ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಚಿತ್ರರಸಿಕರ ಮನದಲ್ಲಿ ಹೃದಯ ಸಾಮ್ರಾಜ್ಞನಾಗಿ ನೆಲೆಸಿದ್ದ ಸಭ್ಯ ವ್ಯಕ್ತಿತ್ವದ ನಟ ಚಿರಂಜೀವಿ ಸರ್ಜಾ.
ಅಕಾಲದಲ್ಲೇ ಬಾರದ ಲೋಕಕ್ಕೆ ಪಯಣಿಸಿದ ಅನಿರೀಕ್ಷಿತ ಘಟನೆ ಆಘಾತ ಹಾಗೂ ನೋವು ಚಿತ್ರರಂಗ ಮಾತ್ರವಲ್ಲ, ಇಡಿಯ ಕರ್ನಾಟಕದ ಜನರಲ್ಲಿದೆ. ನಟಿಸಿದ್ದ 22 ಚಿತ್ರಗಳೇ ಆದರೂ ಚಿತ್ರ ರಸಿಕರ ಮನದಲ್ಲಿ ಅಭಿಮಾನದ ಸೌಧ ಕಟ್ಟಿಕೊಳ್ಳುವಲ್ಲಿ ಚಿರು ಯಶಸ್ವಿಯಾಗಿದ್ದರು. ಚಿತ್ರರಂಗದ ಮಟ್ಟಿಗೆ ನೋಡುವುದಾದರೆ ಅವರು ಅಜಾತಶತ್ರು ಮಾತ್ರವಲ್ಲ ಮಗುವಿನ ಮನಸ್ಸಿನ ಮುಗ್ದ ವ್ಯಕ್ತಿತ್ವದ ಸ್ಪುರದ್ರೂಪಿ ನಟ. ಇಂತಹ ನಟನನ್ನು ಕಳೆದುಕೊಂಡ ನೋವು ಮಾತ್ರ ಎಂದೆಂದಿಗೂ ಮಾಸುವುದಿಲ್ಲ.
ಇಂತಹ ಪ್ರತಿಭಾನ್ವಿತ ನಟ ಚಿರು ಸರ್ಜಾ ಹಾಗೂ ಭಾನುವಾರ ಆತ್ಮಹತ್ಯೆಗೆ ಶರಣಾದ ನಟ ಹಾಗೂ ಡ್ಯಾನ್ಸರ್ ಸುಶಾಂತ್ ಸಿಂಗ್ ರಜಪೂತ್ ಅವರುಗಳಿಗೆ ಗೂಗಲ್ ಇಂಡಿಯಾ ಇಂದು ಗೌರವ ಸೂಚಿಸಿದೆ.
The past few days have been difficult as we witnessed the loss of two incredible performers. This is a tribute to the stories and magic they shared with us, that continue to live on.
RIP #SushantSinghRajput and #ChiranjeeviSarja pic.twitter.com/dfKukptE0b
— Google India (@GoogleIndia) June 15, 2020
ಗೂಗಲ್ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿರು ಸರ್ಜಾ ಹಾಗೂ ಸುಶಾಂತ್ ಫೋಟೋ ಶೇರ್ ಮಾಡಿ, ಕಳೆದ ಕೆಲವು ದಿನಗಳ ಅವಧಿಯಲ್ಲಿ ನಾವು ಇಬ್ಬರು ಅಪ್ರತಿಮ ನಟರನ್ನು ಕಳೆದುಕೊಂಡಿರುವ ದಿನಗಳಿಗೆ ಸಾಕ್ಷಿಯಾಗಿದ್ದೇವೆ. ಇವರಿಬ್ಬರೂ ನಮ್ಮೊಂದಿಗೆ ಹಂಚಿಕೊಂಡ ಕಥೆಗಳು ಹಾಗೂ ಮೋಡಿ ಮಾಡಿದ ಮ್ಯಾಜಿಕ್’ಗಳಿಗೆ ಅಂದರೆ ಕಲಾ ಸೇವೆಗೆ ಇದು ನಮ್ಮ ಗೌರವ. ಇಬ್ಬರೂ ನಮ್ಮೊಂದಿಗೆ ಎಂದಿಗೂ ಶಾಶ್ವತವಾಗಿರುತ್ತಾರೆ ಎಂದು ಗೌರವ ಸೂಚಿಸಿದೆ.
Get In Touch With Us info@kalpa.news Whatsapp: 9481252093
Discussion about this post