ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಲ್ಲಿ ಭಾನುವಾರ ಮೂವರಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ.
ಕನಕ ನಗರದಲ್ಲಿ 62 ವರ್ಷದ ಮಹಿಳೆಯಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಕಳೆದ ವಾರ ಈಕೆಯ ಮಗಳಿಗೆ ಪಾಸಿಟಿವ್ ಬಂದಿತ್ತು. ಈಗಾಗಲೇ ಈಕೆಯ ನಿವಸದ ಬೀದಿ ಸೀಲ್‌ಡೌನ್ ಆಗಿದೆ.
ತಾಲೂಕಿನ ಹಳೇಬುಳ್ಳಪುರದ ನಿವಾಸಿಯಾಗಿರುವ ಭದ್ರಾವತಿ ಹಾಲಪ್ಪ ವೃತ್ತದ ಬಳಿಯಿರುವ ಸಿಂಡಿಕೇಟ್ ಬ್ಯಾಂಕಿನ ಉದ್ಯೋಗಿ 23 ವರ್ಷದ ಯುವಕನಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇವರ ನಿವಾಸದ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಇನ್ನೊಬ್ಬ ಸೋಂಕಿತ ವಿವರಗಳು ಅಧಿಕೃತ ಮೂಲಗಳಿಂದ ತಿಳಿದುಬಂದಿಲ್ಲ.
ಸೋಂಕಿತರ ನಿವಾಸದ ಸ್ಥಳಕ್ಕೆ ನಗರಸಭೆ ಆಯುಕ್ತ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಆರೋಗ್ಯ ಇಲಾಖೆ ಸಿಬ್ಬಂದಿ ನೀಲೇಶ್ ರಾಜ್ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ, ಸೋಂಕಿತರಿಬ್ಬರನ್ನೂ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿ ಸೋಂಕಿತರ ನಿವಾಸದ ಬೀದಿಗಳನ್ನು ಸೀಲ್ ಡೌನ್ ಮಾಡಿದರು.
Get In Touch With Us info@kalpa.news Whatsapp: 9481252093
Discussion about this post