀಡು ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.
ಬೇಲೂರು ಪಟ್ಟಣದ ಹೊರ ವಲಯದಲ್ಲಿರುವ ನೀರಾವರಿ ಇಲಾಖೆಯ ಕಚೇರಿ ಸಮೀಪ ಸುಮಾರು 40 ರಿಂದ 45 ವರ್ಷದ ಮಹಿಳೆ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ.
ಕುತ್ತಿಗೆಗೆ ವೈಯರ್ನಿಂದ ಬಿಗಿದು ಹತ್ಯೆ ಮಾಡಿರುವುದು ತಿಳಿದು ಬಂದಿದ್ದು, ಈಕೆ ಯಾರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ತಲೆಗೂ ಕೂಡ ಪೆಟ್ಟು ಬಿದ್ದಿದ್ದು, ಹತ್ತಿರದಲ್ಲೇ ಕಲ್ಲಿನ ಮೇಲೆ ರಕ್ತದ ಕಲೆ ಕಂಡು ಬಂದಿದೆ.
ಮಹಿಳೆಯನ್ನು ಇಲ್ಲಿಗೆ ಕರೆ ತಂದು ದುಷ್ಕಮರ್ಿಗಳು ಹತ್ಯೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈಜಿ ದಡ ಸೇರಲು ಹೋಗಿದ್ದ ವ್ಯಕ್ತಿ ನೀರು ಪಾಲು
ಕಲಬುರಗಿ: ಆ:30: ಭೀಮಾನದಿಯಲ್ಲಿ ಈಜಿ ದಡ ಸೇರಲು ಹೋಗಿದ್ದ ವ್ಯಕ್ತಿ ನೀರು ಪಾಲಾಗಿದ್ದಾನೆ.
ಕಲಬುರಗಿ ಜಿಲ್ಲೆ ಜೇವಗಿ9 ತಾಲೂಕಿನ ನರಿಬೋಳ ಗ್ರಾಮದ ಶ್ರೀಶೈಲ್ (40) ನೀರು ಪಾಲದ ವ್ಯಕ್ತಿ.
ಸ್ನೇಹಿತರೊಡನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣಕ್ಕೆ ಹೋಗಿದ್ದರು,
ಈ ವೇಳೆ ಚಾಮನೂರ ಗ್ರಾಮದ ಭೀಮಾ ನದಿಯ ಹತ್ತಿರ ಬಂದಿದ್ದರು,ದೋಣಿಯಲ್ಲಿ ಜನ ತುಂಬಿದ್ದರಿಂದ ನರಿಬೋಳ ಗ್ರಾಮಕ್ಕೆ ದೋಣಿ ಸಾಗಿತ್ತು.ಈ ವೇಳೆ ದೋಣಿ ಬರೋಕೆ ವಿಳಂಬವಾಗಿದ್ದರಿಂದ ತಾಳ್ಮೆ ಕಳೆದುಕೊಂಡು ನದಿಗೆ ಧುಮುಕಿ, ಮುಳುಗಿ ಸಾವನ್ನಪ್ಪಿದ್ದಾನೆ. ಮೃತದೇಹಕ್ಕಾಗಿ ಪೊಲೀಸ್ ಮತ್ತು ಅಗ್ನಿಶಾಮಕದಿಂದ ತೀವ್ರ ಶೋಧ ಕೈಗೊಳ್ಳಲಾಗುತ್ತಿದ್ದು,
ಮೃತದೇಹವನ್ನ ನದಿಯಲ್ಲಿನ ಮೊಸಳೆಗಳು ತಿಂದು ಹಾಕಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಮೊಸರು ಕುಡಿಕೆ ಒಡೆಯುವ ವೇಳೆ ಆಯತಪ್ಪಿ ಬಿದ್ದು ಯುವಕ ಸಾವು
ಚಿಕ್ಕಮಗಳೂರು: ಆ:30: ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಒಡೆಯುವ ವೇಳೆ ಆಯ ತಪ್ಪಿ ಮೇಲಿನಿಂದ ಬಿದ್ದು ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ.
ಶಿಶಿರ್(23) ಮೃತ ದುದರ್ೆವಿ ಯುವಕ.
ಕಳೆದ 28ರಂದು ಬೆಳ್ತಂಗಡಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 15 ಅಡಿ ಎತ್ತರದಲ್ಲಿರುವ ಮೊಸರು ಕುಡಿಕೆ ಹೊಡೆಯಲೆಂದು ಮೇಲತ್ತಿದ್ದಾನೆ.
ಆಗ ಆಯತಪ್ಪಿ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾನೆ.

ಬಸ್-ಟೆಂಪೊ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು
ಮಂಗಳೂರು: ಆ;30: ಬಸ್ ಮತ್ತು ಟೆಂಪೋ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಇಂದು ಬೆಳಗ್ಗೆ ಪುತ್ತೂರು ತಾಲ್ಲೂಕಿನ ನೀರಕಟ್ಟೆ ಬಳಿ ಸಂಭವಿಸಿದೆ.
ಸುಗಮ ಟ್ರಾವೆಲ್ಸ್ನ ಖಾಸಗಿ ಬಸ್ ತಿರುವಿನಲ್ಲಿ ವೇಗವಾಗಿ ಬಂದು ಎದುರಿಗೆ ಬರುತ್ತಿದ್ದ ಟೆಂಪೋಗೆ ಗುದ್ದಿತು. ಇದರಿಂದಾಗಿ ಅದರಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯಲ್ಲಿ ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.
ಪುತ್ತೂರು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನವನ್ನು ತೆರವುಗೊಳಿಸಿ ಬಸ್ ಚಾಲಕನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಲುವೆಗೆ ಜಾರಿ ಬಿದ್ದು ಯುವಕ ಸಾವು
ಬಳ್ಳಾರಿ: ಆ;30: ಆಕಸ್ಮಿಕವಾಗಿ ಕಾಲುವೆಯಲ್ಲಿ ಯುವಕ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ತೋರಣಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರದ ಮೂಲದ ಆಮಿಯವರ ನಿವಾಸಿ ಕೃಷ್ಣ(30)ಮೃತಪಟ್ಟ ದುದರ್ೆವಿ.
ಈತ ಜಿಂದಾಲ್ನಲ್ಲಿ ವೆಲ್ಡರ್ ಕೆಲಸ ಮಾಡುತ್ತಿದ್ದ. ತೋರಣಗಲ್ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ.
ಇಂದು ಈತನ ಶವ ಹೊರತೆಗೆಯಲಾಗಿದ್ದು, ಸಕರ್ಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಯಿತು.

ಬ್ಯಾನರ್ ಕಟ್ಟುವ ವಿಚಾರದಲ್ಲಿ ಹೊಡೆದಾಟ: ಯುವಕ ಸಾವು
ಬೆಂಗಳೂರು: ಆ;30: ಬ್ಯಾನರ್ ಕಟ್ಟುವ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟ ಯುವಕನೊಬ್ಬನ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ರಾತ್ರಿ ಏರ್ಪೋಟರ್್(ಹಳೇ) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಮಂಗಳೂರಿನ, ನಗರದ ತೂಬರಹಳ್ಳಿ ನಿವಾಸಿ ನಶಾಲ್(20) ಮೃತಪಟ್ಟ ಯುವಕ ಎಂದು ಪೊಲೀಸರು ತಿಳಿಸಿದ್ದು, ಈತ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದನು.
ರಾತ್ರಿ 10.30ರ ಸಂದರ್ಭದಲ್ಲಿ ಯುವಕರ ಗುಂಪೊಂದು ಗಣಪತಿ ಹಬ್ಬದ ನಿಮಿತ್ತ ಬ್ಯಾನರ್ ಕಟ್ಟುತ್ತಿದ್ದಾಗ ಈ ಮಾರ್ಗದಲ್ಲಿ ಹೋಗುತ್ತಿದ್ದ ಮತ್ತೊಂದು ಗುಂಪು ಇವರೊಂದಿಗೆ ಜಗಳ ವಾಡಿದೆ.
ಈ ವೇಳೆ ಮಾತಿನ ಚಕಮಕಿ ನಡೆದು ಎರಡು ಗುಂಪುಗಳ ಯುವಕರು ಹೊಡೆದಾಡಿಕೊಳ್ಳುತ್ತಿದ್ದಾಗ ಸ್ಥಳೀಯರು ಎರಡೂ ಕಡೆಯವರನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ.
ಒಂದು ಗುಂಪಿನ ಯುವಕರು ಮುರಗೇಶ್ಪಾಳ್ಯದ ಎಸ್.ಎಸ್.ಲೇಔಟ್ನ ಓಲಾ ಕ್ಯಾಬ್ ಪಾಕರ್್ ಬಳಿ ರಾತ್ರಿ 12 ಗಂಟೆಯಲ್ಲಿ ಬಂದಿದ್ದಾರೆ. ಈ ವಿಷಯ ತಿಳಿದ ಮತ್ತೊಂದು ಗುಂಪಿನ ಯುವಕರು ಹಿಂಬಾಲಿಸಿಕೊಂಡು ಬರುತ್ತಿದ್ದಾಗ ಇವರಿಂದ ತಪ್ಪಿಸಿಕೊಳ್ಳಲು ನಿಮರ್ಾಣ ಹಂತದ ಕಟ್ಟಡದ ಬಳಿ ಯುವಕರ ಗುಂಪು ಹೋಗಿದೆ.
ಈ ವೇಳೆ ಎರಡೂ ಗುಂಪುಗಳ ನಡುವೆ ಹೊಡೆದಾಟ ನಡೆದಾಗ ತಪ್ಪಿಸಿಕೊಳ್ಳಲು ನಶಾಲ್ ಎಂಬ ಯುವಕ ಪೈಪ್ಸಹಾಯದಿಂದ ಕಟ್ಟಡದಿಂದ ಇಳಿಯುತ್ತಿದ್ದಾಗ ಪೈಪ್ ಮುರಿದ ಪರಿಣಾಮ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಶವವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಹೊಡೆದಾಟದ ವೇಳೆ ನಾಲ್ವರು ಗಾಯಗೊಂಡಿದ್ದು, ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ.
ಎದುರಾಳಿ ಗುಂಪು ನಮಗೆ ಹೊಡೆದು ಕೆಳಕ್ಕೆ ತಳ್ಳಿದ್ದರಿಂದ ನಶಾಲ್ ಸಾವನ್ನಪ್ಪಿದ್ದಾನೆ ಎಂದು ಸ್ನೇಹಿತರು ಏರ್ಪೋಟರ್್ ಠಾಣೆಗೆ ದೂರು ನೀಡಿದ್ದಾರೆ.
ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಯುವಕರ ಗುಂಪಿಗಾಗಿ ಶೋಧ ಕೈಗೊಂಡಿದ್ದಾರೆ.

3ನೇ ಮದುವೆಗೆ ಸಿದ್ದನಿದ್ದವನು ಪೊಲೀಸರ ವಶಕ್ಕೆ!
ತುಮಕೂರು: ಆ;30: ಈ ಮೊದಲೇ ಎರಡು ಮದುವೆಯಾಗಿರುವುದನ್ನು ಮುಚ್ಚಿಟ್ಟು ಮತ್ತೊಂದು ಮದುವೆ ಮಾಡಿಕೊಳ್ಳಲು ಯತ್ನಿಸಿದ್ದ ಭೂಪ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಶಾಂತಿನಗರದ ಸಾಯಿಬಾಬಾ ಟೆಂಪಲ್ ಸಮೀಪದ ಯುವತಿಯನ್ನು ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಬಳಿಯ ಅಂಕಾಪುರದ ನಿವಾಸಿ ಮಹಮ್ಮದ್ ಫೀರ್ ಬಂಧಿತ ಆರೋಪಿ.
ಈತ ಎರಡು ಮದುವೆಯಾಗಿರುವುದನ್ನು ಮುಚ್ಚಿಟ್ಟು ಇಂದು ವಕ್ಫ್ಬೋಡರ್್ ಕಚೇರಿ ಆವರಣದಲ್ಲಿರುವ ಹಜರತ್ ಮದರಸ ಕಲ್ಯಾಣ ಮಂಟಪದಲ್ಲಿ ಮತ್ತೊಂದು ಮದುವೆ ಮಾಡಿಕೊಳ್ಳಲು ದಿನಾಂಕ ನಿಶ್ಚಯವಾಗಿತ್ತು.
ಈ ನಡುವೆ ಗಂಡಿನ ಮನೆಯವರು ರಾತ್ರಿ ಯುವತಿಯ ಅಣ್ಣನಿಗೆ ದಾದಾಫೀರ್ ಎಂಬಾತ ಕರೆ ಮಾಡಿ ಕಲ್ಯಾಣಮಂಪಟಕ್ಕೆ ಬರುವ ಮಾರ್ಗಮಧ್ಯೆ ನಮ್ಮ ವಾಹನ ಪಾದಚಾರಿಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ಈಗ ಬಂದರೆ ಪೊಲೀಸರು ನಮ್ಮನ್ನು ಬಂಧಿಸುತ್ತಾರೆ. ಮದುವೆಯನ್ನು ಇನ್ನೆರಡು ದಿನ ಮುಂದಕ್ಕೆ ಹಾಕಿ ಎಂದು ಹೇಳಿ ದೂರವಾಣಿಯನ್ನು ಸ್ಥಗಿತಗೊಳಿಸಿದ್ದಾನೆ.
ಇದರಿಂದ ಆತಂಕಗೊಂಡ ಯುವತಿ ಅಣ್ಣ ಮನೆಯವರಿಗೆ ವಿಷಯ ತಿಳಿಸಿ ಕುಟುಂಬದವರೊಂದಿಗೆ ಅಂಕಾಪುರಕ್ಕೆ ತೆರಳಿದಾಗ ಗಂಡಿನ ಮನೆಯಲ್ಲಿ ಯಾವುದೇ ಮದುವೆಯ ಸಿದ್ಧತೆಯಾಗಲಿ, ನೆಂಟರಿಷ್ಟರಾಗಲಿ ಕಂಡುಬರಲಿಲ್ಲ, ಚಪ್ಪರವನ್ನೂ ಹಾಕಿರಲಿಲ್ಲ. ಇದನ್ನು ಗಮನಿಸಿ ಆತಂಕಗೊಂಡ ಯುವತಿ ಮನೆಯವರು ಸ್ಥಳೀಯರನ್ನು ವಿಚಾರಿಸಿದಾಗ ಮಹಮ್ಮದ್ ಫೀರ್ ಈಗಾಗಲೇ ಮಧುಗಿರಿಯ ಕೊಡಿಗೇನಹಳ್ಳಿ ಗ್ರಾಮದ ನಿವಾಸಿಯನ್ನು ಮದುವೆಯಾಗಿದ್ದು, ಈ ದಂಪತಿಗೆ ಎಂಟು ವರ್ಷದ ಮಗುವಿದೆ. ಅಲ್ಲದೆ, ಈತ ಆಂಧ್ರ ಪ್ರದೇಶದ ಗುಂಟೂರು ಬಳಿಯೂ ಯುವತಿಯೊಬ್ಬಳನ್ನು ಮದುವೆಯಾಗಿದ್ದಾನೆಂಬ ವಿಷಯ ಸಹ ಕೇಳಿಬಂದಿದೆ ಎಂದು ತಿಳಿಸಿದ್ದಾರೆ.
ಈ ವಿಷಯ ಕೇಳುತ್ತಿದ್ದಂತೆ ಯುವತಿ ಮನೆಯವರಿಗೆ ತಾವು ಮೋಸ ಹೋಗಿದ್ದಾಗಿ ತಿಳಿದು ಚೇಳೂರು ಪೊಲೀಸರಿಗೆ ದೂರು ನೀಡಿ ತಮಗೆ ಮೋಸ ಮಾಡಿದ ವ್ಯಕ್ತಿಯನ್ನು ಹುಡುಕಲಾರಂಭಿಸಿದ್ದಾರೆ.
ವಂಚಕ ಆತನ ಅಣ್ಣ ದಾದಾಫೀರ್ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾನೆಂಬ ವಿಷಯ ತಿಳಿದು ಹುಡುಗಿಯ ಮನೆಯವರು ಚೇಳೂರಿನ ಜನತಾ ಕಾಲೋನಿಗೆ ತೆರಳಿ ಸ್ಥಳೀಯರನ್ನು ವಿಚಾರಿಸುತ್ತಿದ್ದಾಗ ಎದುರಿಗೆ ಸಿಕ್ಕ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಯಾಣಿಕರ ಮೊಬೈಲ್ ದೋಚುತ್ತಿದ್ದವನ ಬಂಧನ
ಬೆಂಗಳೂರು: ಆ;30: ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿರುವ ಬಸ್ಗಳನ್ನು ಹತ್ತಿ ಅವರ ಮೊಬೈಲ್ಗಳನ್ನು ದೋಚುತ್ತಿದ್ದ ಆರೋಪಿಯನ್ನು ಜಾಲಹಳ್ಳಿ ಪೊಲೀಸರು ಬಂಧಿಸಿ 2.35 ಲಕ್ಷ ರೂ. ಬೆಲೆಯ 28 ಮೊಬೈಲ್ ಹಾಗೂ 150 ಸಿಮ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲತಃ ಶಿವಮೊಗ್ಗದ ಗೋಪಿ (20) ಬಂಧಿತ ಆರೋಪಿಯಾಗಿದ್ದು, ಈತ ಕೆಆರ್ ಪುರಂನಲ್ಲಿ ವಾಸವಾಗಿದ್ದನು. ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿರುವ ಬಸ್ಗಳನ್ನೇ ಟಾಗರ್ೆಟ್ ಮಾಡಿ ಮಹಿಳೆಯರ ಬ್ಯಾಗ್ಗಳಿಂದ, ಯುವಕರ ಜೇಬುಗಳಿಂದ ಮೊಬೈಲ್ಗಳನ್ನು ದೋಚುತ್ತಿದ್ದನು.
ಆ.26ರಂದು ಜಾಲಹಳ್ಳಿ ವ್ಯಾಪ್ತಿಯಲ್ಲಿ ಪೊಲೀಸರು ಹಳೆ ಆರೋಪಿಗಳನ್ನು ಪತ್ತೆ ಮಾಡುತ್ತಿದ್ದಾಗ ಬಿಇಎಲ್ ಅಂಡರ್ಪಾಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಹೋಗುತ್ತಿದ್ದ ಈತನನ್ನು ತಡೆದು ಬ್ಯಾಗನ್ನು ಪರಿಶೀಲಿಸಿದಾಗ ವಿವಿಧ ಕಂಪೆನಿಯ ಮೊಬೈಲ್ಗಳು ಇದ್ದುದು ಬೆಳಕಿಗೆ ಬಂದಿದೆ.
ಆರೋಪಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದಾಗ, ಬಸ್ಗಳಲ್ಲಿ ಮೊಬೈಲ್ಗಳನ್ನು ಎಗರಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಜಾಲಹಳ್ಳಿ ಠಾಣೆ ಇನ್ಸ್ಪೆಕ್ಟರ್ ಮುರುಗೇಂದ್ರಯ್ಯ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಗರೇಟ್ ವ್ಯಾಪಾರಿ ಬೆದರಿಸಿ ಹಣ ಕಸಿದು ಪರಾರಿ
ಬೆಂಗಳೂರು: ಆ;30: ನಡೆದು ಹೋಗುತ್ತಿದ್ದ ಸಿಗರೇಟ್ ವ್ಯಾಪಾರಿಯನ್ನು ಎರಡು ಬೈಕ್ಗಳಲ್ಲಿ ಹಿಂಬಾಲಿಸಿದ ದರೋಡೆಕೋರರು ಚಾಕು ತೋರಿಸಿ ಬೆದರಿಸಿ 35 ಸಾವಿರ ಹಣ ಕಸಿದು ಪರಾರಿಯಾಗಿರುವ ಘಟನೆ ನಂದಿನಿಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿಗರೇಟ್ ವ್ಯಾಪಾರಿ ತಿಪ್ಪೇಸ್ವಾಮಿ ಎಂಬುವರು ನಿನ್ನೆ ಮಧ್ಯಾಹ್ನ 3.45ರಲ್ಲಿ ಕಂಠೀರವ ಸ್ಟುಡಿಯೋ ಬಳಿ ನಡೆದು ಹೋಗುತ್ತಿದ್ದಾಗ ಎರಡು ಬೈಕ್ಗಳಲ್ಲಿ ನಾಲ್ವರು ದರೋಡೆಕೋರರು ಇವರನ್ನು ಹಿಂಬಾಲಿಸಿ ಅಡ್ಡಗಟ್ಟಿ 35 ಸಾವಿರ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ನಂದಿನಿಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಿಟಕಿ ಮೂಲಕ ಬೀಗ ಚಿಲಕ ತೆಗೆದು ಕಳ್ಳತನ
ಬೆಂಗಳೂರು: ಆ;30: ಮನೆಯ ಕಿಟಕಿ ಮೂಲಕ ಕೈ ತೂರಿಸಿ ಬಾಗಿಲ ಚಿಲಕ ತೆರೆದು ಒಳನುಗ್ಗಿದ ಚಾಲಾಕಿ ಕಳ್ಳರು ಬೆಳ್ಳಿ ಉಂಗುರ ಹಾಗೂ ಸರ ಕಳ್ಳತನ ಮಾಡಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಣಪತಿಪುರ ನಿವಾಸಿ ನಾಗಮಣಿ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.
ಇಂದು ಬೆಳಗಿನ ಜಾವ 2.45 ರಿಂದ 3 ಗಂಟೆ ಮಧ್ಯೆ ಕಳ್ಳರು ಈ ಕೃತ್ಯವೆಸಗಿದ್ದು, ಬೆಳಗ್ಗೆ ಎದ್ದಾಗಲೇ ಮನೆಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಕಳುವಾಗಿರುವ ಉಂಗುರ ಮತ್ತು ಸರದ ಮೌಲ್ಯ 40 ಸಾವಿರ ಎಂದು ಅಂದಾಜಿಸಲಾಗಿದೆ.
ಸುಬ್ರಹ್ಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇಬ್ಬರು ಬಾಲಕಿಯರು ನಾಪತ್ತೆ
ಮಂಡ್ಯ: ಆ;30: ಜಿಲ್ಲೆಯ ಮರಿಗೌಡ ಬಡಾವಣೆಯಲ್ಲಿರುವ ಬಾಲಕಿಯರ ಬಾಲಮಂದಿರದಿಂದ ಇಬ್ಬರು ಬಾಲಕಿಯರು ನಾಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮದ್ದೂರು ಪಟ್ಟಣದ ವಿವೇಕಾನಂದನಗರದ ಕಾವ್ಯಾ (16), ಕೆಆರ್ ಪೇಟೆ ತಾಲೂಕಿನ ಪುರ ಗ್ರಾಮದ ಚೈತ್ರಾ (17) ಕಾಣೆಯಾದ ಬಾಲಕಿಯರು.
ಆ.27ರಂದು ಬಾಲಮಂದಿರದಿಂದ ಬೆಳಗ್ಗೆ ಹೊರಗಡೆ ಹೋಗಿದ್ದಾಗ ನಾಪತ್ತೆಯಾಗಿದ್ದಾರೆ ಎಂದು ಬಾಲಮಂದಿರ ಅಧೀಕ್ಷಕಿ ನಾಗರತ್ನಮ್ಮ ಹೇಳಿದ್ದಾರೆ.
ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗುಂಪು ಘರ್ಷಣೆ: ಮನೆಗಳು ಜಖಂ
ಸವದತ್ತಿ: ಆ;30: ಕ್ಷುಲ್ಲಕ ಕಾರಣಕ್ಕೆ ತಾಲೂಕಿನ ಯಡ್ರಾವಿ ಗ್ರಾಮದಲ್ಲಿ ಗುಂಪು ಘರ್ಷಣೆ ಸಂಭವಿಸಿ ಹಲವಾರು ಮನೆಗಳು ಜಖಂಗೊಂಡಿವೆ.
ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ ಮಾರಾಮಾರಿ ನಡೆದಿದ್ದು, ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ. ಈ ನಡುವೆ ಕಲ್ಲು ತೂರಾಟ ನಡೆದಿದ್ದರಿಂದ ಹಲವಾರು ಮನೆಗಳು ಜಖಂಗೊಂಡಿವೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಘಟನೆ ಸಂಬಂಧ 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಚಿಂಚನಸೂರು ಆಪ್ತ ಸಹಾಯಕ ಎಸಿಬಿ ಬಲೆಗೆ
ಯಾದಗಿರಿ: ಆ;30: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರ ಆಪ್ತ ಸಹಾಯಕನೊಬ್ಬ ಲಂಚ ಪಡೆಯುವ ವೇಳೆ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದಿದ್ದಾನೆ.
ಯಾದಗಿರಿ ವಸತಿಯೋಜನೆಯಡಿ ಮನೆ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಬಂದ ದೂರನ್ನಧರಿಸಿ ದಾಳಿ ನಡೆಸಿದ ಎಸಿಬಿ ಚಿಂಚನಸೂರ್ ಅವರ ಪಿಎ ಆಶಾಪ್ಪ ಗಜಾಕರ್ೊಟ ಅವರನ್ನು ಬಲೆಗೆ ಕೆಡವಿದೆ.
ವಸತಿಯೋಜನೆಯಡಿಯ ಮನೆ ಕೊಡಿಸುವುದಾಗಿ ಒಂದು ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿದ ಎಸಿಬಿ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಸಕರ್ಾರಿ ಮನೆ ಹಂಚಿಕೆಯಲ್ಲೂ ಇವರ ಮೇಲೆ ಲಂಚದ ಗಂಭೀರ ಆರೋಪ ಇತ್ತು. ಕಳೆದ ಸುಮಾರು ದಿನಗಳಿಂದ ಎಸಿಬಿ ತಂಡ ಇವರ ಮೇಲೆ ನಿಗಾ ವಹಿಸಿತ್ತು.
ಯಾದಗಿರಿಯಲ್ಲಿ ನೂರಾರು ಸಕರ್ಾರಿ ಮನೆಗಳನ್ನು ಬಡವರಿಗೆ ಹಂಚುವ ಸಂಬಂಧ ಪ್ರತಿಯೊಬ್ಬರಿಂದಲೂ ಈತ ಒಂದು ಲಕ್ಷ ರೂ.ಗಳನ್ನು ನಿಗದಿ ಮಾಡಿ ವಸೂಲಿ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು.

Previous Post

ರಾಯಣ್ಣ ಬ್ರಿಗೇಡ್ ನಿಂದ ಸಿಎಂ ಗೆ ನಡುಕ: ಈಶ್ವರಪ್ಪ ಟಾಂಗ್!

Next Post

ಗಣಿ ಧಣಿಯ ಮಗಳಿಗೆ ಮದುವೆ ಫಿಕ್ಸ್!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗಣಿ ಧಣಿಯ ಮಗಳಿಗೆ ಮದುವೆ ಫಿಕ್ಸ್!

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025

134ನೇ ಫುಟ್ಬಾಲ್ ದುರಂದ್ ಕಪ್’ಗೆ ರಾಷ್ಟ್ರಪತಿಗಳಿಂದ ಚಾಲನೆ | ಏನಿದರ ವಿಶೇಷ?

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!