ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಹತ್ವದ ಬೆಳವಣಿಗೆಯೊಂದರಲ್ಲಿ ಹಳೇ ಶಿವಮೊಗ್ಗ ಭಾಗದಲ್ಲಿ ವಿಧಿಸಲಾಗಿದ್ದ ಸೀಲ್ ಡೌನ್ ಅನ್ನು ತೆರವುಗೊಳಿಸಲಾಗಿದೆ.
ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ತುರ್ತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಸೀಲ್ ಡೌನ್ ತೆರವುಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ನೂತನ ಆದೇಶದಂತೆ ಶಿವಮೊಗ್ಗ ನಗರದ ಯಾವುದೇ ಭಾಗದಲ್ಲಿ ಸೀಲ್ ಡೌನ್ ಇರುವುದಿಲ್ಲ ಎಂದು ತಿಳಿದುಬಂದಿದೆ.
ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲಹೆ ನೀಡಿದ ರಾಯಲ್ ಪ್ರಿಂಟರ್ರ್ಸ್ ಮಾಧವಾಚಾರ್ ಅವರು, ಈ ಭಾಗದ ಜನರ ಮನವಿಯನ್ನು ವಿವರಿಸಿದರು.
ಸಚಿವರೊಂದಿಗೆ ಮಾತನಾಡಿದ ಕೆಲವು ಸಲಹೆಗಳನ್ನು ನೀಡಿದ ಅವರು, ಗಾಂಧಿ ಬಜಾರಿನಂತಹ ಗುಂಪು ಸೇರುವ ಸ್ಥಳಗಳನ್ನು ಗುರುತಿಸಿ, ಮಾಸ್ಕ್ ಬಳಕೆ, ಸ್ಯಾನಿಟೈಸೆರ್’ಗಳ ಬಳಕೆ, ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯ ಮಾಡುವುದು, ಕಾನೂನು ಮೀರುವವರಿಗೆ ಸ್ಥಳದಲ್ಲೇ ದಂಡ ವಿಧಿಸಿ.ವ್ಯವಹಾರದ ಸಮಯವನ್ನು ಇಂತಹ ಜನನಿಬಿಡ ಸ್ಥಳಗಳಲ್ಲಿ ಮಾತ್ರ ಕಡಿಮೆಗೊಳಿಸುವುದು ಪರಿಹಾರ ಆಗಬಲ್ಲದು. ಸೋಂಕಿತರ ಮನೆಯನ್ನು ಮಾತ್ರ ಸೀಲ್ ಡೌನ್ ಮಾಡಿ, ಒಬ್ಬರು ಹೋಮ್ ಗಾರ್ಡನ್ನು ನೇಮಿಸಿದರೂ ಸಾಕು. ಸಾಧಾರಣ ಜನ ಬದುಕಲು ಬಿಡಿ. ಜೀವ-ಜೀವನ ಎರಡೂ ಮುಖ್ಯ. ಈಗ ಜಾರಿಗೆ ತಂದಿರುವ 7 ದಿನಗಳ ಸೀಲ್ಡೌನ್ 21 ದಿನ ಮುಂದುವರೆಸಿದರೂ ಜನರ ಜೀವನ ಹಾಳಾಗಬಹುದೇ ಹೊರತು… ಇದರಿಂದ ಕೊರೊನಾ ಸಾಯುವುದಿಲ್ಲ ಎಂದಿದ್ದಾರೆ.
ಹಳೇ ಶಿವಮೊಗ್ಗ ಭಾಗದ ಜನರ ಮನವಿಯನ್ನು ಪುರಸ್ಕರಿಸಿ ಸೀಲ್ ಡೌನ್ ಅನ್ನು ತೆರವುಗೊಳಿಸಿರುವ ಸಚಿವ ಕೆ.ಎಸ್. ಈಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೇರಿದಂತೆ ಎಲ್ಲರಿಗೂ ನಾಗರಿಕರ ಪರವಾಗಿ ಮಾಧವಾಚಾರ್ ಧನ್ಯವಾದ ಅರ್ಪಿಸಿದ್ದಾರೆ.
ಇಡಿಯ ಹಳೆಯ ಶಿವಮೊಗ್ಗ ಭಾಗವನ್ನು ಸೀಲ್ ಡೌನ್ ಮಾಡಿರುವುದರಿಂದ ನಾಗರಿಕರಿಗೆ ತೊಂದರೆಯಾಗುತ್ತಿರುವ ಕುರಿತಾಗಿ ಜನಾಭಿಪ್ರಾಯ ಸಂಗ್ರಹಿಸಿ, ಅದನ್ನು ಪ್ರಕಟಿಸುವ ಮೂಲಕ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯುವ ಕೆಲಸವನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಇಂದು ಮಾಡಿತ್ತು.
Get In Touch With Us info@kalpa.news Whatsapp: 9481252093
Discussion about this post